Advertisement
ಯಾರು ಈ ಲಿಬರ್ಹಾನ್?: ಖ್ಯಾತ ನ್ಯಾಯವಾದಿ ಚೌಧರಿ ಭುಕ್ತಾವರ್ ಸಿಂಗ್‌ರ ಪುತ್ರನೇ ನ್ಯಾ. ಮನಮೋಹನ್ ಸಿಂಗ್ ಲಿಬರ್ಹಾನ್ (ಜನನ- 1938). 1964ರಿಂದ ಹರ್ಯಾಣ ರಾಜ್ಯದ ಅಡ್ವೊಕೇಟ್ ಜನರಲ್ ಆಗಿದ್ದರು. ಮುಂದೆ 1987ರಲ್ಲಿ ಅವರಿಗೆ ಪಂಜಾಬ್ ಮತ್ತು ಹರ್ಯಾಣ ಹೈಕೋರ್ಟ್‌ನ ಕಾಯಂ ನ್ಯಾಯಾಧೀಶರಾಗಿ ಭಡ್ತಿ ನೀಡಲಾಯಿತು. 1992ರಲ್ಲಿ ಬಾಬ್ರಿ ಮಸೀದಿ ವಿವಾದಿತ ಕಟ್ಟಡ ಧ್ವಂಸವಾದಾಗ ನಿಷ್ಕ್ರಿಯವಾಗಿದ್ದ ಆರೋಪಕ್ಕೆ ಸಿಲುಕಿದ್ದ ಪಿ.ವಿ. ನರಸಿಂಹ ರಾವ್ ನೇತೃತ್ವದ ಕೇಂದ್ರ ಸರ್ಕಾರ ಲಿಬರ್ಹಾನ್ ನೇತೃತ್ವದ ಆಯೋಗ ರಚಿಸಿ ಕೈತೊಳೆದುಕೊಂಡಿತು. ತನಿಖಾ ಆಯೋಗದ ಹೆಚ್ಚುವರಿ ಹೊರೆಯ ಜೊತೆ ನ್ಯಾಯಾ ಧೀಶರಾಗಿಯೂ ಮುಂದುವರಿದ ಲಿಬರ್ಹಾನ್ 1997ರಲ್ಲಿ ಮದ್ರಾಸ್ ಹೈಕೋರ್ಟ್‌ನ ಮುಖ್ಯ ನ್ಯಾಯಮೂರ್ತಿಯಾಗಿ ಅ ಧಿಕಾರ ವಹಿಸಿಕೊಂಡರು. 1998ರಲ್ಲಿ ಆಂಧ್ರ ಹೈಕೋರ್ಟ್‌ನ ಮುಖ್ಯ ನ್ಯಾಯಮೂರ್ತಿಯಾಗಿ ವರ್ಗಾವಣೆಗೊಂಡ ಅವರು ಸದ್ಯ ಚಂಡೀಗಢದಲ್ಲಿ ವಿಶ್ರಾಂತ ಜೀವನ ನಡೆಸುತ್ತಿದ್ದಾರೆ.
Related Articles
Advertisement
ವರದಿ ಮಾಡಿದ್ದ 8 ಆರೋಪಗಳು-ಅಡ್ವಾಣಿ, ಮುರಳಿ ಮನೋಹರ ಜೋಷಿ, ಅಟಲ್ ಬಿಹಾರಿ ವಾಜಪೇಯಿ ಸಹಿತ 68 ಮಂದಿ ದಂಡನಾರ್ಹರು. -ಆರ್‌ಎಸ್‌ಎಸ್ ವಿವಾದಿತ ಕಟ್ಟಡ ಧ್ವಂಸದ ಪ್ರಮುಖ ರೂವಾರಿ. -ವಿವಾದಾತ್ಮಕ ಕಟ್ಟಡ ಧ್ವಂಸಗೊಳಿಸುವ ಷಡ್ಯಂತ್ರ ಅನುಷ್ಠಾನಗೊಳಿಸುವಲ್ಲಿ ಉತ್ತರ ಪ್ರದೇಶದಲ್ಲಿ ಕಲ್ಯಾಣ್ ಸಿಂಗ್ ನೇತೃತ್ವದ ಬಿಜೆಪಿ ಸರ್ಕಾರ ಪಾತ್ರ ಪ್ರಮುಖವಾಗಿತ್ತು. -ಅಟಲ್ ಬಿಹಾರಿ ವಾಜಪೇಯಿ, ಎಲ್.ಕೆ. ಅಡ್ವಾಣಿ, ಮುರಳಿ ಮನೋಹರ ಜೋಷಿ “ಪೊಳ್ಳು ಮಂದಗಾಮಿಗಳು’. -ಪೂರ್ಣ ಷಡ್ಯಂತ್ರದ ಮಾಹಿತಿ ಇದ್ದರೂ, ಇವರು ರಾಮಜನ್ಮ ಭೂಮಿ ಆಂದೋಲನದಿಂದ ದೂರ ಇರುವವರಂತೆ ನಾಟಕವಾಡಿದ್ದರು. -ಮಸೀದಿ ಧ್ವಂಸ ಸಂದರ್ಭ ತಟಸ್ಥವಾಗುಳಿಯುವಂತೆ ಆಡಳಿತಾಧಿ ಕಾರಿ, ಪೊಲೀಸ್ ಅ ಧಿಕಾರಿಗಳನ್ನೇ ಅಯೋಧ್ಯೆಯಲ್ಲಿ ನಿಯೋಜಿಸಲಾಗಿತ್ತು. -ಸಂಘ ಪರಿವಾರ ತನ್ನ ಉದ್ದೇಶ ಸಾಧಿ ಸುವುದಕ್ಕೆ ಪೂರಕವಾಗಿ ಕಲ್ಯಾಣ್ ಸಿಂಗ್ ಸರ್ಕಾರ ಅದರ ಕೈಗೊಂಬೆಯಾಗಿತ್ತು. ಕಲ್ಯಾಣ್ ಸಿಂಗ್, ಪರಿವಾರದ ನಿರೀಕ್ಷೆಗೆ ತಕ್ಕಂತೆ ಸ್ಪಂದಿಸಿದರು. -ಸರ್ಕಾರ ತಮಗೆ ಸಹಕಾರ ನೀಡದ ಅಧಿಕಾರಿಗಳನ್ನು ಶಕ್ತಿ ಕೇಂದ್ರಗಳಿಂದ ಕಿತ್ತು ಹಾಕಿತ್ತು. ಹೈಕೋರ್ಟ್ ಮತ್ತು ಸುಪ್ರೀಂ ಕೋರ್ಟ್‌ಗೆ ಸುಳ್ಳು ಮಾಹಿತಿ ಒದಗಿಸಿತ್ತು. ಬಟ್ಟೆಯ ಟೆಂಟ್ ಒಳಗೆ ಬಾಲರಾಮ: ಸಂಜೆ 4.30ರ ಸುಮಾರಿಗೆ ಮೂರು ಗುಮ್ಮಟಗಳು ಧರೆಗುರುಳಿದವು. ಅದೇ ರಾತ್ರಿ ನೆಲ ಸಮತಟ್ಟು ಗೊಳಿಸಿ ಬಟ್ಟೆಯ ಟೆಂಟ್‌ನ ಒಳಗೆ ಬಾಲರಾಮನ ವಿಗ್ರಹಕ್ಕೆ ಪೂಜೆ ನಡೆಯಿತು. ಸುಪ್ರೀಂ ಕೋರ್ಟ್‌ನ ಆದೇಶದಂತೆ ಮಳೆಗಾಳಿಯಿಂದ ರಕ್ಷಿತವಾದ ತಾತ್ಕಾಲಿಕ ರಾಮಮಂದಿರದಲ್ಲೇ 1992ರಿಂದ ಈ ತನಕವೂ ನಿರಂತರ ಪೂಜೆ ಆ ಜನ್ಮಭೂಮಿಯ ತಾಣದಲ್ಲಿ ಜರುಗುತ್ತಿದೆ. 1983ರಲ್ಲಿ ಮೊಳಗಿದ “ಮಂದಿರವಲ್ಲೇ ಕಟ್ಟುವೆವು’ ಎನ್ನುವ ಘೋಷಣೆಗೆ ಪೂರಕವಾದ ಮಂದಿರ ನಿರ್ಮಾಣದ ಕೆತ್ತನೆಯ ಕೆಲಸಗಳ ಬಹುಪಾಲು ಈಗಾಗಲೇ ಮುಗಿದಿದೆ. 268 ಅಡಿ ಉದ್ದ, 140 ಅಡಿ ಅಗಲ, 128 ಅಡಿ ಎತ್ತರದ 2 ಅಂತಸ್ತಿನ, 106 ಕಂಬಗಳ, 24 ಭವ್ಯದ್ವಾರಗಳನ್ನು ಹೊಂದಿರುವ ಶ್ರೀರಾಮ ಮಂದಿರದ ನೀಲಿನಕಾಶೆ 2 ದಶಕಗಳಿಂದ ಕಾಯುತ್ತಿದೆ.