ಬೀದರ: ಹಲವಾರು ಸಮೀಕ್ಷೆ ಮತ್ತು ಸಂಶೋಧನೆಗಳ ನಂತರ ಬೀದರ ಖರೇಜ್ ವ್ಯವಸ್ಥೆಯನ್ನು ಐತಿಹಾಸಿಕ ಆಸ್ತಿಯೆಂದು ಗುರುತಿಸಲಾಗಿದೆ. ಪ್ರತಿ ವರ್ಷ ನೀರಿನ ಸಂಪನ್ಮೂಲ ಕೊರತೆ ಎದುರಿಸುವ ಸ್ಥಿತಿ ಬರುತ್ತಿದ್ದು, ಖರೇಜ್ ನಂಥ ಅದ್ಭುತ ವ್ಯವಸ್ಥೆಯಿಂದ ಈ ಕೊರತೆ ನೀಗಿಸಬಹುದು ಎಂದು ಸಚಿವ ಈಶ್ವರ ಖಂಡ್ರೆ ಹೇಳಿದರು. ಖರೇಜ್ ವ್ಯವಸ್ಥೆ ಹಾಗೂ ಸಾಂಸ್ಕೃತಿಕ ಗಡಿ ರೇಖೆ ಕುರಿತಂತೆ ನಗರದ ಝಿರಾ ಕಲ್ಯಾಣ ಮಂಟಪದಲ್ಲಿ ಯೋಜಿಸಿರುವ ಮೂರು ದಿನಗಳ ಅಂತಾರಾಷ್ಟ್ರೀಯ ಸಮ್ಮೇಳನವನ್ನು ರವಿವಾರ ಉದ್ಘಾಟಿಸಿ ಅವರು ಮಾತನಾಡಿದರು.
ಹಾಗಾಗಿ ಖರೇಜ್ ಸಂರಕ್ಷಣೆ, ಪುನರ್ವಸತಿ ಹಾಗೂ ಪ್ರವಾಸೋದ್ಯಮವನ್ನಾಗಿ ಅಭಿವೃದ್ಧಿಪಡಿಸಲು ರಾಜ್ಯ ಸರ್ಕಾರ ಪ್ರಯತ್ನಿಸುತ್ತಿದೆ ಎಂದರು. ಖರೇಜ್ ವ್ಯವಸ್ಥೆ ರಾಜ್ಯದ ಬೀದರ ಮತ್ತು ವಿಜಯಪುರದಲ್ಲಿ ಕಾಣಿಸಿಗುತ್ತದೆ. ಖರೇಜ್ ಅಭಿವೃದ್ಧಿಗಾಗಿ ರಾಜ್ಯ ಸರ್ಕಾರ ಈಗಾಗಲೇ ಪ್ರಸಕ್ತ ಬಜೆಟ್‌ನಲ್ಲಿ 5 ಕೋಟಿ ರೂ. ಅನುದಾನ ಮೀಸಲಿಟ್ಟಿದೆ. ಖರೇಜ್ ನೀರಿನ ಸೌಲಭ್ಯದೊಂದಿಗೆ ಪ್ರವಾಸೋದ್ಯಮ ಬೆಳವಣಿಗೆಗೂ ಅವಕಾಶವಿದೆ. ಹಾಗಾಗಿ ಪ್ರವಾಸೋದ್ಯಮಕ್ಕೆ ಉತ್ತೇಜನ ನೀಡಲು ಪ್ರವಾಸೋದ್ಯಮ ಇಲಾಖೆ 3 ಕೋಟಿ ರೂ. ನೀಡಿದೆ ಎಂದರು.
ವಿದೇಶದಲ್ಲಿರುವ ಖರೇಜ್ ವ್ಯವಸ್ಥೆ, ಭಾರತ ಹಾಗೂ ರಾಜ್ಯದಲ್ಲಿರುವ ವಿಜಯಪುರ, ಖುರಹಾನಪುರ, ಪುಣೆ, ಔರಂಗಾಬಾದ್‌ನಲ್ಲಿ ಖರೇಜ್ ಸಂರಕ್ಷಣೆಯ ಬಗ್ಗೆ ನಡೆಯುತ್ತಿರುವ ಪ್ರಯತ್ನಗಳು, ಖರೇಜ್ ಕುರಿತ ಅನುಭವ, ಪರಿಣತಿ ಹಾಗೂ ಜ್ಞಾನ ಹಂಚಿಕೊಳ್ಳುವ ಉದ್ದೇಶದಿಂದ ಅಂತಾರಾಷ್ಟ್ರೀಯ ಕಾರ್ಯಾಗಾರ ಸಂಘಟಿಸಲಾಗಿದೆ ಎಂದು ಹೇಳಿದರು.
ಕಲಬುರಗಿ ಪ್ರಾದೇಶಿಕ ಆಯುಕ್ತ ಹರ್ಷ ಗುಪ್ತಾ ಮಾತನಾಡಿದರು. ಜಿಲ್ಲಾ ಪಂಚಾಯತ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಡಾ|ಆರ್. ಸೇಲ್ವಮಣಿ ಸ್ವಾಗತಿಸಿದರು. ಇಂಡಿಯನ್ ಹೆರಿಟೇಜ್ ಸಿಟೀಸ್ ನೆಟ್‌ವರ್ಕ್ ಫೌಂಡೇಷನ್ ಅಧ್ಯಕ್ಷ ಡಾ| ಎಂ. ರಾಮಚಂದ್ರನ್ ಸ್ವಾಮಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಯುನೆಸ್ಕೋ ನಿರ್ದೇಶಕ ಶಿಗೇರು ಒಯಾಗಿ ಸಂದೇಶ ಪತ್ರವನ್ನು ಫೌಂಡೇಷನ್ ಕಾರ್ಯನಿರ್ವಾಹಕ ನಿರ್ದೇಶಕ ಕಿಶೋರ ರಾಯ್ಕರ್ ಓದಿದರು.
ಅಪರ ಜಿಲ್ಲಾಧಿಕಾರಿ ಡಾ| ಡಿ.ಷಣ್ಮುಖ, ಲೋಕೋಪಯೋಗಿ ಇಲಾಖೆ ಅಧಿಕಾರಿ ಶಶಿಕಾಂತ ಮಳ್ಳಿ, ಪ್ರವಾಸೋದ್ಯಮ ಇಲಾಖೆಯ ಸಹಾಯಕ ನಿರ್ದೇಶಕ ಕಿಶೋರ ಜೋಷಿ ಹಾಗೂ ಫೌಂಡೇಷನ್ ಸಿಬ್ಬಂದಿ ಇದ್ದರು. ಮೂರು ದಿನಗಳ ಕಾಲ ನಿರಂತರವಾಗಿ ನಡೆಯುವ ಸಮ್ಮೇಳನದಲ್ಲಿ ಇರಾನ್, ಇಮನ್, ಈಜಿಪ್ಟ್, ಮಾರೊಕ್ಕೊ, ಯುಎಸ್‌ಎ, ನೆದರ್‌ಲ್ಯಾಂಡ್, ಸ್ವಿಡನ್, ಅಲ್ಜಿರಿಯಾನಂತಹ ಸುಮಾರು 8 ದೇಶಗಳಿಂದ 12 ವಿದೇಶಿ ಹಾಗೂ ಭಾರತದ ಹಲವು ತಜ್ಞರು ಭಾಗವಹಿಸಲಿದ್ದಾರೆ.
ಪ್ರವಾಸೋದ್ಯಮ ಇಲಾಖೆ, ಜಿಲ್ಲಾಡಳಿತ ಹಾಗೂ ಇಂಡಿಯನ್ ಹೆರಿಟೇಜ್ ಸಿಟೀಸ್ ನೆಟ್‌ವರ್ಕ್ ಫೌಂಡೇಶನ್ (ಐಎಚ್‌ಸಿಎನ್ ಎಫ್), ಯುನೆಸ್ಕೋ, ಅಂತಾರಾಷ್ಟ್ರೀಯ ಸೆಂಟರ್‌ಕನಾತ್ಸ್ (ಐಸಿಕ್ಯೂಎಚ್‌ಎಸ್) ಹೈಡ್ರಾಲಿಕ್ಸ್ ಸ್ಟ್ರಕ್ಚರ್ ಯಾಜ್ಧ ಆರಾತ ಇರಾನ್ (ಇರಾನ್) ಆಶ್ರಯದಲ್ಲಿ ಕಾರ್ಯಕ್ರಮ ಆಯೋಜಿಸಲಾಗಿ¨ .