Advertisement
ಹೊಸ ವರ್ಷಾಚರಣೆ ನೆಪದಲ್ಲಿ ಈಚೆಗೆ ಸಚಿವ ಸತೀಶ್ ಜಾರಕಿಹೊಳಿ ನಿವಾಸದಲ್ಲಿ ಸಿಎಂ ಬಣದವರು ನಡೆಸಿದ್ದ ಔತಣಕೂಟ ಭಾರೀ ವಿವಾದ ಸೃಷ್ಟಿಸಿದ ಬೆನ್ನಲ್ಲೇ ಜ. 8ರಂದು ಗೃಹ ಸಚಿವ ಡಾ| ಪರಮೇಶ್ವರ ಅವರು ತಮ್ಮ ನಿವಾಸದಲ್ಲಿ ಪರಿಶಿಷ್ಟ ಜಾತಿ, ಪಂಗಡಗಳ ಸಚಿವರು ಮತ್ತು ಶಾಸಕರಿಗೆ ಔತಣಕೂಟ ಏರ್ಪಡಿಸಿದ್ದರು. ಈ ಬಗ್ಗೆ ಕಾಂಗ್ರೆಸ್ ಹೈಕಮಾಂಡ್‌ಗೆ ದೂರು ಹೋದ ಬೆನ್ನಲ್ಲೇ ವರಿಷ್ಠರು ಮಧ್ಯಪ್ರವೇಶಿಸಿ ಸಭೆಯನ್ನು ರದ್ದು ಮಾಡುವಂತೆ ಸೂಚಿಸಿದ್ದಾರೆ.
ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ದಿಲ್ಲಿಯಲ್ಲಿ ಬೀಡುಬಿಟ್ಟಿರುವ ಸಂದರ್ಭದಲ್ಲೇ ಈ ಬೆಳವಣಿಗೆ ನಡೆದಿರುವುದು ಹಲವು ರಾಜಕೀಯ ಚರ್ಚೆಗಳಿಗೆ ಎಡೆ ಮಾಡಿ ಕೊಟ್ಟಿದೆ. ಡಿಕೆಶಿಯವರು ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ.ವೇಣುಗೋಪಾಲ್ ಅವರನ್ನು ಭೇಟಿಯಾಗಿ ಭೋಜನ ಕೂಟಗಳಿಂದ ಪಕ್ಷ ಹಾಗೂ ಸರಕಾರಕ್ಕೆ ಆಗುತ್ತಿರುವ ಹಾನಿಯ ಬಗ್ಗೆ ಮಾಹಿತಿ ನೀಡಿದ್ದಾರೆ ಎನ್ನಲಾಗಿದೆ. ಈಚೆಗೆ ನಡೆದ ಔತಣಕೂಟ ಹಾಗೂ ಅದರ ಬೆನ್ನಲ್ಲೇ ಆರಂಭವಾದ ಚರ್ಚೆಗಳು ಮತ್ತು ಆಯೋಜನೆ ಗೊಂಡಿದ್ದ ಮತ್ತೊಂದು ಔತಣ ಕೂಟದ ಬಗ್ಗೆ ಹೈಕಮಾಂಡ್ ಗಮನ ಸೆಳೆಯು ವಲ್ಲಿ ಯಶಸ್ವಿಯಾಗಿದ್ದಾರೆ ಎಂದು ಹೇಳಲಾಗುತ್ತಿದೆ.
Related Articles
Advertisement
ಕೆಪಿಸಿಸಿ ಅಧ್ಯಕ್ಷ ಸ್ಥಾನವನ್ನು ಪಕ್ಷವೇ ಡಿ.ಕೆ.ಶಿ. ಅವರಿಗೆ ನೀಡಿದೆ ವಿನಾ ಅವರು ಕಿತ್ತುಕೊಂಡಿದ್ದಲ್ಲ. ಈ ಸ್ಥಾನ ಅಲಂಕರಿಸುವ ಆತುರ ಇದ್ದವರು ಸ್ವತಃ ಸಿಎಂ ಸಹಿತ ಯಾರೇ ಆಗಲಿ; ತಮ್ಮ ಮುಂದಿರುವ ಸವಾಲು ತಿಳಿದು, ಪಕ್ಷ ಸಂಘಟನೆಯ ಸಾಮರ್ಥ್ಯ ಇರುವವರು ಆಯ್ಕೆಯಾಗಲಿ ಎಂದು ಮಾಜಿಸಂಸದ ಡಿ.ಕೆ. ಸುರೇಶ್ ಹೇಳಿದ್ದಾರೆ. ರಾಜ್ಯ ಕಾಂಗ್ರೆಸ್‌ನ ಪರಿಶಿಷ್ಟ ಜಾತಿ ಮತ್ತು ಪಂಗಡಗಳ ಸಚಿವರು, ಶಾಸಕರು, ಸಂಸದರು ಹಾಗೂ ಮುಖಂಡರ ಸಭೆಯನ್ನು ಜ. 8ರಂದು ಆಯೋಜಿಸಲಾಗಿತ್ತು. ಆದರೆ ಎಐಸಿಸಿ ಪ್ರಧಾನ ಕಾರ್ಯದರ್ಶಿ ಹಾಗೂ ರಾಜ್ಯದ ಉಸ್ತುವಾರಿ ಸಚಿವ ರಣದೀಪ್ ಸಿಂಗ್ ಸುರ್ಜೇ ವಾಲ ಅವರ ಸೂಚನೆ ಮೇರೆಗೆ ಮುಂದೂಡ ಲಾಗಿದೆ. ಈ ಸಭೆಯ ಮುಂದಿನ ದಿನಾಂಕ ವನ್ನು ಶೀಘ್ರ ತಿಳಿಸಲಾಗುವುದು. – ಡಾ| ಪರಮೇಶ್ವರ, ಗೃಹ ಸಚಿವ ನಾನು ಹೊರದೇಶದಲ್ಲಿದ್ದ ಕಾರಣ ನನಗೆ ಔತಣಕೂಟದ ಬಗ್ಗೆ ಮಾಹಿತಿ ಇಲ್ಲ. ಬೆಂಗಳೂರಿಗೆ ಹೋದ ಅನಂತರ ಇದರ ಬಗ್ಗೆ ತಿಳಿದುಕೊಳ್ಳಲು ಪ್ರಯತ್ನಿಸುತ್ತೇನೆ.
– ಡಿ.ಕೆ. ಶಿವಕುಮಾರ್, ಉಪಮುಖ್ಯಮಂತ್ರಿ
ಗೃಹ ಸಚಿವ ಜಿ. ಪರಮೇಶ್ವರ ಅವರು ಏರ್ಪಡಿಸಿದ್ದ ಔತಣ ಕೂಟ ರದ್ದಾಗಿರುವ ಬಗ್ಗೆ ಗೊತ್ತಿಲ್ಲ. – ಸಿದ್ದರಾಮಯ್ಯ, ಮುಖ್ಯಮಂತ್ರಿ