Advertisement
ರಮೇಶ ನನ್ನ ಅಣ್ಣನೇ ಅಲ್ಲ, ಸಾಯುವವರೆಗೂ ಶತ್ರುಗೋಕಾಕ: “ನನಗೆ ಕಾಂಗ್ರೆಸ್ ಟಿಕೆಟ್ ತಪ್ಪಿಸಲು ರಮೇಶ ಜಾರಕಿಹೊಳಿ ಹರಸಾಹಸ ಪಟ್ಟಿದ್ದಾರೆ. ರಮೇಶ ನನ್ನ ಅಣ್ಣನೇ ಅಲ್ಲ, ಸಾಯುವವರೆಗೂ ಶತ್ರು’ ಎಂದು ಕಾಂಗ್ರೆಸ್ ಅಭ್ಯರ್ಥಿ ಲಖನ್ ಜಾರಕಿಹೊಳಿ ಟೀಕಾಪ್ರಹಾರ ನಡೆಸಿದ್ದಾರೆ. ಭಾನುವಾರ ಸುದ್ದಿಗಾರರ ಜತೆ ಮಾತನಾಡಿದ ಅವರು, “ಇಷ್ಟು ದಿನ ಪ್ರೀತಿಯ ತಮ್ಮ ಎನ್ನುತ್ತಿದ್ದ ರಮೇಶ, ಈಗ ಚುನಾವಣೆಗೆ ಕಾಂಗ್ರೆಸ್ ಟಿಕೆಟ್ ಸಿಕ್ಕ ಮೇಲೆ ನನ್ನನ್ನು ತಮ್ಮ ಅಲ್ಲ ಅಂತಿದ್ದಾರೆ.
ಗೋಕಾಕ: “ರಮೇಶನ ತಲೆಯಲ್ಲಿ ಮೆದುಳೇ ಇಲ್ಲ. ಅವನ ತಲೆ ಮೊಬೈಲ್ ಇದ್ದ ಹಾಗೆ. ಯಾವಾಗ ಬೇಕಾದರೂ ಹ್ಯಾಂಗ್ ಆಗುತ್ತದೆ. ಅವನನ್ನು ಯಾರೂ ಗಂಭೀರವಾಗಿ ಪರಿ ಗಣಿಸಬೇಡಿ’ ಎಂದು ಶಾಸಕ ಹಾಗೂ ಮಾಜಿ ಸಚಿವ ಸತೀಶ ಜಾರಕಿಹೊಳಿ ವ್ಯಂಗ್ಯವಾಡಿದರು. ಸುದ್ದಿಗಾರರೊಂದಿಗೆ ಮಾತನಾಡಿ, “ಹಿಂದಿನ ಕಾಂಗ್ರೆಸ್ ಸರ್ಕಾರದಲ್ಲಿ ರಮೇಶ ಮಂತ್ರಿ ಆಗಲು ಡಿಕೆಶಿ ಹಾಗೂ ಲಕ್ಷ್ಮೀ ಹೆಬ್ಬಾಳ್ಕರ್ ಕಾರಣ. ರಮೇಶ ಓರ್ವ ಹುಚ್ಚ, ಆತನನ್ನೇಕೆ ಮಂತ್ರಿ ಮಾಡಿದಿರಿ ಎಂದು ಡಿಕೆಶಿ ಹಾಗೂ ಹೆಬ್ಬಾಳ್ಕರ್ ವಿರುದ್ಧ ನಾನೇ ಅಸಮಾಧಾನ ಗೊಂಡಿದ್ದೆ.
Related Articles
Advertisement
25 ವರ್ಷ ಕೈ ಚೀಲ ಹಿಡಿದಿದ್ದಾನೆ: ಇನ್ನು ಕಾಂಗ್ರೆಸ್‌ನಲ್ಲಿ ಕೈ ಚೀಲ ಹಿಡಿಯಬೇಕು, ಬಾಗಿಲು ಕಾಯಬೇಕು ಅಂತವರಿಗೆ ಮಾತ್ರ ಬೆಲೆ ಎನ್ನುವ ರಮೇಶ ಸಹ 25 ವರ್ಷ ಕೈ ಚೀಲ ಹಿಡಿದಿದ್ದಾನೆ. ರಾಜಕೀಯ ದಲ್ಲಿ ಬೆಳೆಯುವುದಕ್ಕೆ ಗಾಡ್ ಫಾದರ್ ಬೇಕೇ ಬೇಕು. ಕಾಂಗ್ರೆಸ್, ಜೆಡಿಎಸ್ ಹಾಗೂ ಬಿಜೆಪಿ ಸೇರಿದಂತೆ ಎಲ್ಲ ಪಕ್ಷಗಳಲ್ಲಿಯೂ ಈ ಸಂಸ್ಕೃತಿ ಇದೆ. ಕೈ ಚೀಲ ಹಿಡಿ ಯೋದು ಅಂದರೆ ಚಮಚಾ ಗಿರಿ ಮಾಡುವುದಲ್ಲ. ರಮೇಶ ಜಾರಕಿಹೊಳಿ ಬಿ. ಶಂಕರಾ ನಂದ ಅವರ ಕೈಚೀಲ ಹಿಡಿದು ಓಡಾಡಿ ದ್ದರು. ಹೆಬ್ಬಾಳ್ಕರ್, ಡಿಕೆಶಿ ಹಾಗೂ ರಮೇಶ ಜಾರಕಿಹೊಳಿ ಒಂದೇ ಗ್ರೂಪ್‌ನಲ್ಲಿ ಇದ್ದವರು. ನಂತರ ಅವರವರಲ್ಲಿಯ ಸಮಸ್ಯೆ ಯಿಂದಾಗಿ ರಮೇಶ ಹೊರ ಬಂದಿದ್ದಾರೆ ಎಂದರು.
ಇನ್ಮುಂದೆ ಊಟಕ್ಕೆ ಲಕ್ಷ್ಮೀ ಮನೆಗೇ ಹೋಗುತ್ತೇನೆ: “ರಮೇಶ ತನಗೆ ಹೇಗೆ ಬೇಕು ಹಾಗೆ ಬದಲಾಗುತ್ತಾನೆ. ಸುಳ್ಳು ಹೇಳುವುದರಲ್ಲಿ ಪಿ.ಎಚ್‌ಡಿ ಮಾಡಿದ್ದಾನೆ. ಲಕ್ಷ್ಮೀ ಹೆಬ್ಬಾಳ್ಕರ್ ಮನೆಗೆ ಈ ಹಿಂದೆ ಚಹಾ ಕುಡಿಯಲು ನಾನು ಹೋಗಿದ್ದು ನಿಜ. ಈಗ ಹೋಗಿಲ್ಲ, ಇನ್ನು ಮುಂದೆ ಹೋಗುತ್ತೇನೆ. ಗೋಕಾಕ ಉಸ್ತುವಾರಿಯ ಹೊಣೆಯನ್ನು ಲಕ್ಷ್ಮೀ ಹೆಬ್ಬಾಳ್ಕರ್ ಹೊತ್ತಿರುವುದರಿಂದ ಇನ್ಮುಂದೆ ಚಹಾ, ಊಟಕ್ಕೆ ಲಕ್ಷ್ಮೀ ಮನೆಗೇ ಹೋಗುತ್ತೇನೆ.
ಇನ್ಮುಂದೆ, ನಾನು ಡಿಕೆಶಿ ಹಾಗೂ ಲಕ್ಷ್ಮೀ ಹೆಬ್ಬಾಳ್ಕರ್ ಒಂದೇ. ಮೊದಲಿನಿಂದ ರಮೇಶ ಜಾರಕಿಹೊಳಿ ಸ್ವಾರ್ಥಿ. ನಾನು ಮೊದಲಿನಿಂದಲೂ ರಮೇಶನನ್ನು ವಿರೋ ಧಿಸುತ್ತೇನೆ. ಲಖನ್ ಮೊದಲಿನಿಂದಲೂ ಕಾಂಗ್ರೆಸ್‌ನಲ್ಲಿಯೇ ಇದ್ದಾರೆ. ಸೋಮವಾರ ನಗರದಲ್ಲಿ ಮೆರವಣಿಗೆ ಮೂಲಕ ಸಾಗಿ ಲಖನ್ ಜಾರಕಿಹೊಳಿ ನಾಮಪತ್ರ ಸಲ್ಲಿಸಲಿದ್ದಾರೆ. ಜಿಲ್ಲೆಯ ನಾಯಕರು, ಕಾಂಗ್ರೆಸ್ ಚುನಾವಣಾ ವೀಕ್ಷಕ ಶಿವಾನಂದ ಪಾಟೀಲ್ ಆಗಮಿಸಲಿದ್ದಾರೆ’ ಎಂದು ಸತೀಶ ತಿಳಿಸಿದರು.