Advertisement
ಹಾಸ್ಯವೋ , ಭರ್ಜರಿ ಸಾಹಸವೋ , ಸೂಪರ್ ಹಿಟ್ ಹಾಡುಗಳು ಯಾವುದೂ ಇಲ್ಲದೆ ಕೇವಲ ಕಥಾ ವಸ್ತು ಹಲವರನ್ನು ಚಿತ್ರಮಂದಿರದತ್ತ ಸೆಳೆದ ಇತ್ತೀಚಿಗಿನ ಚಿತ್ರ ಇದಾಗಿದೆ. ಬಿಜೆಪಿ ನಾಯಕರು ಸೇರಿ ಹಲವಾರು ಮಂದಿ ಚಿತ್ರ ವೀಕ್ಷಿಸಿ ಮೆಚ್ಚುಗೆಯ ನುಡಿಗಳನ್ನಾಡಿದ್ದಾರೆ. ಇನ್ನೊಂದೆಡೆ ಚಿತ್ರದ ಕುರಿತು ಟೀಕೆಗಳು ಕೇಳಿ ಬಂದಿದ್ದು, ಮಾಧ್ಯಮಗಳಲ್ಲಿ ಮತ್ತು ಚಿತ್ರ ಮಂದಿರಗಳಲ್ಲಿ ಸಣ್ಣ ಮಟ್ಟಿಗಿನ ಸಂಘರ್ಷಕ್ಕೂ ಕಾರಣವಾಗಿಸಲು ಪ್ರಯತ್ನಗಳು ನಡೆಯುತ್ತಿವೆ.
Related Articles
Advertisement
ಬಿಡುಗಡೆಗೂ ಮುನ್ನ ಕಥೆಯ ಮೂಲಕವೇ ಭಾರಿ ಕುತೂಹಲ ಕೆರಳಿಸಿದ್ದ ಚಿತ್ರ ಆರಂಭವಾಗುವುದು ಮುಸ್ಲಿಂ ಹುಡುಗನ ಜತೆ ಹಿಂದೂ ಬಾಲಕ ನೊಬ್ಬ ಕ್ರಿಕೆಟ್ ಆಡುವ ಮೂಲಕ, ರೇಡಿಯೋದಲ್ಲಿ ಕ್ರಿಕೆಟ್ ವೀಕ್ಷಕ ವಿವರಣೆ ಕೇಳಿ ಹಿಂದೂ ಬಾಲಕ ಘೋಷಣೆ ಕೂಗಿ ಸಂಭ್ರಮಿಸುತ್ತಾನೆ, ಅದಾಗುತ್ತಲೇ ಸುತ್ತಲಿದ್ದ ಮುಸ್ಲಿಂ ಯುವಕರು ಬಾಲಕನ ಮೇಲೆ ಹಲ್ಲೆ ಮಾಡುತ್ತಾರೆ. ನಂತರ ಗುಂಡಿನ ಮೊರೆತ ಕೇಳಿಬರುತ್ತದೆ.
ಒಂದೋ ಮತಾಂತರಗೊಳ್ಳಿ, ಇಲ್ಲವಾದಲ್ಲಿ ಓಡಿಹೋಗಿ ಎಂದು ದೊಂಬಿಗಳನ್ನು ಎಬ್ಬಿಸಿ ಜನರನ್ನು ಭಯಭೀತರನ್ನಾಗಿಸಲಾಗುತ್ತದೆ. ಕಾಶ್ಮೀರಿ ಪಂಡಿತರ ಮೇಲೆ ದ್ವೇಷ ಸಾಧಿಸಿದ್ದಾದರೂ ಯಾಕೆ ? ಪರಿಸ್ಥಿತಿ ಎದುರಿಸುವಲ್ಲಿ ಸರಕಾರ ಎಡವಿದ್ದು ಎಲ್ಲಿ? ಹಲವು ಪ್ರಶ್ನೆಗಳಿಗೆ ಚಿತ್ರದ ಮೂಲಕ ಉತ್ತರ ನೀಡುವ ಪ್ರಯತ್ನ ಮಾಡಲಾಗಿದೆ.
ಸಿನಿಮಾದಲ್ಲಿ ರಂಜನೆಯ ಉದ್ದೇಶ ಕಂಡು ಬರುವುದಿಲ್ಲ.ನೋಡುಗರಿಗೆ ಮೂರು ದಶಕದ ಹಿಂದಿನ ಘೋರ ದೃಶ್ಯಗಳನ್ನು ಕಾಣಿಸುವಲ್ಲಿ ಹೆಚ್ಚು ಮಹತ್ವ ನೀಡಲಾಗಿದ್ದು, ಆಗಿನ ಕರಾಳತೆಯನ್ನು ಅನುಭವಿಸಿದ ಯಾತನೆಯ ಬದುಕನ್ನು ಮನಮುಟ್ಟುವಂತೆ ತೋರಿಸಲಾಗಿದೆ.
ಚಿತ್ರದಲ್ಲಿ ಪುಷ್ಕರ್ ನಾಥ್ ಪಂಡಿತ್ (ಅನುಪಮ್ ಖೇರ್) ಮತ್ತು ಅವರ ಕುಟುಂಬ ಮತ್ತು ಅವರು ಹೇಗೆ ನಿರಾಶ್ರಿತರಾಗಿದ್ದರು ಎಂಬುದನ್ನು ವಿವರಿಸಲಾಗಿದೆ. ಮೊದಲಾರ್ಧದಲ್ಲಿ ಹಿನ್ನೆಲೆಯನ್ನು ತೋರಿಸಿದರೆ, ದ್ವಿತೀಯಾರ್ಧದಲ್ಲಿ ಇಂದಿನ ಯುವ ಪೀಳಿಗೆ ಹೇಗೆ ಮತ್ತು ಏಕೆ ತಮ್ಮ ಹಿಂದಿನದನ್ನು ಮರೆಯಬಾರದು ಮತ್ತು ಯಾಕೆ ನೆನಪಿಸಿಕೊಳ್ಳಬೇಕು ಎನ್ನುವುದನ್ನು ಸಾರಿದೆ.
ಮುಗ್ಧ ಜೀವಗಳ ಮೇಲೆ ನಡೆದ ಹಿಂಸಾಚಾರ, ಕ್ರೌರ್ಯ, ಹತ್ಯಾಕಾಂಡ, ಶಾಂತಿ, ಮಾನವ ಹಕ್ಕುಗಳು ಮತ್ತು ರಾಜಕೀಯ ಕಾರ್ಯಸೂಚಿಗಳು ಸಂಘರ್ಷದ ಸಿದ್ಧಾಂತಗಳು ಚಲನಚಿತ್ರವನ್ನು ಹೆಚ್ಚು ಚಿಂತನಶೀಲವಾಗಿಸಿವೆ. ಕಾಶ್ಮೀರಿ ಪಂಡಿತರ ಮೇಲಿನ ಶ್ರಮದಾಯಕ ಸಂಶೋಧನೆ ಮತ್ತು ಹಿಂದಿನ ಆರು ನರಮೇಧಗಳ ನಂತರ ಅವರ ಬದುಕುಳಿಯುವಿಕೆಯ ಕುರಿತು ಚಿತ್ರ ಮಹತ್ವಿಕೆ ತೋರಿದೆ.
ಅನುಪಮ್ ಖೇರ್, ಮಿಥುನ್ ಚಕ್ರವರ್ತಿ ಮತ್ತು ದರ್ಶನ್ ಕುಮಾರ್ ಅವರ ಪಾತ್ರಗಳು ಪರಕಾಯ ಪ್ರವೇಶ ಮಾಡಿ, ಎಲ್ಲರನ್ನೂ ಬೆರಗು ಮೂಡಿಸಿದ್ದಾರೆ.