Advertisement

ಜನರ ಬದುಕು ಕೃಷ್ಣಾರ್ಪಣ

10:53 PM Aug 07, 2019 | Lakshmi GovindaRaj |

ರಾಯಚೂರು: ಕೃಷ್ಣಾ ನದಿಗೆ ನಾರಾಯಣಪುರ ಜಲಾಶಯದಿಂದ ಬುಧವಾರ ಸಂಜೆ 4,57,920 ಕ್ಯೂಸೆಕ್‌ ನೀರು ಹರಿಸಿದ್ದು, ಆರು ನಡುಗಡ್ಡೆಗಳು, ನದಿ ಪಾತ್ರದ 52 ಹಳ್ಳಿಗಳು ನಲುಗಿ ಹೋಗಿವೆ. ನದಿ ಪಾತ್ರದ ಜಮೀನುಗಳಿಗೆ ನೀರು ನುಗ್ಗಿ ಅಪಾರ ಪ್ರಮಾಣದ ಬೆಳೆ ಹಾನಿಯಾಗಿದೆ. ಲಿಂಗಸುಗೂರು ತಾಲೂಕಿನ 3, ರಾಯಚೂರು ತಾಲೂಕಿನ 3 ನಡುಗಡ್ಡೆಗಳಿಗೆ ಅಪಾಯ ಎದುರಾಗಿದೆ.

Advertisement

ಲಿಂಗಸುಗೂರು ತಾಲೂಕಿನ ಶೀಲಹಳ್ಳಿ, ಯರಗೋಡಿ, ದೇವದುರ್ಗ ತಾಲೂಕಿನ ಹೂವಿನಹೆಡಗಿ, ರಾಯಚೂರು ತಾಲೂಕಿನ ಗುರ್ಜಾಪುರ ಸೇತುವೆಗಳು ಮುಳುಗಡೆ ಆಗಿದ್ದು, ಸಂಚಾರ ನಿಷೇ ಧಿಸಲಾಗಿದೆ. ರಕ್ಷಣಾ ಕಾರ್ಯಕ್ಕೆ ಜಿಲ್ಲೆಗೆ ಈಗಾಗಲೇ ಎನ್‌ಡಿಆರ್‌ಎಫ್‌, ಹೈದರಾಬಾದ್‌ನಿಂದ ವಿಶೇಷ ಸೇನಾ ತಂಡ ಆಗಮಿಸಿದೆ. ರಾಯಚೂರು ತಾಲೂಕಿನ ಕುರ್ವಕುಲಾ, ಅಗ್ರಹಾರ, ಕುರ್ವಕುದಾ ನಡುಗಡ್ಡೆ ಜನರು ಯಾವುದೇ ಕಾರಣಕ್ಕೂ ಸ್ಥಳಾಂತರ ಆಗಲು ಒಪ್ಪುತ್ತಿಲ್ಲ.

ಇಂದಿಗೂ ತೆಪ್ಪಗಳ ಮೂಲಕ ಓಡಾಡುತ್ತಿದ್ದು, ಅ ಧಿಕಾರಿಗಳು ನೀಡಿದ ಲೈಫ್‌ ಜಾಕೆಟ್‌ಗಳನ್ನು ಮಾತ್ರ ಬಳಸುತ್ತಿದ್ದಾರೆ. ಈವರೆಗೆ 275 ಜನರನ್ನು ಸ್ಥಳಾಂತರಿಸಲಾಗಿದೆ. ದೇವದುರ್ಗ ತಾಲೂಕಿನ ಕೊಪ್ಪರ, ಗೂಗಲ್‌, ರಾಯಚೂರು ತಾಲೂಕಿನ ಕಾಡೂರಿಗೆ ನೀರು ನುಗ್ಗಿದೆ. ಅಲ್ಲಿನ ಜನರನ್ನು ಬೇರೆಡೆ ಸ್ಥಳಾಂತರ ಮಾಡಲಾಗಿದೆ. ಕಳೆದ ಐದು ದಿನಗಳಿಂದ ಕಲಬುರಗಿ-ರಾಯಚೂರು ಮಾರ್ಗದ ರಸ್ತೆ ಬಂದ್‌ ಮಾಡಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next