Advertisement

ಕೀರ್ತಿ ಆಭರಣ ಕದ್ದಿಲ್ಲ, ಹಲ್ಲೆಯನ್ನೂ ನಡೆಸಿಲ್ಲ

12:21 PM Oct 03, 2018 | Team Udayavani |

ಬೆಂಗಳೂರು: ಕೀರ್ತಿಗೌಡ ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಿ ಮೊದಲ ಪತ್ನಿ ನಾಗರತ್ನ ನೀಡಿದ್ದ ದೂರಿನ ಬಗ್ಗೆ ಮಾಹಿತಿ ಪಡೆಯುವ ಸಲುವಾಗಿ ನಟ ದುನಿಯಾ ವಿಜಯ್‌ ಮಂಗಳವಾರ ಗಿರಿನಗರ ಪೊಲೀಸ್‌ ಠಾಣೆಗೆ ಭೇಟಿ ನೀಡಿದ್ದರು.

Advertisement

ತಮ್ಮ ಪರ ವಕೀಲ ಹಾಗೂ ಎರಡನೇ ಪತ್ನಿ ಕೀರ್ತಿಗೌಡ ಜತೆ ಮಧ್ಯಾಹ್ನ ಠಾಣೆಗೆ ಬಂದ ವಿಜಯ್‌, ಠಾಣಾಧಿಕಾರಿಗಳ ಜತೆ ಕೆಲ ಹೊತ್ತು ಚರ್ಚಿಸಿದರು. ಇದೇ ವೇಳೆ ಪೊಲೀಸರ ಎದುರು ತಮ್ಮ ಹೇಳಿಕೆ ದಾಖಲಿಸಿದ ನಟ, ನನ್ನ ಪತ್ನಿ ಕೀರ್ತಿಗೌಡ ಯಾವುದೇ ತಪ್ಪು ಮಾಡಿಲ್ಲ. ಆಭರಣವನ್ನೂ ಕಳವು ಮಾಡಿಲ್ಲ.

ಹಾಗೇ ಯಾರ ಮೇಲೂ ಹಲ್ಲೆ ನಡೆಸಿಲ್ಲ. ದುರುದ್ದೇಶದಿಂದ ದೂರು ನೀಡಲಾಗಿದೆ ಎಂದು ಹೇಳಿಕೆ ನೀಡಿರುವುದಾಗಿ ಮೂಲಗಳು ತಿಳಿಸಿವೆ. ನಂತರ ಸುದ್ದಿಗಾರರ ಜತೆ ಮಾತನಾಡಿದ ವಿಜಯ್‌, ಪ್ರಕರಣ ಕುರಿತು ಮಾಹಿತಿ ಪಡೆಯಲು ಠಾಣೆಗೆ ಬಂದಿದ್ದು, ಅದರ ಬಗ್ಗೆ ಹೇಳಲು ಸಾಧ್ಯವಿಲ್ಲ ಎಂದು ನಿರ್ಗಮಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next