Advertisement
ರಂಗಕಲೆಯಲ್ಲಿ ಸೈ ಎನಿಸಿದ, ಶ್ರೇಷ್ಠ ರಂಗಭೂಮಿ ಪರಿಣತರ ಮೂಲಕ ಈ ಕಾರ್ಯಕ್ರಮ ಸಾಗಿಬರುತ್ತಿದೆ. ಈ ಬಾರಿ ಶೃಂಗಾರ ರಸದ ವಿಷಯವಾಗಿ ಡಾ| ಶ್ರೀಪಾದ್ ಭಟ್ ಶಿರಸಿ ಅವರು ಅಚ್ಚುಕಟ್ಟಾಗಿ ವಿಷಯದ ವ್ಯಾಖ್ಯಾನ ನೀಡುವ ಮೂಲಕ ಅಭಿನಯದ ವಿವರಣೆ ನೀಡಿದ್ದಾರೆ. ಇದಕ್ಕೆ ಪೂರಕವಾಗಿ ಹೊಸದಿಲ್ಲಿ, ಮುಂಬಯಿ, ಉತ್ತರ ಕನ್ನಡ, ಮೈಸೂರು ಭಾಗದ ಕಲಾವಿದರು ಅಚ್ಚುಕಟ್ಟಾಗಿ ಅಭಿನಯಿಸಿದ್ದಾರೆ. ಸೀಮಿತ ಅವಧಿಯಲ್ಲಿ ಸಿದ್ದಗೊಂಡ ಈ ಪ್ರಸ್ತುತಿಯ ಸಂಕಲನವನ್ನು ನಿತೀಶ್ ರಾವ್, ಸಂಗೀತವನ್ನು ಗೀತಂ ಗಿರೀಶ್ ನೀಡಿ ಮತ್ತಷ್ಟು ಮೆರುಗು ಬರುವಂತೆ ಮಾಡಿದ್ದಾರೆ.
ರಂಗಭೂಮಿಯ ಬಗ್ಗೆ ಅಭಿರುಚಿ ಇರುವವರು ತಾವು ನಟಿಸಿ ತೋರಿಸುವುದಾಗಿ ತಿಳಿಸುತ್ತಿದ್ದಾರೆ. ಜತೆಗೆ ಈ ವಿನೂತನ ಕಾರ್ಯಕ್ರಮಕ್ಕೆ ದೇಶ-ವಿದೇಶಗಳಿಂದ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಒಟ್ಟಾರೆ ಬೇರೆ ಬೇರೆ ಭಾಗಗಳಲ್ಲಿರುವ ರಂಗ ಭೂಮಿಯ ಕಲಾವಿದರನ್ನು ಸಾಮಾಜಿಕ ಜಾಲತಾಣದ ಮೂಲಕ ವಿಶ್ವವ್ಯಾಪ್ತಿಗೆ ಪರಿಚಯಿಸುವ ಕೆಲಸ ಆಗಿದೆ. ಸಾವಿರಾರು ಮಂದಿ ವಿಡಿಯೋವನ್ನು ಆಸ್ವಾದಿಸುವ ಮೂಲಕ ರಂಗಕಲೆಯ ಬಗ್ಗೆ ಆಸಕ್ತಿ ಮೂಡಿಸಿಕೊಳ್ಳುತ್ತಿದ್ದಾರೆ ಎಂದು ಉಡುಪಿ ಸಂಸ್ಕೃತಿ ಪ್ರತಿಷ್ಠಾನದ ಸಂಚಾಲಕ ರವಿರಾಜ್ ಎಚ್.ಪಿ. ಅಭಿಪ್ರಾಯ ಪಟ್ಟಿದ್ದಾರೆ.