ಪಿರಿಯಾಪಟ್ಟಣ: ರಾಜ್ಯದ ಯಾವ ಕ್ಷೇತ್ರದಲ್ಲಿಯೂ ಬಿಜೆಪಿ ಅಭ್ಯರ್ಥಿಗಳ ಘೋಷಣೆಯಾಗಿಲ್ಲ ಪಿರಿಯಾಪಟ್ಟಣದಲ್ಲಿ ಕೆಲವು ದಿಕ್ಕುತಪ್ಪಿಸುವ ಕೆಲಸ ಮಾಡುತ್ತಿದ್ಧಾರೆ ಎಂದು ಬಿಜೆಪಿ ರಾಜ್ಯಪರಿಷತ್ ಸದಸ್ಯ ಟಿ.ಡಿ. ಗಣೇಶ್ ಹೇಳಿದರು. ತಾಲೂಕಿನ ಕಿರನಲ್ಲಿ ಗ್ರಾಮದಲ್ಲಿ ನಡೆದ ಗ್ರಾಪಂ ಮಟ್ಟದ ಸಮಾಲೋಚನಾ ಸಭೆಯಲ್ಲಿ ಮಾತನಾಡಿ, ಅನೇಕ ರೀರ್ತಿ ಸರ್ವೆ ಕಾರ್ಯದ ನಂತರವೆ ನಿಜವಾದ ಜನಬೆಂಬಲ ಇರುವವರಿಗೆ ಟಿಕೇಟ್ ನೀಡಲಾಗುತ್ತದೆ.
ಈ ಬಗ್ಗೆ ರಾಜ್ಯನಾಯಕರು ಸ್ಪಷ್ಟ ಸಂದೇಶ ರವಾನಿಸಿದ್ದಾರೆ ಎಂದರು. ನಾನು ಎಲ್ಲಿಯೂ ಅಭ್ಯರ್ಥಿ ಎಂದು ಹೇಳಿಕೊಂಡಿಲ್ಲ. ಈ ಹಿಂದಿನ ಚುನಾವಣೆಗಳಲ್ಲಿ ನನಗೆ 30 ಸಾವಿರಕ್ಕೂ ಹೆಚ್ಚು ಮತನೀಡಿದ್ದೀರಿ ಇದರಂತೆ ತಾಲೂಕಿನಾದ್ಯಂತ ಪಕ್ಷಸಂಘಟನೆಗೆ ಮುಂದಾಗಿದ್ದು ಪ್ರತಿ ಹೋಬಳಿ, ಗ್ರಾಮ ಮಟ್ಟದಲ್ಲಿ ಬಿಜೆಪಿಯನ್ನು ಸಂಘಟಿಸುತ್ತೇನೆ.
ತಾಲೂಕಿನಲ್ಲಿ ಜನಪತ್ರಿನಿಧಿಗಳಿಲ್ಲ ಎಂಬ ಚಿಂತೆ ನಿಮಗೆ ಬೇಡ ಬದಲಾಗಿ ಪಕ್ಷ ಅಧಿಕಾರಕ್ಕೆ ಬಂದರೆ ತನ್ನಿಂದ ತಾನೆ ಜನಪತ್ರಿನಿಧಿಗಳು ಪಕ್ಷದ ಅಡಿಯಲ್ಲಿ ಆಯ್ಕೆಯಾಗುತ್ತಾರೆ. ಮೋದಿ ನೇತೃತ್ವದ ಸರಕಾರ ಜನಪರ ಯೋಜನೆಗಳನ್ನು ಜನರಿಗೆ ತಲುಪಿಸಿ ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ತರುವಲ್ಲಿ ಎಲ್ಲರೂ ಶ್ರಮವಹಿಸಬೇಕು ಎಂದು ತಿಳಿಸಿದರು.
ತಾಲೂಕು ಎಸ್ಸಿ ಮೋರ್ಚಾ ಪ್ರಧಾನ ಕಾರ್ಯದರ್ಶಿ ಸೋಮಣ್ಣ ಮಾತನಾಡಿ, ಟಿ.ಡಿ. ಗಣೇಶ್ ನೇತೃತ್ವದಲ್ಲಿ ಬಿಜೆಪಿ ಸಂಘಟನೆಗೆ ಮುಂದಾಗಿದ್ದು. ಈ ಹಿಂದಿನ ಚುನಾವಣೆಗಳಲ್ಲಿ ಟಿ.ಡಿ. ಗಣೇಶ್ ಬಿಜೆಪಿಯಿಂದ ಸ್ಪರ್ಧಿಸಿದ ಸಂದರ್ಭದಲ್ಲಿ 30 ಸಾವಿರಕ್ಕೂ ಹೆಚ್ಚು ಮತದಾರರು ಮತನೀಡಿದ್ದು. ಮುಂದಿನ ದಿನಗಳಲ್ಲಿ ತಾಲೂಕಿನಾದ್ಯಂತ ಇವರ ನೇತೃತ್ವದಲ್ಲಿ ಸಂಘಟನೆ ಮಾಡಲಾಗುವುದು ಎಂದು ಹೇಳಿದರು.
ಬಿಜೆಪಿ ಸೇರ್ಪಡೆ: ವಿವಿಧ ಈ ಹಿಂದು ಸಮಾಜವಾದಿ ಪಕ್ಷದಿಂದ ವಿಧಾನಸಭೆ ಸ್ಪರ್ಧಿಸಿ ಕಾಂಗ್ರೆಸ್ ಸೇರ್ಪಡೆಯಾಗಿದ್ದು ಮುಖಂಡ ನಾರಾಯಣ, ಶಿವಕುಮಾರ್, ಲೋಕೇಶ್, ಪ್ರಸನ್ನ ಸೇರಿದಂತೆ ವಿವಿಧ ಗ್ರಾಮಗಳ ಮುಖಂಡರು ಕಾಂಗ್ರೆಸ್ ತೊರೆದು ಬಿಜೆಪಿ ಸೇರ್ಪಡೆಯಾದರು. ಗ್ರಾಮದ ಯಜಮಾನ ದೇವದಾಸ್, ಸುಂಡವಾಳು ಗ್ರಾಪಂ ಮಾಜಿ ಉಪಾಧ್ಯಕ್ಷ ಮಹದೇವ್, ಮುಖಂಡರಾದ ಜಗದೀಶ್, ಕೆಂಪರಾಜು, ಗಣೇಶ್, ಸುರೇಶ್ ಸೇರಿದಂತೆ ಮತ್ತಿತರರು ಹಾಜರಿದ್ದರು.