Advertisement
ಕಾರ್ಡ್ ರಸ್ತೆ ಶೀಘ್ರ ಸಿಗ್ನಲ್ ಮುಕ್ತಯೋಜನೆ: ಸಿಗ್ನಲ್ ಮುಕ್ತ ಕಾರಿಡಾರ್ ವ್ಯವಸ್ಥೆ ಕಲ್ಪಿಸುವ ಉದ್ದೇಶದಿಂದ ಪಶ್ಚಿಮ ಕಾರ್ಡ್ ರಸ್ತೆ ಬಸವೇಶ್ವರ ನಗರ, ಮಂಜುನಾಥ ನಗರ ಹಾಗೂ ಶಿವನಗರದಲ್ಲಿ ಮೇಲ್ಸೇತುವೆ ಗಳನ್ನು ನಿರ್ಮಿಸಲಾಗುದ್ದು, ಯೋಜನೆ ಯಿಂದ ಕಾರ್ಡ್ ರಸ್ತೆ ಸಿಗ್ನಲ್ ಮುಕ್ತವಾಗಲಿದೆ.
Related Articles
-ಪಾಲಿಕೆ ಸಹಾಯಕ ಎಂಜಿನಿಯರ್
Advertisement
ಮೂರನೇ ಹಂತ ಕಾಮಗಾರಿ ಆರಂಭಯೋಜನೆ: ನಗರದಲ್ಲಿನ ಪಾರ್ಕಿಂಗ್ ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವ ಉದ್ದೇಶದಿಂದ ಪಾಲಿಕೆಯಿಂದ ಗಾಂಧಿನಗರದ ಫ್ರೀಡಂ ಪಾರ್ಕ್‌ನಲ್ಲಿ ಬಹುಮಹಡಿ ವಾಹನ ನಿಲುಗಡೆ ತಾಣ ನಿರ್ಮಿಸಲಾಗುತ್ತಿದ್ದು, ಕಾಮಗಾರಿ ಪೂರ್ಣಗೊಂಡ ನಂತರ 556 ಕಾರುಗಳು ಮತ್ತು 500 ದ್ವಿಚಕ್ರ ವಾಹನಗಳ ನಿಲುಗಡೆ ಮಾಡಬಹುದಾಗಿದೆ. ಗುತ್ತಿಗೆದಾರ: ಕೆಎಂವಿ ಪ್ರಾಜೆಕ್ಟ್ ಈ ತಿಂಗಳ ಪ್ರಗತಿ: ಮೊದಲ ಹಂತದಲ್ಲಿ ಒಂದು ಮಹಡಿಯನ್ನು ಪಾರ್ಕಿಂಗ್‌ಗಾಗಿ ಸಿದ್ಧಗೊಳಿಸಲಾಗಿದೆ. ಜತೆಗೆ ಎರಡು ಹಂತಗಳ ಕಟ್ಟಡ ನಿರ್ಮಾಣ ಕಾಮಗಾರಿಯ ಎಲ್ಲ ಮೇಲ್ಛಾವಣಿಗಳ ನಿರ್ಮಾಣ ಕಾರ್ಯ ಪೂರ್ಣಗೊಂಡಿದ್ದು, ಪ್ಲಾಸ್ಟಿಂಗ್ ಕೆಲಸ ಮುಗಿದಿದೆ. ವಸ್ತುಸ್ಥಿತಿ: ನಾಲ್ಕು ಹಂತಗಳ ಕಾಮಗಾರಿಯ ಪೈಕಿ ಎರಡು ಹಂತಗಳು ಪೂರ್ಣಗೊಳಿಸಿ, ಒಂದು ಮಹಡಿಯಲ್ಲಿ ಪಾರ್ಕಿಂಗ್ ಸೇವೆ ಕಲ್ಪಿಸಲು ಅಗತ್ಯ ವ್ಯವಸ್ಥೆ ಕಲ್ಪಿಸಲಾಗಿದ್ದು, ಗುರುವಾರ (ಮಾ.1)ರಂದು ಉದ್ಘಾಟನೆಯಾಗಿದೆ. ಇದೀಗ ಮೂರನೇ ಹಂತ ಕಾಮಗಾರಿಗೆ ಪಾಯ ಹಾಕುವ ಕೆಲಸ ಆರಂಭಿಸಲಾಗಿದೆ. ಎರಡು ಹಂತಗಳ ಕಾಮಗಾರಿ ಪೂರ್ಣಗೊಂಡಿದ್ದು, ಪ್ರಸ್ತುತ ಒಂದು ಮಹಡಿ ವಾಹನಗಳ ಪಾರ್ಕಿಂಗ್‌ಗೆ ಮುಕ್ತವಾಗಿದೆ. ಅದರಂತೆ ಮೂರನೇ ಹಂತದ ಕಾಮಗಾರಿಗೆ ಪಾಯ ಹಾಕಲಾಗಿದೆ. ಮೂರು ಹಂತಗಳ ಕಾಮಗಾರಿ ಪೂರ್ಣಗೊಂಡ ನಂತರದಲ್ಲಿ ಮೂರು ಮಹಡಿಗಳಿಗೆ ಸಂಪರ್ಕಿಸುವ ರ್‍ಯಾಂಪ್‌ಗ್ಳನ್ನು ನಿರ್ಮಿಸಲಾಗುವುದು. ಮೊದಲ ಹಂತವಾಗಿ ಒಂದು ಮಹಡಿಯಲ್ಲಿ ವಾಹನ ನಿಲುಗಡೆ ಅವಕಾಶ ಕಲ್ಪಿಸಲು ಶೀಘ್ರದಲ್ಲಿಯೇ ಟೆಂಡರ್ ಕರೆಯಲಾಗುವುದು.
-ಪಾಲಿಕೆ ಎಂಜಿನಿಯರ್ ಮೇಲ್ಸೇತುವೆ, ಅಂಡರ್‌ಪಾಸ್‌ಗೆ ಚಾಲನೆ
ಯೋಜನೆ: ದೇವರಾಜ ಅರಸು ವೃತ್ತದಿಂದ ಓಕಳಿಪುರ ವೃತ್ತದವರೆಗಿನ ಎಂಟು ಪಥದ ಸಿಗ್ನಲ್ ಮುಕ್ತ ಕಾರಿಡಾರ್ ಯೋಜನೆ. ಈ ಯೋಜನೆಯಿಂದ ಗುಬ್ಬಿ ತೋಟದಪ್ಪ ರಸ್ತೆ, ಶೇಷಾದ್ರಿ ರಸ್ತೆ, ಓಕಳಿಪುರ ರಸ್ತೆ ಹಾಗೂ ಕೃಷ್ಣಮಿಲ್ ರಸ್ತೆಗಳಲ್ಲಿನ ಸಂಚಾರ ಸಿಗ್ನಲ್ ಮುಕ್ತವಾಗಲಿದೆ. ಈ ತಿಂಗಳ ಪ್ರಗತಿ: ಮಲ್ಲೇಶ್ವರ ಕಡೆಯಿಂದ ರಾಜಾಜಿನಗರ ಕಡೆಗೆ ಸಂಪರ್ಕಿಸುವ ಅಂಡರ್‌ಪಾಸ್ ಹಾಗೂ ನಗರ ರೈಲ್ವೆ ನಿಲ್ದಾಣದಿಂದ ರಾಜಾಜಿನಗರದ ಕಡೆಗೆ ಹೋಗುವ ರಸ್ತೆ ಹಾಗೂ ಮಲ್ಲೇಶ್ವರದ ಕಡೆಗೆ ಹೋಗುವ ಮೇಲ್ಸೇತುವೆಗಳನ್ನು ಸಾರ್ವಜನಿಕರಿಗೆ ಮುಕ್ತಗೊಳಿಸಲಾಗಿದೆ. ವಸ್ತುಸ್ಥಿತಿ: ಇತ್ತೀಚೆಗೆ ಮುಖ್ಯಮಂತ್ರಿಗಳು ಮೇಲ್ಸೇತುವೆ ಹಾಗೂ ಅಂಡರ್‌ಪಾಸ್ ಉದ್ಘಾಟಿಸಿದ್ದಾರೆ. ಅದರಂತೆ ಇದೀಗ ರೈಲ್ವೆ ನಿಲ್ದಾಣದಿಂದ ನಗರಕ್ಕೆ ಸಂಪರ್ಕಿಸುವ ಲೂಪ್ ನಿರ್ಮಾಣ ಕಾರ್ಯವನ್ನು ಕೈಗೆತ್ತಿಕೊಂಡಿದ್ದಾರೆ. ನಗರ ರೈಲ್ವೆ ನಿಲ್ದಾಣದಿಂದ ಮಲ್ಲೇಶ್ವರಕ್ಕೆ ಹೋಗುವ ಮೇಲ್ಸೇತುವೆ ಸಾರ್ವಜನಿಕರಿಗೆ ಮುಕ್ತಗೊಳಿಸಲಾಗಿದ್ದು, ನಗರಕ್ಕೆ ಸಂಪರ್ಕಿಸುವ ಲೂಪ್ ನಿರ್ಮಾಣ ಕಾಮಗಾರಿ ಪ್ರಗತಿಯಲ್ಲಿದೆ. ಮಲ್ಲೇಶ್ವರದಿಂದ ರೈಲ್ವೆ ನಿಲ್ದಾಣಕ್ಕೆ ಸಂಪರ್ಕಿಸುವ ಲೂಪ್-2 ನಿರ್ಮಾಣ ಕಾಮಗಾರಿ ಹಾಗೂ ರೈಲ್ವೆ ಹಳಿ ಕಳೆಗೆ ನಾಲ್ಕು ಎಲಿಮೆಂಟ್ ಅಳವಡಿಸುವ ಕಾಮಗಾರಿ ಮಾತ್ರ ಬಾಕಿಯಿದೆ.
-ಪಾಲಿಕೆ ಸಹಾಯಕ ಎಂಜಿನಿಯರ್ ಭೂಸ್ವಾಧೀನ ಪರಿಹಾರ ಅಪಸ್ವರ
ಕಾಮಗಾರಿ ಪ್ರಗತಿ: ಶೇ. 20-25 ಬಾಕಿ ಇರುವ ಕಾಮಗಾರಿ: ಕಂಬಗಳ ನಿರ್ಮಾಣ, ಹಳಿಗಳ ಜೋಡಣೆ, ವಿದ್ಯುತ್ ಲೈನ್ ಜೋಡಣೆ, ನಿಲ್ದಾಣಗಳ ನಿರ್ಮಾಣ ಕಾಮಗಾರಿ, ಪ್ರಾಯೋಗಿಕ ಸಂಚಾರ. ವಸ್ತುಸ್ಥಿತಿ: ಐಟಿ-ಬಿಟಿ ಹಬ್ ವೈಟ್‌ಫೀಲ್ಡ್‌ಗೆ ಸಂಪರ್ಕ ಕಲ್ಪಿಸುವ ಉದ್ದೇಶಿತ ಮಾರ್ಗವು ಬಿಎಂಆರ್‌ಸಿ ಪಾಲಿಗೆ ಅತ್ಯಂತ ಮಹತ್ವದ್ದಾಗಿದೆ. ಕೈಗಾರಿಕೆಗಳು ಕೂಡ ಈ ಮಾರ್ಗದಲ್ಲಿ ಹೆಚ್ಚು ಬರುತ್ತದೆ. ಈ ಹಿನ್ನೆಲೆಯಲ್ಲಿ ಆದ್ಯತೆ ಮೇರೆಗೆ ಇದನ್ನು ಕೈಗೆತ್ತಿಕೊಳ್ಳಬೇಕಿತ್ತು. ಆದರೆ, ಈಗಷ್ಟೇ ಅಡಿಪಾಯ ಹಾಕುವ ಕೆಲಸ ಮುಗಿದಿದ್ದು, ಕಂಬಗಳ ನಿರ್ಮಾಣ ಇನ್ಮುಂದೆ ಶುರುವಾಗಲಿದೆ. ಮೂರು ಪ್ಯಾಕೇಜ್‌ಗಳಲ್ಲಿ ಕಾಮಗಾರಿ ಗುತ್ತಿಗೆ ನೀಡಿದ್ದು, ಭೂಸ್ವಾಧೀನ ಪ್ರಕ್ರಿಯೆ ಬಹುತೇಕ ಪೂರ್ಣಗೊಂಡಿದೆ. ವಿಳಂಬಕ್ಕೆ ಕಾರಣ: ಒಟ್ಟಾರೆ 15.50 ಕಿ.ಮೀ. ಪೈಕಿ ಕೆ.ಆರ್.ಪುರದ ಲೌರಿ ಮೆಮೋರಿಯಲ್ ಸ್ಕೂಲ್‌ನಿಂದ ಮಹದೇವಪುರ ನಡುವಿನ ಎರಡು ಕಿ.ಮೀ. ಮಾರ್ಗದಲ್ಲಿ ಕೆ.ಆರ್. ಪುರ, ಜಿ. ನಾರಾಯಣಪುರ, ವಿಜಿನಾಪುರ ಮತ್ತು ಮಹದೇವಪುರ ಗ್ರಾಮಗಳು ಬರುತ್ತವೆ. ಇಲ್ಲಿ ಸ್ವಾಧೀನಪಡಿಸಿಕೊಳ್ಳುವ ಭೂಮಿಗೆ ಪ್ರತಿಯಾಗಿ ನೀಡುವ ಪರಿಹಾರದ ವಿಚಾರದಲ್ಲಿ ಅಪಸ್ವರ ಕೇಳಿಬಂದಿತ್ತು. ಚದರಡಿಗೆ 3,500ರಿಂದ 4 ಸಾವಿರ ರೂ. ನೀಡಲಾಗುತ್ತಿದೆ. ಆದರೆ, ಇದೇ ಯೋಜನೆಗೆ ಅಕ್ಕಪಕ್ಕ ವಶಪಡಿಸಿಕೊಂಡ ಭೂಮಿಗೆ ಚದರಡಿಗೆ 8ರಿಂದ 10 ಸಾವಿರ ರೂ. ನೀಡಲಾಗುತ್ತಿದೆ ಎಂಬ ಕಾರಣಕ್ಕೆ ಸ್ಥಳೀಯರು ಆಕ್ಷೇಪ ಎತ್ತಿದ್ದರು. ಈಚೆಗೆ ದುಪ್ಪಟ್ಟು ಪರಿಹಾರ ಘೋಷಣೆ ಮಾಡಿ, ಭೂಸ್ವಾಧೀನಪಡಿಸಿಕೊಳ್ಳಲಾಗುತ್ತಿದೆ. ಇದು ಯೋಜನೆ ಮೇಲೂ ಪರಿಣಾಮ ಬೀರಲು ಕಾರಣವಾಯಿತು. ಮಾಹಿತಿ: ವೆಂ. ಸುನೀಲ್ ಕುಮಾರ್, ವಿಜಯ್‌ಕುಮಾರ್ ಚಂದರಗಿ