Advertisement
ಸಂಪಾಜೆ ಪ್ರಾಥಮಿಕ ಆರೋಗ್ಯದ ವ್ಯಾಪ್ತಿಗೆ ಸೇರಿದ ರಸ್ತೆಯ ಡಾಮರು ಸಂಪೂರ್ಣ ಕಿತ್ತು ಹೋಗಿದ್ದು, ಆಸ್ಪತ್ರೆಗೆ ವಾಹನದಲ್ಲಿ ತೆರಳುವ ರೋಗಿ ಗಳ ಗೋಳು ಹೇಳ ತೀರದು. ವಾಹನದಲ್ಲಿ ಆರೋಗ್ಯ ಕೇಂದ್ರಕ್ಕೆ ಆಗಮಿಸಿದರೆ ಇಲ್ಲಿ ವಾಹನ ಗಳು ಎಗರಿ ಬೀಳುತ್ತವೆ. ರೋಗಿಗಳಿಗೆ ಇನ್ನಷ್ಟು ಸಮಸ್ಯೆಯಾಗುತ್ತಿದೆ.
ಸಂಪಾಜೆ ಪ್ರಾಥಮಿಕ ಆರೋಗ್ಯ ಕೇಂದ್ರ ಎರಡು ತಿಂಗಳ ಹಿಂದೆ ಸಿಬಂದಿ ಕೊರತೆ ಅನುಭವಿಸಿತ್ತು. ರೋಗಿಗಳು ಪ್ರಾಥಮಿಕ ಆರೋಗ್ಯ ಕೇಂದ್ರದ ಬದಲು ಇತರೆ ಆರೋಗ್ಯ ಕೇಂದ್ರ ಹಾಗೂ ಖಾಸಗಿ ಆಸ್ಪತ್ರೆಗಳತ್ತ ಮುಖ ಮಾಡಿದ್ದರು. ಸದ್ಯ ಈ ಪ್ರಾಥಮಿಕ ಆರೋಗ್ಯ ಕೇಂದ್ರವನ್ನು ನಿರ್ವಹಣೆ ಮಾಡಲು ಮೂರು ವರ್ಷಗಳ ತನಕ ಉದ್ಭವ ಸಂಸ್ಥೆಗೆ ವಹಿಸಲಾಗಿದೆ. ಖಾಲಿ ಬಿದ್ದಿರುವ ಎಲ್ಲ ಹುದ್ದೆಗಳನ್ನು ಸಂಸ್ಥೆ ತಾತ್ಕಾಲಿಕ ನೆಲೆಯಲ್ಲಿ ಭರ್ತಿ ಮಾಡಿದೆ. ಸರಾಸರಿ 40 ಹೊರರೋಗಿಗಳು ಚಿಕಿತ್ಸೆ ಪಡೆಯುತ್ತಿದ್ದಾರೆ. ಪ್ರಾ. ಆರೋಗ್ಯ ಕೇಂದ್ರದಲ್ಲಿ ವಾರಕ್ಕೆ ಒಂದು ಬಾರಿ, ಉಪ ಕೇಂದ್ರದಲ್ಲಿ ತಿಂಗಳಿಗೆ ಒಂದು ಬಾರಿ ಲಸಿಕೆ ಹಾಕಲಾಗುತ್ತಿದೆ. ನಾದುರಸ್ತಿಯ ವಸತಿಗೃಹ
ಸಂಪಾಜೆ ಪ್ರಾ. ಆರೋಗ್ಯ ಕೇಂದ್ರದ ಸಿಬಂದಿ ವಸತಿಗೃಹ ನಾದರಸ್ತಿಯಲ್ಲಿದೆ. ಆಸ್ಪತ್ರೆಯಲ್ಲಿ ದಿನದ 24 ಗಂಟೆಗಳ ಆರೋಗ್ಯ ಸೇವೆ ಲಭ್ಯವಾಗುತ್ತಿದ್ದು, ಸಿಬಂದಿಗೆ ಉತ್ತಮ ವಸತಿ ವ್ಯವಸ್ಥೆ ಇಲ್ಲ.
Related Articles
ಆಸ್ಪತ್ರೆಯಲ್ಲಿ ಈಗ ಸಿಬಂದಿ ಕೊರತೆ ಇಲ್ಲ. ಆರೋಗ್ಯ ಕೇಂದ್ರಕ್ಕೆ ಬರುವ ರಸ್ತೆ ತುಂಬಾ ಹದಗೆಟ್ಟಿದೆ. ರೋಗಿಗಳಿಗೆ ಸಮಸ್ಯೆಯಾಗುತ್ತಿದೆ. ಸಿಬಂದಿಗೆ ಉಳಿದುಕೊಳ್ಳಲು ಸುಸಜ್ಜಿತ ವಸತಿಗೃಹಗಳಿಲ್ಲ. ರಸ್ತೆ ಹಾಗೂ ವಸತಿಗೃಹವನ್ನು ತುರ್ತು ದುರಸ್ತಿಪಡಿಸಿದರೆ ಉತ್ತಮ.
– ಡಾ| ಪರಮೇಶಪ್ಪ, ವೈದ್ಯಾಧಿಕಾರಿ, ಕೊಡಗು ಸಂಪಾಜೆ ಪ್ರಾಥಮಿಕ ಆರೋಗ್ಯ ಕೇಂದ್ರ
Advertisement
- ತೇಜೇಶ್ವರ್ ಕುಂದಲ್ಪಾಡಿ