Advertisement

ಪತ್ರಕರ್ತನಾಗುವ ಆಸೆ ಹೊಂದಿದ್ದವ ನೇಣಿಗೆ

12:48 PM Jun 03, 2017 | Team Udayavani |

ಬೆಂಗಳೂರು: ಪತ್ರಿಕೋದ್ಯಮದಲ್ಲಿ ಕೆಲಸ ಮಾಡುವ ಅಭಿಲಾಷೆಹೊಂದಿದ್ದ ಯುವಕನೊಬ್ಬ ಮಾಸಿಕ ಖನ್ನತೆಗೊಳಗಾಗಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಘಟನೆ ಚಂದ್ರಲೇಔಟ್‌ನ ವೆಂಕಟೇಶ್ವರ ಲೇಔಟ್‌ನಲ್ಲಿ ಗುರುವಾರ ತಡರಾತ್ರಿ ನಡೆದಿದೆ. ಕೊಪ್ಪಳದ ಗಂಗಾವತಿ ತಾಲೂಕಿನ ಸಲ್ಲಾದ್‌ ಜಿನೂರ್‌(26) ಆತ್ಮಹತ್ಯೆಗೆ ಶರಣಾದವರು.

Advertisement

ನಗರದಲ್ಲಿ ಸಹೋದರನ ಜತೆ ನೆಲೆಸಿದ್ದ ಸಲ್ಲಾದ್‌, ಪತ್ರಿಕೋದ್ಯಮದಲ್ಲಿ ಪದವಿ ಪಡೆದಿದ್ದರು. ಮಾಧ್ಯಮದಲ್ಲಿ ಕೆಲಸ ಹುಡುಕುತ್ತಿದ್ದ ಅವರು, ಹಲವೆಡೆ ಅರ್ಜಿಯನ್ನೂ ಹಾಕಿದ್ದರು. ಆದರೆ ಎಲ್ಲಿಯೂ ಕೆಲಸ ಸಿಕ್ಕಿರಲಿಲ್ಲ. ಈ ನಡುವೆ ರಸ್ತೆ ಅಪಘಾತದಲ್ಲಿ ಕಾಲು ಮುರಿದುಕೊಂಡಿದ್ದರಿಂದ ರಾಡ್‌ ಅಳವಡಿಸಿಕೊಂಡಿದ್ದರು.

ಇದರಿಂದ ಮಾನಸಿಕವಾಗಿ ಕುಗ್ಗಿದ್ದ ಸಲ್ಲಾದ್‌ ಖನ್ನತೆಗೊಳಗಾಗಿದ್ದರು. ಗುರುವಾರ ಸಂಜೆ ಸಹೋದರ ಮತ್ತು ಸ್ನೇಹಿತರು ಮನೆಯಿಂದ ಹೊರಗೆ ಹೋಗಿದ್ದ ಸಮಯದಲ್ಲಿ ಫ್ಯಾನ್‌ಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ರಾತ್ರಿ ಸಹೋದರ ಮನೆಗೆ ಬಂದಾಗ ಘಟನೆ ಬೆಳಕಿಗೆ ಬಂದಿದೆ ಎಂದು ಪೊಲೀಸರು ತಿಳಿಸಿದ್ದಾರೆ. 

Advertisement

Udayavani is now on Telegram. Click here to join our channel and stay updated with the latest news.

Next