Advertisement

ಕಡಿಮೆ ಸವೆದ ಹಾದಿ ಸೊಗಸೇ ಬೇರೆ 

04:53 PM Apr 04, 2018 | Team Udayavani |

ಕವಿ ರಾಬರ್ಟ್‌ ಫ್ರಾಸ್ಟ್‌ನ “ದಿ ರೋಡ್‌ ನಾಟ್‌ ಟೇಕನ್‌’ ಕವಿತೆಯನ್ನು ಹಲವರು ಓದಿರಬಹುದು. ಬದುಕಿನಲ್ಲಿನ ಆಯ್ಕೆ ಬಗೆಗೆ ಇರುವ ಒಂದು ಚೆಂದದ ಕವಿತೆ. ಒಂದು ವೃತ್ತದಲ್ಲಿ ಎರಡು ರಸ್ತೆಗಳು ನಿಮಗೆ ಎದುರಾಗಬಹುದು. ಒಂದು ಈಗಾಗಲೇ ಹಲವರು ಸಾಗಿಸಾಬೀತಾದ ಸಪಾಟಾದ ರಸ್ತೆ. ಮತ್ತೂಂದು ಅಷ್ಟೊಂದು ಮಂದಿ ಹಾದು ಹೋಗದೇ ಒಂದಿಷ್ಟು ಹಸುರು, ಅಷ್ಟೊಂದು ಸವೆದು ಹೋಗಿರದ ರಸ್ತೆ. ಹಲವು ಬಾರಿ ಸಪಾಟಾದ ರಸ್ತೆಯಲ್ಲೇ ಸಾಗಿ ಹೋಗೋಣ ಎನ್ನುವ ಮನಸ್ಸು ಆಗುತ್ತದೆ. ಯಾಕೆಂದರೆ ಅದು ಚಿರಪರಿಚಿತ ದಾರಿ. ಗುರಿಯನ್ನು ಮುಟ್ಟುವುದರಲ್ಲಿ ಯಾವ ಸಂಶಯವೂ ಇಲ್ಲ. ಎರಡನೇ ದಾರಿಯಲ್ಲಿ ಕೊಂಚ ಗೊಂದಲಗಳಿವೆ. ಗುರಿ ಮುಟ್ಟುವುದು ಖಚಿತವಿದ್ದರೂ ಮಧ್ಯೆ ಸಣ್ಣ ಸಣ್ಣ ಅಸ್ಪಷ್ಟತೆಯ ಚುಕ್ಕೆಗಳಿರುತ್ತವೆ. ಅವುಗಳೆಲ್ಲವನ್ನೂ ಒಟ್ಟುಗೂಡಿಸಿ ಚಿತ್ರ ಮೂಡಿಸಿಕೊಳ್ಳಬೇಕು.

Advertisement

ಕವಿ ಹೀಗೆಯೇ ಹೇಳುತ್ತಾ ಕೊನೆಗೆ, “ನಾನು ಬಹಳ ಕಡಿಮೆ ಜನ ಬಳಸಿದ ರಸ್ತೆಯನ್ನೇ ಆಯ್ಕೆ ಮಾಡಿಕೊಂಡೆ. ಅದೇ ಒಂದು ಉಳಿದ ಎಲ್ಲ ವಿಭಿನ್ನತೆಯನ್ನು ತುಂಬಿತು’. ಈ ಮಾತು ಇಂದಿನ ಶಿಕ್ಷಣ ವಲಯದಲ್ಲಿ ಸದಾ ಚರ್ಚೆಗೊಳಗಾಗಬೇಕಾದದ್ದು. ಇತ್ತೀಚಿನ ದಿನಗಳಲ್ಲಿ ಈ ಹೆಚ್ಚು ಜನ ಮಾಡಿಕೊಳ್ಳದ ದಾರಿಗೆ ಸಿಕ್ಕಾಪಟ್ಟೆ ಬೇಡಿಕೆ ಬರತೊಡಗಿದೆ. ಇದನ್ನೇ ಆಫ್ ಬೀಟ್‌ ಎನ್ನಬಹುದು. ಗುರಿ ಮುಟ್ಟುವುದು ಗಳಿಕೆಯೋ ಅಥವಾ ಗುರಿ ಮುಟ್ಟುವ ಹಂತದಲ್ಲಿ ಗಳಿಸುವ ಅನುಭವವು ಗಳಿಕೆಯೋ ಎಂಬ ಪ್ರಶ್ನೆಗೆ ಕವಿಯ ಉತ್ತರ “ಗುರಿ ಮುಟ್ಟುವ ಹಂತದಲ್ಲಿ ಪಡೆಯುವ ಅನುಭವ’ ಎಂಬುದು ಉತ್ತರವೆನಿಸುತ್ತದೆ.

ಇಲ್ಲೊಂದಿಷ್ಟು ವಿಚಿತ್ರ ಕೋರ್ಸ್‌ಗಳು. ಹೀಗೆಯೇ ಪ್ರಪಂಚದಲ್ಲಿ ಒಂದಿಷ್ಟು ವಿಚಿತ್ರವಾದ ಕೋರ್ಸ್‌ಗಳಿವೆ. ಅದು ಹಣ ತಂದುಕೊಡುತ್ತದೋ ಇಲ್ಲವೋ ಗೊತ್ತಿಲ್ಲ. ಆದರೆ ನಮ್ಮ ಬದುಕಿಗೊಂದಿಷ್ಟು ಲವಲವಿಕೆ, ಜೀವಂತಿಕೆ, ಸಾಹಸ ಪ್ರವೃತ್ತಿ ಹಾಗೂ ಖುಷಿಯನ್ನು ತುಂಬುತ್ತದೆ. ಅಂಥವುಗಳ ಸಣ್ಣ ಪಟ್ಟಿ ಇಲ್ಲಿದೆ. 

ಶಾರ್ಕ್‌ಗಳ ಜತೆ ಈಜಾಡಿ
ಇದು ಪಿಜಿಯಲ್ಲಿರುವ ಕೋರ್ಸ್‌. ಮರೈನ್‌ ಬಯೋಲಾಜಿ ಬಗ್ಗೆ ಕುತೂಹಲ ಇರುವವರಿಗೆ ಇರುವಂಥ ಕೋರ್ಸ್‌. ಸುಮಾರು 25 ದಿನಗಳನ್ನು ನೀವು ಪೆಸಿಫಿಕ್‌ ಸಮುದ್ರ ಭಾಗದಲ್ಲಿ ಶಾರ್ಕ್‌ನ ಸ್ವಭಾವಗಳನ್ನು ಅಧ್ಯಯನ ಮಾಡುತ್ತಾ ಕಳೆಯುತ್ತೀರಿ. ಬಳಿಕ ನಿಮ್ಮ ಅಧ್ಯಯನವನ್ನು ಹಿರಿಯರೊಂದಿಗೆ ಹಂಚಿಕೊಳ್ಳುತ್ತೀರಿ. ಇದಕ್ಕೆ ಶುಲ್ಕ ಸುಮಾರು 6 ಸಾವಿರ ಡಾಲರ್‌ ಎಂದುಕೊಳ್ಳೋಣ.

ಚಹಾ ಕುಡಿದು ಬದುಕಿ
ಚಹಾ ಕುಡಿಯುವುದು ನಿತ್ಯದ ಲೆಕ್ಕಾಚಾರ. ಆದರೆ ಅದಕ್ಕೂ ಒಂದು ಕೋರ್ಸ್‌ ಇದೆ. ಎಷ್ಟು ವಿಚಿತ್ರವೆಂದರೆ ಬಾಯಿತುಂಬಾ ಟೀ ರುಚಿ ನೋಡಿದರೆ ಕೈ ತುಂಬಾ ಸಂಬಳವನ್ನೂ ಪಡೆಯಬಹುದು. ಇಂಡಿಯನ್‌ ಇನ್‌ಸ್ಟಿಟ್ಯೂಟ್‌ ಆಫ್ ಪ್ಲಾಂಟೇ ಷನ್‌ ಮ್ಯಾನೇಜ್‌ ಮೆಂಟ್‌ ಸಹಿತ ಹಲವು ಸಂಸ್ಥೆಗಳು ಈ ಕೋರ್ಸ್‌ ನಡೆಸುತ್ತವೆ. ಈ ಕೋರ್ಸ್‌ ಮುಗಿಸಿದರೆ ಪಂಚತಾರಾ ಹೊಟೇಲ್‌ಗ‌ಳಲ್ಲಿ ಟೀ ರುಚಿ ನೋಡುವ ಕೆಲಸ. 

Advertisement

ನಾವಿಕನಾಗಿ ಜಗತ್ತು ಸುತ್ತಿ
ಒಂದು ಸೆಮಿಸ್ಟರ್‌ ಪೂರ್ತಿಯಾಗಿ ನೀವು ಹಡಗಿನಲ್ಲೇ ಜಗತ್ತನ್ನು ಸುತ್ತುತ್ತೀರಿ. ಸುಮಾರು 11 ದೇಶಗಳ 12 ನಗರಗಳಿಗೆ ಭೇಟಿ ನೀಡಿ ಅಲ್ಲಿನ ವಿಶೇಷಗಳನ್ನು ತಿಳಿದುಕೊಳ್ಳುತ್ತಾ ಹೊಸ ಅನುಭವವನ್ನು ಗಳಿಸಬಹುದು. ಸಾಮಾನ್ಯವಾಗಿ ವರ್ಷಕ್ಕೆರಡು ಸೆಮಿಸ್ಟರ್‌ಗಳು. ಜನವರಿ ಯಿಂದ ಎಪ್ರಿಲ್‌ನಲ್ಲಿ ಜಗತ್ತಿನಾದ್ಯಂತ ತಿರುಗಬಹುದು. ಮತ್ತೂಂದು ಸೆಮಿಸ್ಟರ್‌ ನಡೆಯುವುದು ಸೆಪ್ಟಂಬರ್‌ ನಿಂದ ಡಿಸೆಂಬರ್‌ವರೆಗೆ ಮೆಡಿಟೇರಿಯನ್‌ ಮತ್ತು ಅಟ್ಲಾಂಟಿಕ್‌ ಸಮುದ್ರದ ಸುತ್ತಮುತ್ತ. ಖರ್ಚಾಗುವುದು ಸುಮಾರು 25 ರಿಂದ 32 ಸಾವಿರ ಡಾಲರ್‌.

ತಿಂಗಳಿಗೆ ಕಡಿಮೆ ಎಂದರೂ 50 ಸಾವಿರ ರೂ. ಸಂಬಳ ಸಿಗಬಹುದು. ಬಗೆ ಬಗೆಯ ಟೀ ರುಚಿ ನೋಡಿ, ಸವಿಯನ್ನು ವಿಶ್ಲೇಷಿಸಿ ಹೇಳುವುದು ಇತ್ಯಾದಿ ಕೆಲಸ. ಇಂಥ ಹತ್ತು ಹಲವು ಕೋರ್ಸ್ ಗಳು ಬದುಕಿಗೆ ಬರೀ ಹಣವನ್ನು ತರುವುದಿಲ್ಲ, ಜೀವನೋತ್ಸಾಹವನ್ನು ತುಂಬುತ್ತವೆ. ಅದಕ್ಕೇ ಕವಿ ಹೇಳಿದ್ದು, “ಬಹಳ ಜನ ಬಳಸದ ಹಾದಿಯಲ್ಲಿ ಒಂದು ಸೊಗಸಿದೆ, ಕುತೂಹಲವಿದೆ’.

ಒಂದು ಕೋರ್ಸ್‌ ಆರೇಳು ದೇಶದಲ್ಲಿ ಪೂರೈಸಿ
ಇದೂ ಒಂದು ಬಗೆಯಲ್ಲಿ ವಿಶೇಷವೇ. ಸಾಮಾನ್ಯವಾಗಿ ವಿದೇಶದಲ್ಲಿ ಓದುವುದೆಂದರೆ ಖುಷಿ. ಅಮೆರಿಕದ ಒಂದು ವಿಶ್ವವಿದ್ಯಾಲಯ ಬೇಸಗೆ ಅಧ್ಯಯನವನ್ನು (2 ರಿಂದ 4 ವಾರಗಳದ್ದು) ಸುಮಾರು 6 ರಿಂದ ಏಳು ದೇಶಗಳಲ್ಲಿ ಕೈಗೊಳ್ಳಲು ಅವಕಾಶ ನೀಡುತ್ತದೆ. ಅಂದರೆ ಯುರೋಪ್‌ ನಾದ್ಯಂತ ನೀವು ಓಡಾಡಿ ಅಧ್ಯಯನ ಮಾಡಬಹುದು. ಈಗ ಸ್ವಲ್ಪ ನಮ್ಮ ದೇಶಕ್ಕೆ ಬರೋಣ. ಇಲ್ಲಿಯೂ ಅಂಥ ಕೆಲವು ಆಫ್ಬೀಟ್‌ ಕೋರ್ಸ್‌ಗಳಿವೆ. ಅತ್ತ ಕಣ್ಣು ಹಾಯಿಸೋಣ.

ಅಥರ್ವ

Advertisement

Udayavani is now on Telegram. Click here to join our channel and stay updated with the latest news.

Next