Advertisement

ಜೆಡಿಎಸ್‌ ಅವಗಣಿಸುವ ಸ್ಥಿತಿ ಈಗಿಲ್ಲ

06:55 AM Mar 24, 2018 | Team Udayavani |

ಜೆಡಿಎಸ್‌ಗೆ ಕಾಪು ಕ್ಷೇತ್ರದಲ್ಲಿ ಬಲವಾದ ಅಸ್ತಿತ್ವ ಇದೆಯೇ?
ಕಳೆದ 13 ತಿಂಗಳುಗಳಿಂದ ಜೆಡಿಎಸ್‌ ಪಕ್ಷ ಸಂಘಟನೆಗೆ ತೊಡಗಿಕೊಂಡಿದೆ. ಪಕ್ಷದ ಸ್ಥಿತಿಗತಿ ಹಿಂದಿನಂತಲ್ಲ. ಸಂಘಟನೆಗಾಗಿ ಬೆಂಗಳೂರಿನಲ್ಲಿ ತರಬೇತುಗೊಂಡಿದ್ದೇವೆ.ಕಾಪು ಕ್ಷೇತ್ರದಲ್ಲಿ ಜೆಡಿಎಸ್‌ 155 ಬೂತ್‌ ಸಮಿತಿಗಳನ್ನು ರಚಿಸಿಕೊಂಡಿದೆ, 60 ಸಮಿತಿಗಳನ್ನು ರಚಿಸಿಕೊಳ್ಳಲಿದೆ. ಬೂತ್‌ ಮಟ್ಟದಿಂದಲೇ ಸುಮಾರು 8 ಮಂದಿಯ ಗುಂಪೊಂದನ್ನು ರಚಿಸಿಕೊಳ್ಳಲಾಗಿದೆ. ಹಿಂದಿನ ಚುನಾವಣೆಗಳಲ್ಲಿ ನಮಗೆ ಬೂತ್‌ಗಳಲ್ಲಿ ಕಾರ್ಯಕರ್ತರ ಕೊರತೆಯಿತ್ತು. ಈ ಬಾರಿ ಅದನ್ನು ನೀಗಿಸಿಕೊಂಡಿದ್ದೇವೆ. ಮತದಾರರನ್ನು ನಾವೂ ತಲುಪುತ್ತಿದ್ದೇವೆ. ಹಿಂದಿನಂತೆ ನಮ್ಮನ್ನು ಅವಗಣಿಸುವಂತಿಲ್ಲ. 

Advertisement

ಅಭ್ಯರ್ಥಿಗಳ ಆಯ್ಕೆಯಾಗಿದೆಯೇ? ಕಗ್ಗಂಟಾಗಬಹುದೇ?
   ಆಕಾಂಕ್ಷಿಗಳು ನಮ್ಮಲ್ಲೂ ಇದ್ದಾರೆ. ಜಾತಿ, ಧರ್ಮಗಳ ಆಧಾರವಾಗಿ ಒಕ್ಕಲಿಗರು, ಅಲ್ಪಸಂಖ್ಯಾಕ ಅಭ್ಯರ್ಥಿ ಅಥವಾ ಇನ್ನಿತರರೂ ಇದ್ದಾರೆ. ಆದರೆ ಆಯ್ಕೆ ಕಗ್ಗಂಟಾಗಿಲ್ಲ. ಜಿಲ್ಲಾಧ್ಯಕ್ಷ ಯೋಗೀಶ್‌ ಶೆಟ್ಟಿ ಹಾಗೂ ಕ್ಷೇತ್ರಾಧ್ಯಕ್ಷನಾದ ನಾನು ಒಕ್ಕಲಿಗರು. ನಾವೂ ಆಕಾಂಕ್ಷಿಗಳೇ ಆಗಿದ್ದೇವೆ. ಅಲ್ಪಸಂಖ್ಯಾಕ ಅಭ್ಯರ್ಥಿ ಆಯ್ಕೆಯನ್ನು ರಾಜ್ಯ ಪ್ರಧಾನ ಕಾರ್ಯದರ್ಶಿ ಬಿ. ಎಂ. ಫಾರೂಕ್‌ ತಾವೇ ನಿರ್ಧರಿಸುವುದಾಗಿ ಹೇಳಿದ್ದಾರೆ. ಅಭ್ಯರ್ಥಿ ಯಾರೇ ಆದರೂ ನಾವು ಈ ಬಾರಿ ಎಲ್ಲರ ಮತ ಗಳಿಸಲಿದ್ದೇವೆ. ನಿರ್ಣಾಯಕರು ನಾವೇ ಆಗಿರುತ್ತೇವೆ.

ಜೆಡಿಎಸ್‌ ಯಾವ ಸಾಧನೆ ಆಧಾರದಲ್ಲಿ ಮತ ಯಾಚಿಸಲಿದೆ?
   ರಾಜ್ಯಾಧ್ಯಕ್ಷ ಕುಮಾರಸ್ವಾಮಿ ಅವರ 20 ತಿಂಗಳ ಆಡಳಿತ ದಲ್ಲಿ ಜನತೆಗೆ ನೀಡಿರುವ ಕಾರ್ಯಕ್ರಮಗಳ ಆಧಾರದ ಮೇಲೆ ನಾವು ಮತ ಯಾಚಿಸಲಿದ್ದೇವೆ. ಎಲ್ಲ ಪಾರ್ಟಿಗಳೂ ಆಂತರಿಕ ಸರ್ವೇ ನಡೆಸಿದ್ದರೂ ಅಂಥ ಸರ್ವೇಗಳನ್ನು ಪರಿಗಣಿಸಲಾಗದು. ಯಾವ ಮತದಾರನನ್ನು ಕೇಳಿದರೂ ಅವರ ಮನದಿಂಗಿತವು ಕುಮಾರಸ್ವಾಮಿಯವರೇ ಮುಂದಿನ ಮುಖ್ಯಮಂತ್ರಿ ಆಗಬೇಕೆಂದಿದೆ. ಇದು ಯಾವ ಸರ್ವೆಯಲ್ಲೂ ಬಿಂಬಿತವಾಗಿಲ್ಲ. ಬಿಜೆಪಿ 5 ವರ್ಷ ಹಗರಣಭರಿತ ಆಡಳಿತವಿತ್ತು ಮುಖ್ಯಮಂತ್ರಿಯೇ ಜೈಲು ಸೇರಿದರು. ಬಳಿಕ ಕಾಂಗ್ರೆಸ್‌ ಆಡಳಿತ ನಡೆಸುತ್ತಿದ್ದು, ಜೆಡಿಎಸ್‌ ಈ 10 ವರ್ಷಗಳಲ್ಲಿ ವನವಾಸ ಅನುಭವಿಸಿದೆ. ಎರಡೂ ಪಕ್ಷಗಳ ಆಡಳಿತವನ್ನು ಕಂಡಿರುವ ಜನತೆ ಮತ್ತೆ ಜೆಡಿಎಸ್‌ ಆಡಳಿತವನ್ನು ಬಯಸಿದೆ. 

ಕಾಪು ಕ್ಷೇತ್ರಕ್ಕೆ ಸಂಬಂಧಿಸಿದ ಯಾವ ಅಂಶಗಳು ತಮ್ಮ ಚುನಾವಣಾ ಪ್ರಣಾಳಿಕೆಯಲ್ಲಿ ಅಡಕವಾಗಿರುತ್ತವೆ?
    ಕಾಪು ಪುರಸಭೆಯಾಗಿದ್ದು ಆರೋಗ್ಯ ಇಲಾಖೆಯಡಿ ಕಾಪು ಸರಕಾರಿ ಆಸ್ಪತ್ರೆಗೆ ಕಾಯಕಲ್ಪ, ಹೆಜಮಾಡಿಯಲ್ಲಿ ಪೂರ್ಣಪ್ರಮಾಣದ ಬಂದರು, ಕಾಪುವಿನಲ್ಲಿ ಎಂಜಿನಿಯರಿಂಗ್‌, ಮೆಡಿಕಲ್‌ ಕಾಲೇಜು ಸ್ಥಾಪನೆ, ಸಮುದ್ರ ಕೊರತೆಕ್ಕೆ ಶಾಶ್ವತ ಪರಿಹಾರ, ಪ್ರವಾಸೋದ್ಯಮಕ್ಕೆ ಪ್ರೋತ್ಸಾಹ, ನಿರುದ್ಯೋಗಿ ಯುವಕರಿಗೆ ಕೆಲಸ ನೀಡಿ ನೇರ ಅವರ ಉಳಿತಾಯ ಖಾತೆಗೆ 6,000 ರೂ. ರವಾನೆ, ಗರ್ಭಿಣಿಯರಿಗೆ ಪೌಷ್ಟಿಕಾಂಶ ನೀಡಿಕೆಗಾಗಿ 5,000 ರೂ., ವೃದ್ಧರ ಖಾತೆಗೆ 5, 000 ರೂ. ನೇರ ರವಾನೆ ಜೆಡಿಎಸ್‌ ಪ್ರಣಾಳಿಕೆಯಲ್ಲಿ ಸೇರಿರುತ್ತವೆ. 
  
– ಆರಾಮ

Advertisement

Udayavani is now on Telegram. Click here to join our channel and stay updated with the latest news.

Next