Advertisement

ಚಿನ್ನಾಪುರ ಡೇರಿ ಕಟ್ಟಡ ಉದ್ಘಾಟನೆ

08:37 AM Jul 28, 2020 | Suhan S |

ಕೋಲಾರ: ತಾಲೂಕಿನ ವಕ್ಕಲೇರಿ ಹೋಬಳಿ ಚಿನ್ನಾಪುರ ಹಾಲು ಉತ್ಪಾದಕರ ಸಹಕಾರ ಸಂಘದ ನೂತನ ಕಟ್ಟಡವನ್ನು ಹಾಲು ಒಕ್ಕೂಟದ ನಿರ್ದೇಶಕ ಡಿ.ವಿ. ಹರೀಶ್‌ ಉದ್ಘಾಟಿಸಿದರು.

Advertisement

ಈ ವೇಳೆ ಮಾತನಾಡಿದ ಅವರು, ತಾಲೂಕಾದ್ಯಂತ ಎಲ್ಲಾ ಡೇರಿಗಳ ಸ್ವಂತ ಕಟ್ಟಡ ನಿರ್ಮಾಣಕ್ಕೆ ಪ್ರಾಮಾಣಿಕವಾಗಿ ಶ್ರಮಿ ಸುತ್ತೇನೆ. ನೂತನ ಕಟ್ಟಡ ನಿರ್ಮಾಣಕ್ಕೆ ಒಕ್ಕೂಟದಿಂದ 3 ಲಕ್ಷ ರೂ., ಕರ್ನಾಟಕ ಹಾಲು ಮಹಾ ಮಂಡಳಿ ಯಿಂದ 3 ಲಕ್ಷ ರೂ. ಮತ್ತು ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದ 1 ಲಕ್ಷ ರೂ. ನೀಡಲಾಗುವುದು ಎಂದರು.

ಸದ್ಯದ ಕೋವಿಡ್‌ ಪರಿಸ್ಥಿತಿಯಲ್ಲಿ ಹಾಲಿನ ಉತ್ಪನ್ನಗಳು ಹೆಚ್ಚು ದಾಸ್ತಾನು ಇದ್ದು, ಮಾರಾಟ ಕುಸಿತವಾಗಿದೆ. ಇದರಿಂದ ತಾತ್ಕಾಲಿಕವಾಗಿ ಹಾಲಿನ ದರ ಕಡಿಮೆ ಮಾಡಲಾಗಿದೆ. ಮುಂದಿನ ದಿನಗಳಲ್ಲಿ ಹೆಚ್ಚಿಸಲಾಗುತ್ತದೆ ಎಂದು ಹೇಳಿದರು.ಚಿನ್ನಾಪುರ ಡೇರಿಗೆ ಉಚಿತವಾಗಿ ಕಂಪ್ಯೂಟರ್‌ ಮತ್ತು ಸಮೂಹ ಹಾಲು ಕರೆಯುವ ಯಂತ್ರಗಳನ್ನು ಅಳವಡಿಸಲಾಗು ವುದು ಎಂದು ತಿಳಿಸಿದರು.

ತಾಲೂಕು ಉಪವ್ಯವಸ್ಥಾಪಕ ಡಾ.ಎ. ಸಿ. ಶ್ರೀನಿವಾಸಗೌಡ ಮಾತನಾಡಿ, ಶುದ್ಧ ಮತ್ತು ಗುಣಮಟ್ಟದ ಹಾಲಿನ ಉತ್ಪಾದನೆಗೆ ಒತ್ತು ನೀಡಲು ಸಲಹೆ ನೀಡಿದರು. ಸಂಘಗಳಲ್ಲಿ ಜಿಡ್ಡಿನ ಪರೀಕ್ಷೆ ನಡೆಸಿ ಉತ್ಪಾದಕರಿಗೆ ಗುಣ  ಮಟ್ಟದ ಆಧಾರದ ಮೇಲೆ ದರ ನೀಡಲು ತಿಳಿಸಿದರು. ಕಾರ್ಯಕ್ರಮದಲ್ಲಿ ಸಂಘದ ಅಧ್ಯಕ್ಷ ಕೃಷ್ಣಪ್ಪ, ವಿಸ್ತರಣಾಧಿಕಾರಿ ಶ್ರೀನಿ ವಾಸ್‌, ಆಡಳಿತ ಮಂಡಳಿ ಸದಸ್ಯರು, ಸಿಬ್ಬಂದಿ, ಗ್ರಾಮಸ್ಥರು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next