Advertisement

GDP; ದೇಶದ ಆರ್ಥಿಕಾಭಿವೃದ್ಧಿ 2 ವರ್ಷದಲ್ಲೇ ಕನಿಷ್ಠ: ಶೇ.5.4 ಜಿಡಿಪಿ ದಾಖಲು

01:57 AM Nov 30, 2024 | Team Udayavani |

ಹೊಸದಿಲ್ಲಿ: ಉತ್ಪಾದನ ಮತ್ತು ಗಣಿಗಾರಿಕೆ ವಲಯಗಳ ಕಳಪೆ ಪ್ರದರ್ಶನದಿಂದಾಗಿ ಸೆಪ್ಟಂಬರ್‌ನಲ್ಲಿ ಮುಕ್ತಾಯವಾದ ಪ್ರಸಕ್ತ ಹಣಕಾಸು ವರ್ಷದ 2ನೇ ತ್ತೈಮಾಸಿಕದಲ್ಲಿ ಭಾರತದ ಆರ್ಥಿಕಾಭಿವೃದ್ಧಿ ದರ 2 ವರ್ಷದಲ್ಲೇ ಕನಿಷ್ಠ ಮಟ್ಟಕ್ಕೆ ಕುಸಿದಿದೆ. ಅಂದರೆ, ಶೇ.5.4ರಷ್ಟು ಮಾತ್ರವೇ ಆರ್ಥಿಕಾಭಿವೃದ್ಧಿ ಸಾಧ್ಯವಾ ಗಿದೆ. ಹೀಗಿದ್ದೂ, ಭಾರತವು ಅತಿ ವೇಗವಾಗಿ ಬೆಳೆಯು ತ್ತಿರುವ ಆರ್ಥಿಕಾಭಿವೃದ್ಧಿ ರಾಷ್ಟ್ರವಾಗಿ ಮುಂದುವರಿ ದಿದೆ ಎಂಬ ಮಾಹಿತಿಯನ್ನು ಸರಕಾರ‌ದ ಅಂಕಿ- ಅಂಶಗಳ ವರದಿಯಲ್ಲಿ ತಿಳಿಸಲಾ ಗಿದೆ. ಇತ್ತೀಚಿನ ಕಡಿಮೆ ಆರ್ಥಿಕಾಭಿವೃದ್ಧಿಯು 2022- 23ರ ಸಾಲಿನ ಅಕ್ಟೋಬರ್‌-ಡಿಸೆಂಬರ್‌ ತ್ತೈಮಾ ಸಿಕ ದಲ್ಲಿ (ಶೇ.4.3) ದಾಖಲಾಗಿತ್ತು. ಆರ್ಥಿಕಾ ಭಿ ವೃದ್ಧಿ ಕುಸಿತದ ನಡುವೆಯೂ ಕೃಷಿ ಮತ್ತು ಕೃಷಿ ಸಂಬಂಧಿ ಕ್ಷೇತ್ರಗಳು ಅತ್ಯುತ್ತಮ ಪ್ರದರ್ಶನ ತೋರುತ್ತಿವೆ ಎನ್ನಲಾಗಿದೆ.

Advertisement

ಜಿಡಿಪಿ ಲೆಕ್ಕಾಚಾರಕ್ಕೆ 2022-23 ಆರಂಭಿಕ ವರ್ಷ ಪರಿಗಣನೆ
ದೇಶದ ಆರ್ಥಿಕತೆಯ ನಿಖರ ಚಿತ್ರಣ ವನ್ನು ತಿಳಿದುಕೊಳ್ಳುವುದಕ್ಕಾಗಿ ಜಿಡಿಪಿಯ ಲೆಕ್ಕಾಚಾ ರದ ಆರಂಭಿಕ ವರ್ಷವನ್ನು ಪರಿಷ್ಕರಿಸಲು ಕೇಂದ್ರ ಸರಕಾರ‌ ಮುಂದಾಗಿದೆ. 2026 ಫೆಬ್ರವರಿಯಲ್ಲಿ ಜಿಡಿಪಿಯ ಲೆಕ್ಕಾಚಾರಕ್ಕೆ ಮೂಲ ವರ್ಷವನ್ನಾಗಿ 2022- 23 ಪರಿಗಣಿಸಲು ನಿರ್ಧರಿಸಲಾಗಿದೆ. ಈವ ರೆಗೆ ಜಿಡಿಪಿ ಲೆಕ್ಕಾಚಾರಕ್ಕಾಗಿ 2011-12 ವರ್ಷವನ್ನು ಮೂಲ ವರ್ಷವನ್ನಾಗಿ ಪರಿಗಣಿಸಲಾಗುತ್ತಿತ್ತು. ಜಿಡಿಪಿಗೆ ಮುಂದಿನ ಮೂಲ ವರ್ಷವು 2022-23 ಆಗಲಿದ್ದು, 2026 ಫೆಬ್ರವರಿಯಿಂದ ಪರಿಗಣಿಸಲಾ ಗು ñ ‌¤ದೆ ಎಂದು ಕೇಂದ್ರ ಸಾಂಖೀÂಕ ಮತ್ತು ಕಾಯ ì ಕ್ರಮ ಅನುಷ್ಠಾನ ಸಚಿವಾಲಯದ ಸೌರಭ್‌ ಗಾರ್ಗ್‌ ಹೇಳಿದ್ದಾರೆ. ಜಿಡಿಪಿ ಲೆಕ್ಕಾಚಾರ ಹಾಕಲು ಆರಂಭಿಕ ವರ್ಷವನ್ನು ಆಗಾಗ ಪರಿಷ್ಕರಿಸಲಾಗು ತ್ತದೆ. ಈ ಹಿಂದೆ 2011-12ರಲ್ಲಿ ಪರಿಷ್ಕರಿಸಲಾಗಿತ್ತು.

Advertisement

Udayavani is now on Telegram. Click here to join our channel and stay updated with the latest news.

Next