Advertisement
ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಒತ್ತಾಯಿಸಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಪಿಡಿಒಗಳು ಸೇರಿದಂತೆ ಎಲ್ಲಾ ವೃಂದ ನೌಕರರ ಸಂಘಗಳ ಒಕ್ಕೂಟದಿಂದ ಹಲವು ಬೇಡಿಕೆಗಳ ಈಡೇರಿಕೆಗಾಗಿ ಆಗ್ರಹಿಸಿ ನಾಲ್ಕು ದಿನಗಳಿಂದ ಕೆಲಸ ಕಾರ್ಯಗಳನ್ನು ಸ್ಥಗಿತಗೊಳಿಸಿ ಪ್ರತಿಭಟನೆ ಮಾಡು ತ್ತಿದ್ದು, ಸಾರ್ವಜನಿಕವಾಗಿ ಸಮಸ್ಯೆ ಸೃಷ್ಟಿಯಾಗಿದೆ. ರಾಜ್ಯದ ಎಲ್ಲ ಗ್ರಾಪಂ ಅಭಿವೃದ್ಧಿ ಅಧಿಕಾರಿಗಳ ಹುದ್ದೆಗಳನ್ನು ಬಿ ಗುಂಪಿನ ಹುದ್ದೆಗಳಾಗಿ ಉನ್ನತೀಕರಿಸ ಬೇಕು, ವೇತನ ಶ್ರೇಣಿ ನಿಗದಿ ಮಾಡಬೇಕು, ಮುಂ ಬಡ್ತಿ ವಂಚಿತರಿಗೆ ಕಾಲಮಿತಿಯೊಳಗೆ ಮುಂಬಡ್ತಿ ನೀಡ ಬೇಕು ಎಂಬುದು ಸೇರಿ ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ನೌಕರರು ಪ್ರತಿಭಟನೆಯಲ್ಲಿ ತೊಡಗಿದ್ದಾರೆ.
Related Articles
Advertisement
ಮುಷ್ಕರ ಮುಂದುವರಿದರೆ ಗ್ರಾಮ ಆಡಳಿತ ವ್ಯವಸ್ಥೆ ಸಂಪೂರ್ಣ ಕುಸಿಯಲಿದೆ. ಆದ್ದರಿಂದ ಜರೂರಾಗಿ ಸಮಸ್ಯೆಗಳನ್ನು ಪರಿಹರಿಸಬೇಕು. ಸರ್ಕಾರವು ಇವರ ಸಮಸ್ಯೆಗಳನ್ನು ಬಗೆಹರಿಸಲು ಮಾತುಕತೆ ನಡೆಸಬೇಕು. ಇಲ್ಲದಿದ್ದರೆ ಸಮಸ್ಯೆ ಹೆಚ್ಚಲ್ಲಿದೆ. ●ಆದಿನಾರಾಯಣ ಕುಟ್ಟಿ, ಕಾಮಸಮುದ್ರ ಗ್ರಾಪಂ ಅಧ್ಯಕ್ಷ
ವರ್ಷವಿಡೀ ಗ್ರಾಮೀಣ ಪ್ರದೇಶದಲ್ಲಿ ಮೂಲ ಸೌಲಭ್ಯಗಳನ್ನು ಕಲ್ಪಿಸಲು ದುಡಿಯುತ್ತಿದ್ದೇವೆ. ಆದರೆ, ಸರ್ಕಾರ ಗ್ರಾಪಂ ಅಧಿಕಾರಿ-ಸಿಬ್ಬಂದಿಗೆ ಕಾಡುತ್ತಿರುವ ಸಮಸ್ಯೆ ನಿವಾರಿಸುವಲ್ಲಿ ಪೂರ್ಣ ವಿಫಲವಾಗಿದೆ. ಸರ್ಕಾರಗಳ ಚಕ್ರ ನಡೆಯಬೇಕಾದರೆ ಗ್ರಾಪಂಗಳ ಕಾರ್ಯಸೇವೆ ಹೆಚ್ಚು ಮಹತ್ವವನ್ನು ಪಡೆದಿದ್ದರೂ ಗ್ರಾಪಂ ನೌಕರರ ಸಮಸ್ಯೆಗಳಿಗೆ ಸ್ಪಂದಿಸುತ್ತಿಲ್ಲ. ಬೆಂಗಳೂರಿನ ಫ್ರೀಢಂ ಪಾರ್ಕಿನಲ್ಲಿ ಒಂದು ವಾರದಿಂದ ಪ್ರತಿಭಟನೆ ನಡೆಸಿದರೂ ಸರ್ಕಾರವಾಗಲೀ, ಇಲಾಖೆ ಸಚಿವರು ಸ್ಪಂದಿಸಿಲ್ಲ. ●ಕೆ.ಎಂ.ವೇಣು, ತಾಲೂಕು ಗ್ರಾಪಂಗಳ ಪಿಡಿಒ ಸಂಘದ ಅಧ್ಯಕ್ಷ
ಹಲವು ವರ್ಷಗಳಿಂದಲೂ ಗ್ರಾಪಂಗಳ ಅಧಿಕಾರಿ-ಸಿಬ್ಬಂದಿಗಳು ತಮ್ಮ ಸಮಸ್ಯೆಗಳನ್ನು ಬಗೆಹರಿಸುವಂತೆ ಒತ್ತಾಯಿಸಿ ವರ್ಷಕ್ಕೊಮ್ಮೆ ಪ್ರತಿಭಟಿಸುತ್ತಿದ್ದರು. ಪ್ರಸ್ತುತ ರಾಜ್ಯಾಧ್ಯಂತ 1 ವಾರದಿಂದ ಗ್ರಾಪಂ ಅಧಿಕಾರಿಗಳು, ಸಿಬ್ಬಂದಿ ತಮ್ಮ ಕರ್ತವ್ಯಕ್ಕೆ ಹಾಜರಾಗದೇ ಬೆಂಗಳೂರಿನಲ್ಲಿ ಹೋರಾಟಕ್ಕಿಳಿದ ಕಾರಣ ಸಮಸ್ಯೆ ಸೃಷ್ಟಿಯಾಗಿದೆ. ಆದಷ್ಟು ಬೇಗ ರಾಜ್ಯ ಸರ್ಕಾರ ಹಾಗೂ ಸಚಿವರು ಭೇಟಿಯಾಗಿ ಸಮಸ್ಯೆಗಳನ್ನು ಬಗೆಹರಿಸಬೇಕಾಗಿದೆ. ●ಎಚ್.ರವಿಕುಮಾರ್, ಬಂಗಾರಪೇಟೆ ತಾಪಂ ಇಒ
–ಎಂ.ಸಿ.ಮಂಜುನಾಥ್