Advertisement

ಮೊದಲ ದಿನಕ್ಕೇ ಮಾವು ಮೇಳ ಮೊಟಕು

12:37 PM May 30, 2017 | Team Udayavani |

ಬೆಂಗಳೂರು: ಬಿಬಿಎಂಪಿ ಕೇಂದ್ರ ಕಚೇರಿ ಆವರಣದಲ್ಲಿ ರಾಜ್ಯ ಮಾವು ಅಭಿವೃದ್ಧಿ ನಿಗಮ ಆಯೋಜಿಸಿದ್ದ ಮಾವು ಮೇಳಕ್ಕೆ ನಿರೀಕ್ಷಿತ ಮಟ್ಟದಲ್ಲಿ ಪ್ರತಿಕ್ರಿಯೆ ವ್ಯಕ್ತವಾಗದ ಹಿನ್ನೆಲೆಯಲ್ಲಿ ಒಂದೇ ದಿನಕ್ಕೆ ಮೇಳ ಮುಕ್ತಾಯಗೊಂಡಿದೆ. 

Advertisement

ಸೋಮವಾರ ಬೆಳಗ್ಗೆ ಮೇಯರ್‌ ಜಿ.ಪದ್ಮಾವತಿ ಅವರು ಮಾವಿನ ಹಣ್ಣು ಕತ್ತರಿಸುವ ಮೂಲಕ ಮೇಳಕ್ಕೆ ಚಾಲನೆ ನೀಡಿದ್ದರು. ಆದರೆ, ಪಾಲಿಕೆ ಸಾಮಾನ್ಯ ಸಭೆ ಇದ್ದ ಕಾರಣ ಮೊದಲ ದಿನ ಮಾವು ಮೇಳದಲ್ಲಿ ನಿರೀಕ್ಷಿತ ಮಟ್ಟದ ವಹಿವಾಟು ನಡೆಯಲಿಲ್ಲ. ಇದರಿಂದ ರೈತರು ಬೇಸರ ವ್ಯಕ್ತಪಡಿಸಿದರು.

ಅಲ್ಲದೇ ಬಿಬಿಎಂಪಿ ಕೇಂದ್ರ ಕಚೇರಿ ಆವರಣದಿಂದ ಮೇಳವನ್ನು ಸ್ಥಳಾಂತರಿಸಿ ಬೈಯ್ಯಪ್ಪನಹಳ್ಳಿ ಮೆಟ್ರೋ ನಿಲ್ದಾಣದ ಆವರಣಕ್ಕೆ ಸ್ಥಳಾಂತರಿಸಲು ರೈತರು ನಿಗಮಕ್ಕೆ ಮನವಿ ಮಾಡಿದ್ದರು.  ರಾಜ್ಯ ಮಾವು ಅಭಿವೃದ್ಧಿ ನಿಗಮವು ಬಿಬಿಎಂಪಿ ಆವರಣದಲ್ಲಿ ನಾಲ್ಕು ದಿನ ಮೇಳ ನಡೆಸಲು ತೀರ್ಮಾನಿಸಿ, ಐವರು ರೈತರಿಗೆ ಈ ಮೇಳದಲ್ಲಿ ಪಾಲ್ಗೊಳ್ಳಲು ಅವಕಾಶ ನೀಡಿತ್ತು. ನಾಲ್ಕು ದಿನದಲ್ಲಿ ಅಂದಾಜು 5ಟನ್‌ ಮಾವು ಮಾರಾಟ ಆಗುವ ನಿರೀಕ್ಷೆ ಹೊಂದಲಾಗಿತ್ತು.

ಆದರೆ, ರೈತರು ಪಾಲಿಕೆ ಆವರಣದಲ್ಲಿ ಉತ್ತಮ ಪ್ರತಿಕ್ರಿಯೆ ಬರದ ಹಿನ್ನೆಲೆಯಲ್ಲಿ ವ್ಯವಹಾರ ನಡೆಸಲು ಮನಸು ಮಾಡಲಿಲ್ಲ. ಈ ಹಿನ್ನೆಲೆಯಲ್ಲಿ ಮಂಗಳವಾರದಿಂದ ಬೈಯ್ಯಪ್ಪನಹಳ್ಳಿ ಮೆಟ್ರೋ ರೈಲು ನಿಲ್ದಾಣದ ಆವರಣದಲ್ಲಿ ಐದು ಮಳಿಗೆಗಳನ್ನು ತೆರೆಯಲು ರಾಜ್ಯ ಮಾವು ಅಭಿವೃದ್ಧಿ ನಿಗಮ ತೀರ್ಮಾನಿಸಿದೆ ನಿಗಮದ ವ್ಯವಸ್ಥಾಪಕ ನಿರ್ದೇಶಕ ಕದಿರೇಗೌಡ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next