ದೇವನಹಳ್ಳಿ: ದಿನನಿತ್ಯ ಜೀವನೋಪಾಯಕ್ಕಾಗಿ ಬೀದಿಬದಿಯಲ್ಲಿ ವಿವಿಧ ಹಣ್ಣು, ತರಕಾರಿ, ಹೋಟೆಲ್, ಚಿಲ್ಲರೆಅಂಗಡಿ, ಪಾನ್‌ಬೀಡ ಸೇರಿದಂತೆ ಇತರೆ ವ್ಯಾಪಾರ ಮಾಡಿಕೊಂಡು ಜೀವನ ನಡೆಸುತ್ತಿದ್ದರು. ಇದೀಗ ಕೊರೊನಾ ಎರಡನೇಅಲೆಯಿಂದಾಗಿ ಸರ್ಕಾರದ ಜನತಾ ಕರ್ಫ್ಯೂ ಹಿನ್ನೆಲೆಯಲ್ಲಿ ಜಿಲ್ಲೆಯ ನಾಲ್ಕು ತಾಲೂಕುಗಳಲ್ಲಿ ಬೀದಿ ಬದಿ ವ್ಯಾಪಾರಿಗಳುಅಘಾತಕ್ಕೊಳಗಾಗುವಂತಾಗಿದೆ.
ಕಳೆದ ವರ್ಷ ಲಾಕ್‌ಡೌನ್ ಪರಿಣಾಮದ ಕಷ್ಟವನ್ನುಅನುಭವಿಸಿದ್ದವರಿಗೆ ಮತ್ತೂಂದು ಬಾರಿ ಗಾಯದ ಮೇಲೆ ಬರೆಎಳೆದಂತೆ ಆಗಿದೆ. ಹಣ್ಣು-ತರಕಾರಿ, ಇತರೆ ಅಂಗಡಿಗಳಿಗೆಮಾಡಿರುವ ಸಾಲ ತೀರಿಸಲೂ ಆಗದೆ, ಮನೆಯನ್ನು ಕಟ್ಟಲಾಗದೆ,ಮಕ್ಕಳ ಶಾಲಾ ಶುಲ್ಕ ಭರಿಸಲಾಗದವರು.
ಅನೇಕ ಕಳೆದ ವರ್ಷಅನುಭವಿಸಿದ್ದ ಸಂಕಷ್ಟದಿಂದ ಹೊರಬಂದು ಮತ್ತೇ ಚೇತರಿಕೆಯಾಗುತ್ತಿದ್ದಂತೆ ಮತ್ತೂಮ್ಮೆ ಕೊರೊನಾ ಅಘಾತ ಸೃಷ್ಟಿಯಾಗಿದೆ.ಶನಿವಾರ-ಭಾನುವಾರ ವೀಕೆಂಡ್ ಕರ್ಫ್ಯೂನಿಂದಾಗಿಗ್ಯಾರೆಜ್ ಬಾಗಿಲು ಹಾಕಿದ್ದರಿಂದ ಏನಿಲ್ಲವೆಂದರೂ 1,500ರಿಂದ2,000 ರೂ.ಗಳ ದುಡಿಮೆ ಕೈಬಿಡುವಂತೆ ಆಗಿದೆ. ಇದೀಗ14 ದಿನ ಅಂಗಡಿ-ಮುಗ್ಗಟ್ಟುಗಳನ್ನು ಬಾಗಿಲು ಹಾಕುವುದುಜೀವನ ನಡೆಸಲು ಬಹಳಷ್ಟು ಕಷ್ಟವಾಗುತ್ತದೆ. ಮನೆ ಬಾಡಿಗೆ,ವಿದ್ಯುತ್ ಶುಲ್ಕ, ಇತರೆ ಮನೆ ಖರ್ಚುಗಳು ಹೆಚ್ಚಾಗಿ ಸಾಲಮಾಡಿಕೊಂಡು ಕುಟುಂಬಗಳು ಬೀದಿಗೆ ಬರುವ ಪರಿಸ್ಥಿತಿಎದುರಾಗುತ್ತದೆ ಎಂದು ಗ್ಯಾರೇಜ್ ಮಾಲೀಕರು ಹಾಗೂಅಂಗಡಿ ಮಾಲೀಕರು ಹೇಳುತ್ತಿದ್ದಾರೆ.
ಕೊರೊನಾ ದಿಂದಾಗಿ ನಮ್ಮಗಳ ಬದುಕು ದುಸ್ತರವಾಗುತ್ತಿದೆ.ಕಳೆದ ಬಾರಿಗಿಂತಲೂ ಈ ಬಾರಿ ಸಾಕಷ್ಟು ನೋವುಗಳನ್ನು,ಸಂಕಷ್ಟಗಳನ್ನು ಅನುಭವಿಸುವಂತೆ ಆಗಿದೆ ಎಂದು ತರಕಾರಿವ್ಯಾಪಾರಿಗಳು ಹೇಳುತ್ತಾರೆ. ಜೀವನ ನಿರ್ವಹಣೆ ಹೇಗೆಂಬುದರ ಪ್ರಶ್ನೆ ಉದ್ಭವವಾಗುತ್ತಿದೆ ಎನ್ನುತ್ತಾರೆ ಹಣ್ಣು ವ್ಯಾಪಾರಿಗಳು.
ಅಂದೇ ದುಡಿದು ಜೀವನ ನಡೆಸಬೇಕಾದವರು ಬಹಳ ಕಷ್ಟ ಅನುಭವಿಸಬೇಕಾಗುತ್ತದೆ. ಕಳೆದ ವರ್ಷದಿಂದ ಸಂಕಷ್ಟದಿಂದ ಎದುರಿಸಿಕೊಂಡು ಜೀವನಕಟ್ಟಿಕೊಳ್ಳುತ್ತಿರುವ ಶ್ರಮಿಕ ವರ್ಗಕ್ಕೆ ನುಂಗಲಾರದ ತುತ್ತಾಗಿದೆ. ಇಂತಹ ಸಂದರ್ಭದಲ್ಲಿ ಸರ್ಕಾರ ಪ್ಯಾಕೇಜ್‌ಗಳನ್ನು ಘೋಷಣೆ ಮಾಡಬೇಕು.
ಪದ್ಮೇಶ್, ತರಕಾರಿ ವ್ಯಾಪಾರಿ
ಎಸ್.ಮಹೇಶ್