Advertisement
ಉಕ್ಕುಡ ವ್ಯಾಪ್ತಿಯಿಂದ ಕಿನ್ಯ ಪಂ. ಕಚೇರಿ ಸೇರಿದಂತೆ, ಇಲ್ಲಿನ ಧಾರ್ಮಿಕ ಕ್ಷೇತ್ರಗಳಿಗೆ ಬರುವ ಜನರು ಸುತ್ತು ಬಳಸಿಯೇ ಸಂಚಾರ ಮಾಡುತ್ತಿದ್ದರು. ಕಾಲುದಾರಿಯಲ್ಲಿ ಸಂಚರಿಸುವವರು ಸುಮಾರು ಒಂದರಿಂದ ಎರಡು ಕಿ.ಮೀ. ನಡೆದುಕೊಂಡು ಹೋಗುವ ಸ್ಥಿತಿಯಿತ್ತು. ಎರಡೂ ಕಡೆಯಲ್ಲೂ ಒಂದು ಕಿ.ಮೀ. ಕಚ್ಛಾ ರಸ್ತೆಯಿದ್ದರೂ ಒಂದು ಕಿ.ಮೀ. ವ್ಯಾಪ್ತಿಯಲ್ಲಿ ಗುಡ್ಡ ಗಾಡು ಹತ್ತಿ ಇಳಿದು, ಕಂಗಿನ ತೋಟವನ್ನು ದಾಟಿ ಕಾಲು ದಾರಿಯಿಂದ ಜನರು ನಡೆದು ಕೊಂಡು ಹೋಗುತ್ತಿದ್ದರು.
ಈ ಪ್ರದೇಶದಲ್ಲಿ ರಸ್ತೆ ನಿರ್ಮಾಣಕ್ಕೆ ಸುಮಾರು 20 ವರ್ಷಗಳ ಹಿಂದೆಯೇ ಬೇಡಿಕೆಯಿತ್ತು. ಆದರೆ ಕಿನ್ಯ ಪಾದೆ ಬಳಿ ಕಡಿದಾದ ಗುಡ್ಡ ಕುತುಬಿನಗರ ಬಳಿ ಸಮೃದ್ಧವಾದ ತೋಟ ಸುಮಾರು 15ಕ್ಕೂ ಹೆಚ್ಚು ಜಾಗದ ಮಾಲಕರು ಜಾಗ ಬಿಟ್ಟುಕೊಡಲು ಸಿದ್ಧರಿರಲಿಲ್ಲ. ಐದು ವರ್ಷದ ಹಿಂದೆ ಪಿಡಬ್ಲ್ಯೂಡಿ ರಸ್ತೆ ನಿರ್ಮಾಣಕ್ಕೆ ಹಣ ಬಿಡುಗಡೆಯಾದರೂ ಜಾಗದ ತಕರಾರಿನಿಂದ ಯೋಜನೆ
ನೆನಗುದಿಗೆ ಬಿದ್ದಿತ್ತು. ಆದರೆ ಛಲ ಬಿಡದ ಸ್ಥಳೀಯ ಜನಪ್ರತಿನಿಧಿಗಳು ಜಾಗದ ಮಾಲಕರನ್ನು ಒಪ್ಪಿಸುವಲ್ಲಿ ಸಫಲರಾಗಿದ್ದು, ಈಗ ನಿರ್ಮಾಣ ಕಾರ್ಯ ಭರದಿಂದ ನಡೆಯುತ್ತಿದೆ.
Related Articles
ಉಕ್ಕುಡ – ಕುತುಬಿನಗರ ನಡುವಿನ ರಸ್ತೆ ನಿರ್ಮಾಣದಿಂದ ಈ ಭಾಗದ ಸುಮಾರು 2,000ಕ್ಕೂ ಅಧಿಕ ಜನರು ಈ ರಸ್ತೆಯ
ಉಪಯೋಗ ಪಡದುಕೊಳ್ಳಲಿದ್ದಾರೆ. ಮಳೆಗಾಲದಲ್ಲಿ ಕೃತಕ ನೆರೆಯಿಂದ ಈ ಪ್ರದೇಶದಲ್ಲಿ ಸಂಚರಿಸುವುದೇ ದುಸ್ತರವಾಗುತ್ತಿತ್ತು. ಮುಖ್ಯವಾಗಿ ಕಿನ್ಯ, ದೇವಿಪುರ, ಕನಕಮುಗೇರು, ಪಂಜಳ, ಕೆ.ಸಿ. ರೋಡ್, ತಲಪಾಡಿ ಸೇರಿದಂತೆ ವಿವಿಧ ಪ್ರದೇಶಗಳಲ್ಲಿರುವ ಧಾರ್ಮಿಕ ಕ್ಷೇತ್ರಕ್ಕೆ ತೆರಳಲು ಜನರಿಗೆ ಉಪಯೋಗವಾಗಲಿದೆ. ಇನ್ನೊಂದು ಬದಿಯಲ್ಲಿ ಕಿನ್ಯ ಜುಮಾ ಮಸೀದಿ ಸೇರಿದಂತೆ ವಾದಿತೈಬ, ಪಾಲಡಿ, ನಾಟೆಕಲ್, ಮಂಜನಾಡಿ ಪ್ರದೇಶಗಳಿಗೆ ಸಂಪರ್ಕ ಇದೀಗ ಸುಲಭವಾಗಿದೆ.
Advertisement
ಸಂಚರಿಸುವುದೇ ದುಸ್ತರವಾಗಿತ್ತುಹಲವು ವರ್ಷಗಳಿಂದ ನಾವು ದಿನನಿತ್ಯದ ಕೆಲಸಕ್ಕಾಗಿ ನಡೆದುಕೊಂಡೇ ಹೋಗುವ ಪರಿಸ್ಥಿತಿ ಇತ್ತು. ಅನಾರೋಗ್ಯದ ಸಂದರ್ಭದಲ್ಲಿ ಹಿರಿಯರಿಗೆ ಈ ಪ್ರದೇಶದಲ್ಲಿ ಸಂಚರಿಸುವುದೇ ದುಸ್ತರವಾಗಿತ್ತು. ಇದೀಗ ರಸ್ತೆ ನಿರ್ಮಾಣದ ಮೂಲಕ ಹಲವು ವರ್ಷದ ಬೇಡಿಕೆ ಈಡೇರಿದೆ.
– ಅಬ್ಬುಸಾಲಿ
ರಸ್ತೆಗೆ ಸ್ಥಳದಾನ ಮಾಡಿದ ಸ್ಥಳೀಯರು ತೋಟ, ಗುಡ್ಡಗಳಲ್ಲಿ ರಸ್ತೆ
ನಮ್ಮ ಗ್ರಾಮ ನಮ್ಮ ರಸ್ತೆ ಯೋಜನೆಯಡಿ ಸುಮಾರು 2.5 ಕೋಟಿ ರೂ. ವೆಚ್ಚದಲ್ಲಿ 2.4 ಕಿ.ಮೀ.ರಸ್ತೆ ನಿರ್ಮಾಣ ಕಾರ್ಯ ಆರಂಭಗೊಂಡಿದೆ. ಕುತುಬಿನಗರ ನಿವಾಸಿಗಳಾದ ಕೆ. ಫಾರೂಕು, ಮೊದಿನ್ ಕುಂಞಿ ಅವರು ತೋಟವನ್ನೇ ರಸ್ತೆ ನಿರ್ಮಾಣ ಕಾರ್ಯಕ್ಕೆ ಬಿಟ್ಟುಕೊಟ್ಟರೆ ಅಬ್ಬುಸಾಲಿ, ಕೆ. ಮಹಮ್ಮದ್ ಅವರು ತಮ್ಮ ಗುಡ್ಡವನ್ನು ಬಿಟ್ಟಿದ್ದಾರೆ. ಉಳಿದಂತೆ ಸುಮಾರು 10ಕ್ಕೂ ಹೆಚ್ಚು ಜನರು ಈ ರಸ್ತೆ ನಿರ್ಮಾಣಕ್ಕೆ ತಮ್ಮ ಜಾಗವನ್ನು ತ್ಯಾಗ ಮಾಡಿದ್ದಾರೆ. ಗುಡ್ಡವನ್ನು ಕೊರೆದು, ತೋಟವನ್ನು ಕಡಿದು ಸುಂದರವಾದ ರಸ್ತೆ ನಿರ್ಮಾಣದೊಂದಿಗೆ ಕಾಂಕ್ರೀಟ್ ನಡೆಯುತ್ತಿದೆ. ಹಲವು ವರ್ಷದ ಬೇಡಿಕೆ
30 ದಶಕಗಳಿಂದ ಇಲ್ಲಿನ ಜನರ ಬೇಡಿಕೆಯನ್ನು ಸಚಿವ ಯು.ಟಿ. ಖಾದರ್ ಪೂರೈಸಿದ್ದಾರೆ. 1974ರಲ್ಲಿ ಈ ಪ್ರದೇಶದಲ್ಲಿ ನೆರೆ ಬಂದು ದೋಣಿಯನ್ನು ಬಳಸಿದ ಇತಿಹಾಸವಿದ್ದು, ಈಗ ರಸ್ತೆ ನಿರ್ಮಾಣವಾಗುತ್ತಿರುವುದು ಒಂದು ಇತಿಹಾಸ. ಮುಂದಿನ ದಿನಗಳಲ್ಲಿ ಸರಕಾರಿ ಬಸ್ ಈ ವ್ಯಾಪ್ತಿಯಲ್ಲಿ ಸಂಚರಿಸುವ ನಿಟ್ಟಿನಲ್ಲಿ ಬೇಡಿಕೆ ಇಡಲಾಗಿದೆ.
– ಸಿರಾಜ್ ಕಿನ್ಯ
ಕಿನ್ಯ ಗ್ರಾ. ಪಂ. ಉಪಾಧ್ಯಕ್ಷ ವಸಂತ ಕೊಣಾಜೆ