Advertisement

ಸಾಧಕರ ಜೀವನ ಸಮಾಜಕ್ಕೆ ದಾರಿದೀಪ

01:16 PM Jan 01, 2018 | |

ಮುದ್ದೇಬಿಹಾಳ: ಸಾಧಕರ ಆದರ್ಶ ಜೀವನ ಸಮಾಜಕ್ಕೆ ಮಾರ್ಗದರ್ಶಕವಾಗಬೇಕು. ಸಾಧಕರನ್ನು ಗುರುತಿಸಿ ಪ್ರೋತ್ಸಾಹಿಸುವ ಮನೋಭಾವ ಸಂಘಟನೆಗಳಲ್ಲಿರಬೇಕು ಎಂದು ಜಮಖಂಡಿ ಮಾಜಿ ಶಾಸಕ, ಬಿಜೆಪಿ ಮುಖಂಡ ಶ್ರೀಕಾಂತ ಕುಲಕರ್ಣಿ ಹೇಳಿದರು.

Advertisement

ಇಲ್ಲಿನ ವಿಜಯಮಹಾಂತೇಶ ಮಂಗಲ ಭವನದಲ್ಲಿ ರವಿವಾರ ಏರ್ಪಡಿಸಿದ್ದ ಬಸವ ಪ್ರತಿಷ್ಠಾನದ 5ನೇ ವಾರ್ಷಿಕೋತ್ಸವ, ಕಿತ್ತೂರು ಚನ್ನಮ್ಮಾಜಿ 239ನೇ ಜಯಂತಿ, ಭಾರತರತ್ನ ಅಟಲ್‌ಜೀ ಅವರ 93ನೇ ಜನ್ಮದಿನಾಚರಣೆ, ಹೈಕ ಸ್ವಾತಂತ್ರ್ಯ ಹೋರಾಟಗಾರ ಕೆ.ಚನಬಸಪ್ಪ ಕುಳಗೇರಿ ಅವರು 10ನೇ ಪುಣ್ಯಸ್ಮರಣೆ ಮತ್ತು 2017ನೇ ಸಾಲಿನ ವಿವಿಧ ಪ್ರಶಸ್ತಿ ಪ್ರದಾನ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.

ಸಮಯಪ್ರಜ್ಞೆ ಎಲ್ಲರಲ್ಲಿ ಇರಬೇಕು. ಇದಕ್ಕೆ ಜ್ವಲಂತ ಉದಾಹರಣೆ ವಿಜಯಪುರದ ಪರಮಪೂಜ್ಯ ಸಿದ್ದೇಶ್ವರ ಶ್ರೀಗಳು. ಅವರಲ್ಲಿನ ಸಮಯಪಾಲನೆ ಪ್ರಜ್ಞೆ ಇಂದಿನ ಯುವಕರಿಗೆ ಅನುಕರಣೀಯವಾಗಿರಬೇಕು. ಮಾಜಿ ಪ್ರಧಾನಿ ಅಟಲ್‌ ಬಿಹಾರಿ ವಾಜಪೇಯಿ ಈ ದೇಶ ಕಂಡ ಆದರ್ಶ ರಾಜಕಾರಣಿ. ಇಂಥ ರಾಜಕಾರಣಿಗಳ ಅವಶ್ಯಕತೆ ಇಂದು ಹೆಚ್ಚಾಗಿದೆ. ಈಗ ದೇಶದ ಪ್ರಧಾನಿ ಆಗಿರುವ ನರೇಂದ್ರ ಮೋದಿ ಅಟಲ್‌ಜೀ ಮಾರ್ಗದಲ್ಲೇ ಮುನ್ನಡೆಯುತ್ತ ಅವರ ಆದರ್ಶ ಪಾಲನೆ ಮಾಡುತ್ತಿದ್ದಾರೆ ಎಂದರು.

ಅಧ್ಯಕ್ಷತೆ ವಹಿಸಿದ್ದ ಕೃಷ್ಣಾ ಕಾಡಾ ಮಾಜಿ ಅಧ್ಯಕ್ಷ ಬಸವರಾಜ ಕುಂಬಾರ ಮಾತನಾಡಿ, ನೀರು ನಮ್ಮ ಪ್ರಾಣ, ಮಣ್ಣು ರೈತನ ಪ್ರಾಣ. ಇವೆರಡರಲ್ಲೂ ಸ್ವಲ್ಪವೇ ವ್ಯತ್ಯಾಸ ಆದರೂ ಅಲ್ಲೋಲ ಕಲ್ಲೋಲ ಆಗಿ ಹಾಹಾಕಾರ ಸೃಷ್ಟಿಯಾಗುತ್ತದೆ. ನೀರು, ಮಣ್ಣು ಇವುಗಳ ಮಿತ ಬಳಕೆ, ರಕ್ಷಣೆ ಇಂದಿನ ಅಗತ್ಯವಾಗಿದ್ದು ರೈತರಾದಿಯಾಗಿ ಎಲ್ಲ ವರ್ಗದ ಜನರು ಆ ನಿಟ್ಟಿನತ್ತ ಗಮನ ಕೇಂದ್ರೀಕರಿಸಬೇಕು ಎಂದರು.

ಮುಖ್ಯ ಅತಿಥಿಗಳಾಗಿದ್ದ ಹಿರಿಯ ಸಾಹಿತಿ ಪ್ರೊ| ಬಿ.ಎಂ. ಹಿರೇಮಠ, ವಾಕರಸಾ ಸಂಸ್ಥೆಯ ಇಳಕಲ್ಲ ಘಟಕದಲ್ಲಿ ಕಾರ್ಮಿಕ ಮುಖಂಡರಾಗಿರುವ ಹಾಗೂ ಬಿದರಕುಂದಿಯ ದಿ| ಎನ್‌.ಎಲ್‌. ನಾಯ್ಕೋಡಿ ಶಿಕ್ಷಕರ ಪ್ರತಿಷ್ಠಾನದ ಸಂಚಾಲಕ ಅಬ್ದುಲ್‌ರೆಹಮಾನ್‌ ಬಿದರಕುಂದಿ ಮಾತನಾಡಿದರು. ಸಾಹಿತಿ ರುದ್ರೇಶ ಕಿತ್ತೂರ ಸನ್ಮಾನಿತರ ಪರವಾಗಿ ಮಾತನಾಡಿದರು. ಸಾನ್ನಿಧ್ಯ ವಹಿಸಿದ್ದ ವೀರಶಿವಾಚಾರ್ಯ ಸ್ವಾಮೀಜಿ ಆಶೀರ್ವಚನ ನೀಡಿದರು.

Advertisement

ಬಿಇಒ ಎಸ್‌.ಡಿ. ಗಾಂಜಿ, ಎಪಿಎಂಸಿ ನಿರ್ದೇಶಕ ವೈ.ಎಚ್‌. ವಿಜಯಕರ, ಗಣ್ಯರಾದ ಬಾಬುಲಾಲ್‌ ಓಸ್ವಾಲ್‌, ಹೇಮರಡ್ಡಿ ಮೇಟಿ, ಗಿರಿಜಾ ಕಡಿ, ಆರ್‌.ಬಿ. ಪಾಟೀಲ, ಬಸವರಾಜ ಸುಕಾಲಿ, ಕಾಶೀಬಾಯಿ ರಾಂಪುರ, ಶ್ರೀನಿವಾಸ ಇಲ್ಲೂರ, ಕೆ.ಎಂ. ರಿಸಾಲ್ದಾರ್‌, ಗುರುನಾಥ ಕತ್ತಿ, ಅಶೋಕ ರೇವಡಿ, ರಾಜು ಕರಡ್ಡಿ ವೇದಿಕೆಯಲ್ಲಿದ್ದರು.

ಪ್ರಶಸ್ತಿ ಪ್ರದಾನ: ಶಹಾ ಬೋರಮಲ್‌ ಓಸ್ವಾಲ್‌ (ಧಾರ್ಮಿಕ, ಸಮಾಜಸೇವೆ), ಚನ್ನಪ್ಪ ಕಂಠಿ (ಸಮಾಜಸೇವೆ, ಸಹಕಾರಿ), ಲೀಲಾ ಭಟ್‌ (ಶಿಕ್ಷಣ), ರುದ್ರೇಶ ಕಿತ್ತೂರ (ಸಾಹಿತ್ಯ), ಶಾಂತಾ ಭಟ್‌(ಶಿಕ್ಷಣ), ಶರಣಯ್ಯ ಹಿರೇಮಠ (ಸಮಾಜ, ದೇಶಸೇವೆ), ಸರೋಜಿನಿ ಡೋಂಬರ (ಜನಸೇವೆ, ಪ್ರಸೂತಿ), ಮಹಿಬೂಬ ಮುಲ್ಲಾ (ಸಮಾಜಸೇವೆ, ಉದ್ಯಮ), ವಿಜಯಲಕ್ಷ್ಮೀ ಪ್ಯಾಟಿಗೌಡರ (ಸಹಕಾರಿ, ಆಡಳಿತ), ಮಾಲುನಾಥ ಜೋಗೇರ (ಜನಸೇವಕ, ಸ್ವಯಂ ಉದ್ಯೋಗ) ಇವರು ಆಯಾ ಕ್ಷೇತ್ರದಲ್ಲಿ ಮಾಡಿದ ಸಾಧನೆ ಪರಿಗಣಿಸಿ ಪ್ರಶಸ್ತಿ ಪ್ರದಾನಿಸುವ ಮೂಲಕ ಸತ್ಕರಿಸಲಾಯಿತು. ಇದೇ ವೇಳೆ ಕಾರ್ಯಕ್ರಮ ಆಯೋಜಕ ಬಸವ ಪ್ರತಿಷ್ಠಾನದ ಅಧ್ಯಕ್ಷ ಸಿದ್ದರಾಜ ಹೊಳಿ ಅವರನ್ನು ಬಿಜೆಪಿ ಮುಖಂಡ ಪ್ರಭು ಕಡಿ ವಿಶೇಷವಾಗಿ ಸನ್ಮಾನಿಸಿ ಗೌರವಿಸಿದರು. ಸಿದ್ದರಾಜ ಹೊಳಿ ಸ್ವಾಗತಿಸಿದ ಪ್ರಾಸ್ತಾವಿಕ ಮಾತನಾಡಿದರು. ಕಿರುತೆರೆ ಕಲಾವಿದ ಗೋಪಾಲ ಹೂಗಾರ ನಿರೂಪಿಸಿದರು. ರಾಜೇಂದ್ರಗೌಡ ರಾಯಗೊಂಡ ವಂದಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next