Advertisement

Italy ಪ್ರಧಾನಿಯವರನ್ನು ಅಣಕಿಸಿದ್ದ ಪತ್ರಕರ್ತೆಗೆ ದಂಡ!

12:43 AM Jul 19, 2024 | Team Udayavani |

ರೋಮ್‌: ಇಟಲಿ ಪ್ರಧಾನಿ ಜಾರ್ಜಿಯಾ ಮೆಲೋನಿ ಅವರ ಎತ್ತರವನ್ನು ಅಣಕಿಸಿದ್ದ ಪತ್ರಕರ್ತೆಗೆ ಇಟಲಿಯ ಕೋರ್ಟ್‌, 5000 ಯುರೋ(4.57 ಲಕ್ಷ ರೂ.) ದಂಡ ವಿಧಿಸಿದೆ. 2021ರಲ್ಲಿ ಪತ್ರಕರ್ತೆ ಗ್ಯುಲಿಯಾ ಕೊರ್ಟೆಸೆ ಹಾಗೂ ಮತ್ತೂಬ್ಬ ಮಹಿಳೆ ನಡುವೆ ಟ್ವಿಟರ್‌ನಲ್ಲಿ ವಾದ ನಡೆದಿತ್ತು. ಆ ವೇಳೆ ಜಾರ್ಜಿಯಾ ಮೆಲೋನಿ ಎತ್ತರವನ್ನು ಅಣಕಿಸಿದ್ದ ಪತ್ರಕರ್ತೆ, “ನಾಲ್ಕಡಿ ಎತ್ತರ ಇರುವ ಮೆಲೋನಿ ನನ್ನನ್ನು ಬೆದರಿಸಲು ಸಾಧ್ಯ ವಿಲ್ಲ’ ಎಂದು ಕಮೆಂಟ್‌ ಹಾಕಿದ್ದರು. ಈ ಬಗ್ಗೆ ಮೆಲೋನಿ ಪ್ರಕರಣ ದಾಖಲಿಸಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next