Advertisement

Kashi ಆರೋಗ್ಯ ರಕ್ಷಣೆಯ ದೊಡ್ಡ ಕೇಂದ್ರವಾಗಿ ಹೊರಹೊಮ್ಮಲಿದೆ: ವಾರಾಣಸಿಯಲ್ಲಿ ಮೋದಿ

06:22 PM Oct 20, 2024 | Team Udayavani |

ವಾರಾಣಸಿ:ಕಾಶಿಯ ಗುರುತು ಬಹಳ ಹಿಂದಿನಿಂದಲೂ ಧರ್ಮ ಮತ್ತು ಆಧ್ಯಾತ್ಮಿಕತೆಯ ಕೇಂದ್ರವಾಗಿದೆ ಆದರೆ ಅದು ಈಗ ಆರೋಗ್ಯ ರಕ್ಷಣೆಯ ದೊಡ್ಡ ಕೇಂದ್ರವಾಗಿ ಹೊರಹೊಮ್ಮಲಿದೆ ಎಂದು ಪ್ರಧಾನಿ ನರೇಂದ್ರ ಮೋದಿ ರವಿವಾರ(ಅ 20) ಹೇಳಿದ್ದಾರೆ.

Advertisement

ವಾರಾಣಸಿ ಲೋಕಸಭಾ ಕ್ಷೇತ್ರದಲ್ಲಿ ಆರ್‌ ಜೆ ಶಂಕರ ಕಣ್ಣಿನ ಆಸ್ಪತ್ರೆಯ ಉದ್ಘಾಟನಾ ಸಮಾರಂಭವನ್ನು ಉದ್ದೇಶಿಸಿ ಪ್ರಧಾನಿ ಮಾತನಾಡಿದರು. ಪೂರ್ವ ಉತ್ತರ ಪ್ರದೇಶವನ್ನು ನಿರ್ಲಕ್ಷಿಸಿದ್ದಕ್ಕಾಗಿ ಹಿಂದಿನ ಸರ್ಕಾರಗಳ ವಿರುದ್ಧ ವಾಗ್ದಾಳಿ ನಡೆಸಿದರು.

“ತಮಸೋ ಮಾ ಜ್ಯೋತಿರ್ಗಮಯ (ಕತ್ತಲೆಯಿಂದ ಬೆಳಕಿನೆಡೆಗೆ ಕರೆದೊಯ್ಯಿರಿ)” ಎಂಬ ಸಂಸ್ಕೃತ ದ್ವಿಪದ್ಯವನ್ನು ಪಠಿಸಿದ ಮೋದಿ, ವಾರಾಣಸಿಗೆ ಮತ್ತೆ ಮರಳಿರುವುದು ದೊಡ್ಡ ಆಶೀರ್ವಾದ ಎಂದು ಭಾವಿಸುತ್ತಿದ್ದೇನೆ ಎಂದರು.

“ದೀರ್ಘಕಾಲದಿಂದ, ಕಾಶಿಯ ಗುರುತು ಧರ್ಮ ಮತ್ತು ಆಧ್ಯಾತ್ಮಿಕತೆಯ ಕೇಂದ್ರವಾಗಿದೆ ಆದರೆ ಈಗ, ವಾರಾಣಸಿಯಲ್ಲಿ ಈಗ ಲಭ್ಯವಿರುವ ವಿವಿಧ ಉನ್ನತ-ಆಫ್-ಲೈನ್ ಆರೋಗ್ಯ ಚಿಕಿತ್ಸಾ ಸೌಲಭ್ಯಗಳೊಂದಿಗೆ ಆರೋಗ್ಯದ ದೊಡ್ಡ ಕೇಂದ್ರವಾಗಿ ಹೊರಹೊಮ್ಮಲು ಸಿದ್ಧವಾಗಿದೆ” ಎಂದರು.

“ಕಳೆದ 10 ವರ್ಷಗಳಲ್ಲಿ, 25 ಕೋಟಿ ಜನರು ಬಡತನದಿಂದ ಹೊರಬಂದಿದ್ದಾರೆ ಮತ್ತು ಅದಕ್ಕಾಗಿಯೇ, ಜನರು ಆರೋಗ್ಯವಾಗಿರುವುದನ್ನು ಖಚಿತಪಡಿಸಿಕೊಳ್ಳಲು ನಮ್ಮ ಸರಕಾರವು ವಿಶೇಷ ಗಮನ ಹರಿಸುತ್ತಿದೆ” ಎಂದರು.

Advertisement

”ನಮ್ಮ ಸರಕಾರ ಈಗ 3 ಕೋಟಿ ಹೊಸ ಮನೆಗಳನ್ನು ನಿರ್ಮಿಸಲು ಹೊರಟಿದೆ. ಬನಾರಸ್‌ನಲ್ಲಿಯೂ ಸಹ ಪ್ರಧಾನಿ ಆವಾಸ್ ಮನೆಗಳನ್ನು ಪಡೆಯದ ಮಹಿಳೆಯರಿಗೆ ಆದಷ್ಟು ಬೇಗ ಈ ಮನೆಗಳನ್ನು ನೀಡಲಾಗುವುದು’ ಎಂದು ಹೇಳಿದರು.

”ನಾನು ಕೆಂಪುಕೋಟೆಯಿಂದ ಕರೆ ನೀಡಿದ್ದೇನೆ. ರಾಜಕೀಯಕ್ಕೆ ಸಂಬಂಧವಿಲ್ಲದ ದೇಶದ ಒಂದು ಲಕ್ಷ ಯುವಕರನ್ನು ರಾಜಕೀಯಕ್ಕೆ ತರುತ್ತೇನೆ.ಇದು ಭಾರತದ ರಾಜಕಾರಣದ ದಿಕ್ಕನ್ನೇ ಬದಲಿಸುವ ಅಭಿಯಾನ. ಭ್ರಷ್ಟಾಚಾರ ಮತ್ತು ಕೌಟುಂಬಿಕ ಮನಸ್ಥಿತಿಯನ್ನು ನಿರ್ಮೂಲನೆ ಮಾಡುವ ಅಭಿಯಾನ ಇದಾಗಿದೆ” ಎಂದು ಹೇಳಿದರು.

ಆರ್. ಜೆ. ಶಂಕರ ನೇತ್ರಾಲಯವು ಕಂಚಿಮಠದಿಂದ ನಡೆಸಲ್ಪಡುತ್ತಿರುವ 14ನೇ ಆಸ್ಪತ್ರೆಯಾಗಿದೆ. ಉದ್ಘಾಟನೆಗೂ ಮುನ್ನ ಪ್ರಧಾನ ಮಂತ್ರಿಗಳು ಕಂಚಿಯ ಶಂಕರಾಚಾರ್ಯರನ್ನು ಭೇಟಿ ಮಾಡಿದರು. ಆಸ್ಪತ್ರೆಯು ಪೂರ್ವ ಉತ್ತರ ಪ್ರದೇಶದ 20 ಜಿಲ್ಲೆಗಳ ಜನರಿಗೆ ಮತ್ತು ಬಿಹಾರ, ಮಧ್ಯಪ್ರದೇಶ ಮತ್ತು ಛತ್ತೀಸ್‌ಗಢದ ಗಡಿ ಪ್ರದೇಶಗಳಲ್ಲಿ ವಾಸಿಸುವವರಿಗೆ ಪ್ರಯೋಜನವಾತ್ತದೆ ಎಂದು ಕಂಚಿ ಮಠದ ಪ್ರತಿನಿಧಿಗಳು ಹೇಳಿದ್ದಾರೆ.

ಜೂನ್ 18 ರ ಬಳಿಕ ವಾರಾಣಸಿಗೆ ಪ್ರಧಾನಿ ಮೋದಿಯವರ ಮೊದಲ ಭೇಟಿ ಇದಾಗಿದೆ. ಪ್ರಧಾನಮಂತ್ರಿ ಕಾರ್ಯಾಲಯ (ಪಿಎಂಒ) ಬಿಡುಗಡೆ ಮಾಡಿದ ಹೇಳಿಕೆಯ ಪ್ರಕಾರ, ಲಾಲ್ ಬಹದ್ದೂರ್ ಶಾಸ್ತ್ರಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಸುಮಾರು ರೂ. 2,870 ಕೋಟಿ.ರೂ. ಮೊತ್ತದ ರನ್‌ವೇ ವಿಸ್ತರಣೆ, ಹೊಸ ಟರ್ಮಿನಲ್ ಕಟ್ಟಡದ ನಿರ್ಮಾಣ ಕಾಮಗಾರಿಗೆ ಚಾಲನೆ ನೀಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next