Advertisement
ಇಂತಹದ್ದೊಂದು ಬದಲಾವಣೆಗೆ ಕಾರಣರಾದವರು ವಾಯು ಸೇನೆಯ ಮಾಜಿ ಪೈಲೆಟ್ ಪ್ರತಾಪ್ ಭೀಮಸೇನ ರಾವ್. ರಸ್ತೆ ಗುಂಡಿಗಳನ್ನು ಮುಚ್ಚುವ ಉದ್ದೇಶದಿಂದಲೇ ಪ್ರತಾಪ್ ಅವರು 2016ರಲ್ಲಿ “ಪಾಟ್‌ಹೋಲ್ ರಾಜಾ’ ಸಂಸ್ಥೆ ಪ್ರಾರಂಭಿಸಿದ್ದಾರೆ. ಈಗ ಈ ಸಂಸ್ಥೆ ಸದಸ್ಯರು ಹೈದರಾಬಾದ್, ಚೆನ್ನೈ ಹಾಗೂ ಮುಂಬೈ ಸೇರಿ ಹಲವು ನಗರಗಳಲ್ಲಿನ ರಸ್ತೆ ಗುಂಡಿಗಳನ್ನು ಮುಚ್ಚುತ್ತಿದ್ದಾರೆ.
Related Articles
Advertisement
ಇದು ಪರಿಸರ ಸ್ನೇಹಿ ಡಾಂಬರಾಗಿದ್ದು, ಇದರಲ್ಲಿ ಪ್ಲಾಸ್ಟಿಕ್, ರಬ್ಬರ್ ಮಿಶ್ರವಾಗಿರುತ್ತದೆ. ಹೀಗಾಗಿ, ಒಮ್ಮೆ ಈ ಡಾಂಬರು ಹಾಕಿದರೆ ಆ ಪ್ರದೇಶದಲ್ಲಿ ಮತ್ತೆ ರಸ್ತೆಗಳಲ್ಲಿ ಗುಂಡಿ ಕಾಣಿಸಿಕೊಳ್ಳುವುದಿಲ್ಲ. ಒಂದು ಚದರ ಮೀಟರ್ ರಸ್ತೆ ಗುಂಡಿ ಮಚ್ಚುವುದಕ್ಕೆ 2500 ವೆಚ್ಚವಾಗುತ್ತಿದೆ ಎಂದು ಅವರು ವಿವರಿಸುತ್ತಾರೆ.
ಮಕ್ಕಳಿಗೆ ಜಾಗೃತಿ: ರಸ್ತೆ ಸುರಕ್ಷತೆಯ ಬಗ್ಗೆ ಶಾಲಾ ಮಕ್ಕಳಿಗೆ ಜಾಗೃತಿ ಮೂಡಿಸುವಲ್ಲೂ ಪಾಟ್‌ಹೋಲ್ ರಾಜ ಸಂಸ್ಥೆ ನಿರತವಾಗಿದೆ. ರಸ್ತೆಗಳಲ್ಲಿನ ಸೂರಕ್ಷತಾ ಫಲಕ, ಕ್ರಾಸ್‌ಗಳಲ್ಲಿ ನಿರ್ದಿಷ್ಟ ಬಣ್ಣ ಬಳೆದು ಜಾಗೃತಿ ಮೂಡಿಸುವ ಕೆಲಸವನ್ನೂ ಸಂಸ್ಥೆ ಮಾಡುತ್ತಿದೆ.
ನೀವೂ ದೂರು ನೀಡಬಹುದು: ನಗರದ ರಸ್ತೆ ಗುಂಡಿಗಳ ಬಗ್ಗೆ ನೀವೂ ದೂರು ನೀಡಬಹುದು. ಪಾಟ್‌ಹೋಲ್ ರಾಜ ಸಂಸ್ಥೆಯ ವಾಟ್ಸ್‌ಅಪ್ ನಂ. 8147684653 ಅಥವಾ potholeraja.com ದೂರು ದಾಖಲಿಸಬಹುದು.
ಸ್ನೇಹಿತರ ಪುತ್ರಿಯ ಬಲಿ ಪಡೆದಿತ್ತು…: “2014ರಲ್ಲಿ ಸ್ನೇಹಿತರ ಮಗಳು ರಸ್ತೆ ಗುಂಡಿಯನ್ನು ತಪ್ಪಿಸಲು ಹೋಗಿ ಅಪಘಾತದಲ್ಲಿ ಸಾವನ್ನಪ್ಪಿದ್ದರು. ಈ ರೀತಿ ಬೇರೆ ಯಾರಿಗೂ ಆಗಬಾರದು ಎನ್ನುವ ಉದ್ದೇಶದಿಂದ ಸಂಸ್ಥೆಯನ್ನು ಪ್ರಾರಂಭಿಸಲಾಯಿತು’ ಎನ್ನುತ್ತಾರೆ ಪಾಟ್‌ಹೋಲ್ ರಾಜ ಸಂಸ್ಥೆಯ ಸಂಸ್ಥಾಪಕ ಪ್ರತಾಪ್ ಭೀಮಸೇನ ರಾವ್. ರಸ್ತೆ ಗುಂಡಿಗಳಿಂದಲೇ ಸಾರ್ವಜನಿಕರು ಜೀವ ಕಳೆದುಕೊಳ್ಳುವಂತೆ ಆಗಬಾರದು. ಇದರಿಂದ ಅವರ ಕುಟುಂಬವೇ ಬೀದಿಗೆ ಬೀಳುತ್ತವೆ. ಹೀಗಾಗಿ, ರಸ್ತೆ ಗುಂಡಿ ಸಮಸ್ಯೆಗೆ ಬಿಬಿಎಂಪಿಯನ್ನು ದೂರುತ್ತಾ ಕೂರುವ ಬದಲು, ಸ್ವತಃ ಬದಲಾವಣೆಗೆ ಮುಂದಾಗಬೇಕು ಎಂಬುದು ಅವರ ವಾದ.
* ಹಿತೇಶ್ ವೈ