Advertisement

ಕೆಪಿಸಿಸಿ ಅಧ್ಯಕ್ಷ ಸ್ಥಾನ ಕಿತ್ತುಕೊಂಡಿದ್ದಲ್ಲ, ಪಕ್ಷ ಕೊಟ್ಟಿದ್ದು: ಡಿ.ಕೆ.ಸುರೇಶ್‌

02:42 AM Jan 08, 2025 | Esha Prasanna |

ಬೆಂಗಳೂರು: ಕೆಪಿಸಿಸಿ ಅಧ್ಯಕ್ಷ ಸ್ಥಾನವನ್ನು ಪಕ್ಷವೇ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ಅವರಿಗೆ ನೀಡಿದೆ ಹೊರತು, ಶಿವಕುಮಾರ್‌ ಕಿತ್ತುಕೊಂಡಿದ್ದಲ್ಲ. ಈ ಸ್ಥಾನ ಅಲಂಕರಿಸುವ ಆತುರ ಇದ್ದವರು ಯಾರಾದರೂ ಆಗಲಿ. ಸ್ವತಃ ಸಿಎಂ ಸಿದ್ದರಾಮಯ್ಯ ಅವರೂ ಆಗಬಹುದು ಎಂದು ಮಾಜಿ ಸಂಸದ ಡಿ.ಕೆ. ಸುರೇಶ್‌ ಟಾಂಗ್‌ ಕೊಟ್ಟರು.

Advertisement

ಸಿಎಂ ಸೇರಿದಂತೆ ಅವರ ಆಪ್ತ ಬಣ ಔತಣಕೂಟ ಹಾಗೂ ಕೆಪಿಸಿಸಿ ಅಧ್ಯಕ್ಷರ ಬದಲಾವಣೆ ಸುದ್ದಿ ಬಗ್ಗೆ ಪ್ರತಿಕ್ರಿಯೆ ನೀಡಿದ ಅವರು, ತಮ್ಮ ಮುಂದಿರುವ ಸವಾಲು ತಿಳಿದು ಪಕ್ಷ ಸಂಘಟಿಸುವವರು ಆಯ್ಕೆಯಾಗಲಿ ಎಂದರು.

ಪಕ್ಷದ ಅಧ್ಯಕ್ಷ ಸ್ಥಾನವನ್ನು ಪಕ್ಷದ ವರಿಷ್ಠರಾದ ಸೋನಿಯಾ ಗಾಂಧಿ, ರಾಹುಲ್‌ ಗಾಂಧಿ, ಮಲ್ಲಿಕಾರ್ಜುನ ಖರ್ಗೆ ನೀಡಿದ್ದಾರೆ. ಅಷ್ಟಕ್ಕೂ ಪಕ್ಷದ ಅಧ್ಯಕ್ಷ ಸ್ಥಾನದಲ್ಲಿ ಶಿವಕುಮಾರ್‌ ಇರಬೇಕು ಎಂದೇನಿಲ್ಲ. ಅವರು ನಾಲ್ಕೈದು ವರ್ಷಗಳಿಂದ ಪಕ್ಷ ಸಂಘಟಿಸಿ ಅಧಿಕಾರಕ್ಕೆ ತಂದಿದ್ದಾರೆ. ಆ ಹುದ್ದೆಗೆ ಸತೀಶ್‌ ಜಾರಕಿಹೊಳಿ, ರಾಜಣ್ಣ ಅಥವಾ ಡಾ.ಪರಮೇಶ್ವರ್‌ ಅವರು ಮತ್ತೊಮ್ಮೆ ಆದರೂ ಸಂತೋಷ. ಅಷ್ಟೇ ಯಾಕೆ, ಸ್ವತಃ ಸಿದ್ದರಾಮಯ್ಯ ಅವರೂ ಆಗಬಹುದು ಎಂದರು.

Advertisement

Udayavani is now on Telegram. Click here to join our channel and stay updated with the latest news.

Next