Advertisement

ಸಪ್ಪಣ್ಣಾರ್ಯರ ಜೀವನ ಅರಿವು ಅತ್ಯಗತ್ಯ

10:36 AM Aug 19, 2018 | |

ಸೇಡಂ: ಅಕ್ಷರದ ಅರಿವಿಲ್ಲದಿರುವಾಗ ಭಕ್ತಿ ದಾಸೋಹ ನೀಡಿದ ಕೊತ್ತಲ ಬಸವೇಶ್ವರ ದೇವಾಲಯದ ಲಿಂ| ಸಪ್ಪಣ್ಣಾರ್ಯ ಶಿವಯೋಗಿಗಳ ಜೀವನ ಅರಿವು ಅತ್ಯಗತ್ಯ ಎಂದು ಹಿರಿಯ ಸಾಹಿತಿ ಗವೀಶ ಹಿರೇಮಠ ಹೇಳಿದರು.

Advertisement

ಪಟ್ಟಣದ ಶ್ರೀ ಕೊತ್ತಲ ಬಸವೇಶ್ವರ ದೇವಾಲಯ ಆವರಣದಲ್ಲಿ ಪರಮ ಪೂಜ್ಯ ಲಿಂ| ಮಡಿವಾಳಯ್ಯ ಸಾಮೀಜಿ ಪುಣ್ಯಸ್ಮರಣೆ ಪ್ರಯುಕ್ತ ಶ್ರೀ ಕೊತ್ತಲ ಬಸವೇಶ್ವರ ಪಂಚಮಂಡಳಿ, ಮಡಿವಾಳೇಶ್ವರ ಭಜನಾ ಮಂಡಳಿ, ಸಪ್ಪಣಾರ್ಯ ದಾಸೋಹ ಸಮಿತಿ, ಲಾಯನ್ಸ್‌ ಕ್ಲಬ್‌, ರೆಡ್‌ ಕ್ರಾಸ್‌ ಸೊಸೈಟಿ, ವಿಶ್ವ ಹಿಂದೂ ಪರಿಷತ್‌, ಭಜರಂಗ ದಳ, ಬಸವ ಬಳಗ, ಅಕ್ಕನ ಬಳಗ, ಯುವ ಬಳಗ ಸಹಯೋಗದಲ್ಲಿ ಹಮ್ಮಿಕೊಂಡ ಬೃಹತ್‌ ರಕ್ತದಾನ ಶಿಬಿರದಲ್ಲಿ ಅವರು ಮಾತನಾಡಿದರು.

ಅನ್ನದಾಸೋಹ, ಜ್ಞಾನದಾಸೋಹದೊಂದಿಗೆ ಭಕ್ತಿ ದಾಸೋಹ ನೀಡುವ ಮೂಲಕ ಭಕ್ತರಲ್ಲಿ ಧಾರ್ಮಿಕತೆ ಶಕ್ತಿ ತುಂಬುವ ಕೆಲಸ ಸಪ್ಪಣಾರ್ಯ ಶಿವಯೋಗಿಗಳು ಮಾಡಿದ್ದರು. ಅವರ ನೆನಪಲ್ಲಿ ನಾಟಕ ಗ್ರಂಥ ರಚಿಸಿರುವುದು ಪೂರಕವಾಗಿದೆ ಎಂದರು.

ಅಪರೂಪದ ಸಾಹಿತಿ ಎಂದೆನಿಸಿಕೊಂಡಿರುವ ಹಿರಿಯ ಸಾಹಿತಿ ಎಲ್‌.ಬಿ.ಕೆ. ಆಲ್ದಾಳ ಅವರ ಅಕ್ಷರಗುಚ್ಚದಲ್ಲಿ ಹೊರಬಂದಿರುವ ಸಪ್ಪಣಾರ್ಯ ಶಿವಯೋಗಿಗಳ ನಾಟಕ ಗ್ರಂಥ ನಿಜಕ್ಕೂ ಬರುವ ಪೀಳಿಗೆಗೆ ದಾರಿದೀಪವಾಗಲಿದೆ ಎಂದು ಹೇಳಿದರು.

ಸಿಪಿಐ ಪಂಚಾಕ್ಷರಿ ಸಾಲಿಮಠ ಮಾತನಾಡಿ, ಶತಮಾನದ ಹಿಂದೆ ಶರಣರು ನಡೆದುಹೋದ ದಾರಿಯನ್ನು ಗ್ರಂಥ ರೂಪದಲ್ಲಿ ತರುವ ಕೆಲಸ ನಿಜಕ್ಕೂ ಪ್ರಶಂಸನೀಯವಾದದ್ದು. ಮಹಾನ್‌ ಶರಣರ ಜೀವನ ಸಾಧನೆ ಇಂದಿನ ಜನತೆಗೆ ದಾರಿದೀಪವಾಗಬೇಕು ಎಂದರು.

Advertisement

ಸಂಸ್ಥಾನದ ಸದಾಶಿವ ಸ್ವಾಮೀಜಿ, ಸಾಹಿತಿ ಎಲ್‌.ಬಿ.ಕೆ. ಅಲ್ದಾಳ, ರೆಡ್‌ ಕ್ರಾಸ್‌ ಸಂಸ್ಥೆ ಅಧ್ಯಕ್ಷ ಡಾ| ಸದಾನಂದ ಬೂದಿ ಮಾತನಾಡಿದರು. ಲಾಯನ್ಸ್‌ ಕ್ಲಬ್‌ ಅಧ್ಯಕ್ಷ ರಮೇಶ ಮಾಲಪಾಣಿ, ವಿಶ್ವಹಿಂದು ಪರಿಷತ್‌ ತಾಲೂಕಾ ಉಪಾಧ್ಯಕ್ಷ ಅನೀಲರೆಡ್ಡಿ ಸಂಗೆಪಲ್ಲಿ, ಭಜರಂಗದಳ ಜಿಲ್ಲಾ ಸಂಯೋಜಕ ಪ್ರೇಮ ಚವ್ಹಾಣ, ಡಾ| ಆಶ್ರಪ್‌, ಡಾ| ಅಲ್ತಾಫ್‌ ಇದ್ದರು. ಜಿಲ್ಲಾ ಕಸಾಪ ಮಾಜಿ ಅಧ್ಯಕ್ಷ ಮಹಿಪಾಲರೆಡ್ಡಿ ಮುನ್ನೂರ ಸ್ವಾಗತಿಸಿದರು, ಪ್ರದೀಪ ಪಾಟೀಲ ಹೊಸಳ್ಳಿ ನಿರೂಪಿಸಿದರು, ವಿಶ್ವಹಿಂದು ಪರಿಷತ್‌ ವಿಭಾಗೀಯ ಸಂ.ಕಾರ್ಯದರ್ಶಿ ಶಿವಕುಮಾರ ಬೋಳಶೆಟ್ಟಿ ವಂದಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next