ಬೆಂಗಳೂರು: ರಾಜ್ಯ ಕಾಂಗ್ರೆಸ್ ಸರ್ಕಾರದಲ್ಲಿ ಆರೋಗ್ಯ ಇಲಾಖೆಯ ವೈಫಲ್ಯಗಳ ಕುರಿತ “ಆರೋಗ್ಯ ಇಲಾಖೆಯೋ ಸಾವಿನ ಕುಣಿಗೆಯೋ’ ಶೀರ್ಷಿಕೆಯ ಆರೋಪಗಳ ಕೈಪಿಡಿಯನ್ನು ಬಿಜೆಪಿ ಬಿಡುಗಡೆ ಮಾಡಿದೆ.
ಬಿಜೆಪಿ ರಾಜ್ಯ ಉಸ್ತುವಾರಿ ಮುರಳೀಧರ್‌ರಾವ್ ಕೈಪಿಡಿ ಬಿಡುಗಡೆ ಮಾಡಿ, ಆರೋಗ್ಯ ಇಲಾಖೆ¿ಲ್ಲಿ$É 21,370 ಹುದ್ದೆಗಳು ಖಾಲಿ ಉಳಿದಿವೆ. ನಾಲ್ಕೂವರೆ ವರ್ಷದಲ್ಲಿ 44,630 ನವಜಾತ ಶಿಶುಗಳ ಮರಣವಾಗಿದೆ. ಅಪೌಷ್ಠಿಕತೆಯಿಂದ ಸಾವನ್ನಪ್ಪುವ ಮಕ್ಕಳ ಸಂಖ್ಯೆ ಹೆಚ್ಚಾಗಿದೆ. ಇದು ಕಾಂಗ್ರೆಸ್ ಸರ್ಕಾರದ ವೈಫಲ್ಯಕ್ಕೆ ಸಾಕ್ಷಿ ಎಂದು ಹೇಳಿದರು.
ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ, ಕೊಳಚೆ ಪ್ರದೇಶಗಳು, ಭ್ರಷ್ಟಾಚಾರ, ಚುನಾವಣೆ ಮುಂಚೆ ನೀಡಿದ್ದ ಭರವಸೆಗಳು ಜಾರಿಗೆ ತರುವಲ್ಲಿ ಕಾಂಗ್ರೆಸ್‌ನ ವೈಫಲ್ಯದ ಬಗ್ಗೆ ಆರು ಜಾರ್ಜ್‌ಶೀಟ್ ಬಿಡುಗಡೆ ಮಾಡಲಾಗಿತ್ತು. ಆದರೆ, ಇದಕ್ಕೆ ಕಾಂಗ್ರೆಸ್ ಉತ್ತರ ಕೊಡದೆ ಪಲಾಯನ ಮಾಡುತ್ತಿದೆ ಎಂದು ತಿಳಿಸಿದರು.
ಅಭಿವೃದ್ಧಿ ಕಾಂಗ್ರೆಸ್‌ನವರಿಗೆ ವಿಷಯವೇ ಅಲ್ಲ. ಕೇವಲ ಧರ್ಮ, ಜಾತಿ ಆಧಾರದಲ್ಲಿ ಮತ ಪಡೆಯಲು ಹೊರಟಿದೆ. ನಾವು ಕರ್ನಾಟಕಕ್ಕೆ ಸಂಬಂಧಪಟ್ಟ ವಿಷಯ ಕೇಳಿದರೆ, ಅವರು ವಿಷಯಾಂತರ ಮಾಡುತ್ತಿದ್ದಾರೆ. ರಾಜ್ಯದ ಜನತೆ ಇದಕ್ಕೆ ಸೂಕ್ತ ಉತ್ತರ ನೀಡಲಿದ್ದಾರೆ ಎಂದು ಹೇಳಿದರು.
ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ರವಿಕುಮಾರ್ ಮಾತನಾಡಿ, ಗ್ರಾಮೀಣ ಪ್ರದೇಶಗಳಿಗೆ ವೈದ್ಯರು ಹೋಗುವುದಿಲ್ಲ ಎಂದು ಸಿದ್ದರಾಮಯ್ಯ ಹೇಳುತ್ತಾರೆ. ಆದರೆ, ಅನೇಕ ಆರೋಗ್ಯ ಕೇಂದ್ರಗಳಲ್ಲಿ ವೈದ್ಯರಿಗೆ ವಸತಿ ಸೌಲಭ್ಯವಿಲ್ಲ. ಆರೂವರೆ ಕೋಟಿ ಜನಸಂಖ್ಯೆಗೆ ಕೇವಲ 40 ರಕ್ತ ಬ್ಯಾಂಕ್‌ಗಳಿವೆ ಎಂದು ದೂರಿದರು.
ವೈದ್ಯರ ನೇಮಕಾತಿಯಲ್ಲಿ ಕಮೀಷನ್ ಸಿಗುವುದಿಲ್ಲ ಎಂದು ರಸ್ತೆ ಕಾಮಗಾರಿಗೆ ಒತ್ತು ನೀಡಿದಷ್ಟು ಆರೋಗ್ಯ ಇಲಾಖೆಗೆ ಒತ್ತು ಕೊಟ್ಟಿಲ್ಲ. 44 ಸಾವಿರ ನವಜಾತ ಶಿಶುಗಳ ಸಾವಿಗೆ ಸಿದ್ದರಾಮಯ್ಯ ಆವರೇ ನೇರ ಕಾರಣ ಎಂದು ಆರೋಪಿಸಿದರು. ಬಿಜೆಪಿ ವೈದ್ಯಕೀಯ ಪ್ರಕೋಷ್ಠ ರಾಜ್ಯ ಸಂಚಾಲಕ ಡಾ.ಬಸವರಾಜ್, ಸಹ ಸಂಚಾಲಕ ನವೀನ್‌ಕುಮಾರ್, ಸಹ ವಕ್ತಾರ ಎಚ್.ಎ.ಆನಂದ್ ಉಪಸ್ಥಿತರಿದ್ದರು.