Advertisement

ಸಂದರ್ಶನದಲ್ಲಿ ನಿಮ್ಮ ವ್ಯಕ್ತಿತ್ವಕ್ಕೂ ಇದೆ ಪರೀಕ್ಷೆ

12:17 AM Feb 12, 2020 | mahesh |

ಸಂದರ್ಶನ ಎಂದರೆ ವ್ಯಕ್ತಿತ್ವ ಪರೀಕ್ಷೆ ಯಾಗಿದೆ. ನೇಮಕಗೊಳ್ಳುವ ಹುದ್ದೆಗೆ ಬೇಕಾದ ವ್ಯಕ್ತಿತ್ವವನ್ನು ಅಭ್ಯರ್ಥಿಯು ಹೊಂದಿದ್ದಾರೆಯೇ ಎಂಬುದನ್ನು ಪರೀ ಕ್ಷಿಸಲು ಈ ಸಂದರ್ಶನ ನಡೆಸಲಾಗುತ್ತದೆ. ಈ ಅಂಶವನ್ನು ತಿಳಿದುಕೊಳ್ಳುವುದಕ್ಕೆ ವಿವಿಧ ಮಾನದಂಡಗಳನ್ನು ಬಳಸಲಾಗುತ್ತದೆ. ಈ ನಿಟ್ಟಿನಲ್ಲಿ ಸ್ಪರ್ಧಾತ್ಮಕ ಪರೀಕ್ಷೆಗಳ ವ್ಯಕ್ತಿತ್ವ ಪರೀಕ್ಷೆಗೆ ಹೇಗೆ ತಯಾರಿ ನಡೆಸಬೇಕು ಎಂಬುದರ ಮಾಹಿತಿ ಇಲ್ಲಿದೆ.

Advertisement

ಮಾನಸಿಕ ಸಾಮರ್ಥ್ಯ
ನಾಗರಿಕ ಸೇವಾ ಹುದ್ದೆಯಲ್ಲಿ ದೈಹಿಕ ಕಾರ್ಯಗಳಿಗಿಂತ ಮಾನಸಿಕ ಸಾಮರ್ಥ್ಯ ಪ್ರಮುಖ ಪಾತ್ರ ವಹಿಸುತ್ತದೆ. ಅದಕ್ಕಾಗಿ ಅಭ್ಯರ್ಥಿಯ ಮಾನಸಿಕ ಮಟ್ಟವನ್ನು ಪರೀಕ್ಷೆಗೆ ಒಳಪಡಿಸಲಾಗುತ್ತದೆ.

ಕೌಶಲಗಳು
ಆಡಳಿತದಲ್ಲಿ ವಿವಿಧ ಸಮಸ್ಯೆ ಉಂಟಾಗುವುವು. ಅವುಗಳಿಗೆ ಸರಿಯಾದ ಪರಿಹಾರ ಕಂಡುಕೊಳ್ಳಬೇಕಾದರೆ, ಆಡ ಳಿತದ ಕೌಶಲಗಳು ಅಧಿಕಾರಿಯಲ್ಲಿ ಇರ ಬೇಕು. ಆ ರೀತಿಯ ಕೌಶಲಗಳನ್ನು ಸಂದ ರ್ಶನಕ್ಕೆ ಆಯ್ಕೆಯಾದ ಅಭ್ಯರ್ಥಿಯಲ್ಲಿ ಕಂಡುಕೊಳ್ಳುವ ರೀತಿಯ ಪ್ರಶ್ನೆಗಳನ್ನು ಕೇಳಲಾಗುತ್ತದೆ.

ನಿರ್ಣಯ ಕೈಗೊಳ್ಳುವಿಕೆ
ಅಧಿಕಾರಿಯಾದವನು ಪ್ರತಿನಿತ್ಯ ನಿರ್ಣಯಗಳನ್ನು ತೆಗೆದುಕೊಳ್ಳಬೇಕಾ ಗುತ್ತದೆ. ನಿರ್ಣಯ ತೆಗೆದುಕೊಳ್ಳುವಲ್ಲಿ ವಿಳಂಬ ಮಾಡಿದರೆ; ತಪ್ಪು ನಿರ್ಣಯ ಕೈಗೊಂಡರೆ ಇಡೀ ವ್ಯವಸ್ಥೆ ಹಾಳಾಗುತ್ತದೆ. ಅದಕ್ಕಾಗಿ ಉತ್ತಮ ನಿರ್ಣಯ ತೆಗೆದುಕೊಳ್ಳುವ ಚಾಣಕ್ಷತನ ಇದೆಯೇ ಎಂಬುದನ್ನು ಪರೀಕ್ಷಿಸಲಾಗುತ್ತದೆ.

ಪ್ರಾಮಾಣಿಕತನ
ಪ್ರಾಮಾಣಿಕತನ ಇದ್ದಾಗ ಮಾತ್ರ ಉತ್ತಮ ಆಡಳಿತ ನೀಡಲು ಸಾಧ್ಯವಾ ಗುತ್ತದೆ. ಆಗ ಇಡೀ ವ್ಯವಸ್ಥೆ ಅತ್ಯುತ್ತಮ ಮಟ್ಟದಲ್ಲಿ ಇರುತ್ತದೆ. ಇಲ್ಲದಿದ್ದರೆ ಆಡಳಿ ತದಲ್ಲಿ ಅಸ್ತವ್ಯಸ್ತ ಕಂಡು ಬರುತ್ತದೆ. ಆಡಳಿತಕ್ಕೆ ಪ್ರಾಮಾಣಿಕ ಅಧಿಕಾರಿಗಳು ದೊಡ್ಡ ಶಕ್ತಿಯಾಗಿ ಪರಿಣಮಿಸುತ್ತಾರೆ.

Advertisement

ಆಡಳಿತದಲ್ಲಿ ಏನಾದರೂ ತಪ್ಪಾದರೆ ಇಲಾಖೆಯ ಸಿಬಂದಿಯನ್ನು ಸಾರ್ವ ಜನಿಕರು ತರಾಟೆಗೆ ತೆಗೆದುಕೊಳ್ಳುತಾರೆ. ಈ ಹಿನ್ನಲೆಯಲ್ಲಿ ಉತ್ತಮ ಆಡಳಿತ ನಡೆಸಲು ಬುದ್ಧಿಮಟ್ಟ ಉತ್ತಮವಾಗಿರುವುದು ಅವಶ್ಯ.

ಹೊಣೆಗಾರಿಕೆ
ಅಧಿಕಾರ ಮತ್ತು ಹೊಣೆಗಾರಿಕೆ ಎರಡೂ ಜತೆಯಾಗಿ ಹೋಗವುವು. ಕೇವಲ ಅಧಿಕಾರ ನೀಡಿ ಹೊಣೆಗಾರಿಕೆ ಇಲ್ಲದಿದ್ದರೆ ಅರಾಜಕತೆ ಸೃಷ್ಠಿಯಾ ಗುತ್ತದೆ. ಈ ಹಿನ್ನೆಲೆಯಲ್ಲಿ ಅಭ್ಯರ್ಥಿಗೆ ಹೊಣೆ ಗಾರಿಕೆಯನ್ನು ನಿಭಾಯಿಸುವ ಕಲೆ ಇದೆಯೇ ಎಂಬುದನ್ನು ನೋಡುತ್ತಾರೆ.

ತಜ್ಞರೊಂದಿಗೆ ಚರ್ಚೆ
ಒಂದೊಂದು ಕ್ಷೇತ್ರದಲ್ಲಿ ಅಪಾರ ಜ್ಞಾನ ಹೊಂದಿದ ತಜ್ಞರು ಇರುವರು. ಅಂತಹ ತಜ್ಞರನ್ನು ಭೇಟಿಯಾಗಿ ಆ ಕ್ಷೇತ್ರದ ಜ್ಞಾನವನ್ನು ಪಡೆದುಕೊಳ್ಳಬೇಕು. ಇದರಿಂದ ಅಭ್ಯರ್ಥಿಯ ವಿಚಾರ ಶಕ್ತಿ ಹಾಗೂ ವಿಶ್ಲೇಷಣೆ ಶಕ್ತಿ ಅಧಿಕಗೊಳ್ಳುತ್ತದೆ.

ಅಧಿಕಾರಿಗಳೊಂದಿಗೆ ಚರ್ಚೆ
ಯಾವ ಇಲಾಖೆಯ ಬಗೆಗೆ ಪ್ರಶ್ನೆಗಳು ಬರುತ್ತವೆ ಎಂಬುದನ್ನು ತಿಳಿದುಕೊಂಡು ಆ ಇಲಾಖೆಯ ಅಧಿಕಾರಿಗಳ ಜತೆ ಚರ್ಚೆ ಮಾಡಿ. ಆ ಇಲಾಖೆಯ ಕಾರ್ಯಕ್ರಮ, ಯೋಜನೆಗಳು ಹಾಗೂ ಸಮಸ್ಯೆಗಳ ಕುರಿತು ತಿಳಿದುಕೊಳ್ಳುವ ಪ್ರಯತ್ನ ಮಾಡಿ ಹೀಗೆ ಮಾಡುವುದರಿಂದ ಇಲಾಖೆ ಬಗೆಗೆ ಸ್ಪಷ್ಟತೆ ಸಿಗುತ್ತದೆ.

ದಿನಪತ್ರಿಕೆ ಮತ್ತು ನಿಯತಕಾಲಿಕೆ
ಕಳೆದ 6 ತಿಂಗಳಿಂದ ರಾಜ್ಯ, ರಾಷ್ಟ್ರ ಹಾಗೂ ಅಂತಾರಾಷ್ಟ್ರೀಯ ಮಟ್ಟದಲ್ಲಿ ನಡೆದ ಪ್ರಚಲಿತ ಅಂಶಗಳನ್ನು ಅವಲೋಕನ ಮಾಡಬೇಕು. ಈ ಸುದ್ದಿಗಳಿಗೆ ಸಂಬಂಧಪಟ್ಟಂತೆ ವಿವಿಧ ಸುದ್ದಿ ವಾಹಿನಿಗಳಲ್ಲಿ ನಡೆಯುವ ಚರ್ಚೆಗಳನ್ನು ಗಮನಿಸಬೇಕು ಹಾಗೂ ಪ್ರಮುಖ ಸುದ್ದಿಗಳನ್ನು ಟಿಪ್ಪಣಿ ಮಾಡಿಕೊಳ್ಳಬೇಕು.

ಸಾಧಕರೊಂದಿಗೆ ಚರ್ಚೆ
ಈಗಾಗಲೇ ಪಾಸಾಗಿರುವ ಕೆಎಎಸ್‌ ಸಾಧಕರನ್ನು ಭೇಟಿಯಾಗಿ ಅವರ ಅನುಭವ ಪಡೆದುಕೊಳ್ಳಬೇಕು.

Advertisement

Udayavani is now on Telegram. Click here to join our channel and stay updated with the latest news.

Next