Advertisement

ಕೃತಕ ಸಿಹಿ ಪ್ರಾಣಕ್ಕೇ ಅಪಾಯ; ಭಯಾನಕ ಹೃದಯ ಸಂಬಂಧಿ ಕಾಯಿಲೆಗೆ ದಾರಿ

12:30 PM Sep 04, 2021 | Team Udayavani |

ಇತ್ತೀಚಿನ ದಿನಗಳಲ್ಲಿ ಆರೋಗ್ಯವನ್ನು ಕಾಪಾಡಿಕೊಳ್ಳೋದೆಒಂದುರೀತಿಯಲ್ಲಿ ಸವಾಲಿನ ಕೆಲಸ. ನಮ್ಮ ದೈನಂದಿನ ಬದುಕಿಗೆ ಸಂಬಂಧಿಸಿ ಆಗಿರುವ ಬದಲಾವಣೆ, ಮಾಲಿನ್ಯಗಳು ಇದಕ್ಕೆ ಕಾರಣವಿರಬಹುದು ಎನ್ನಬಹುದು. ಆದರೆ ಆರೋಗ್ಯದ ವಿಚಾರದಲ್ಲಿ ಕೊಂಚ ಜಾಗರೂಕತೆ ವಹಿಸುವುದರಿಂದ ಅಪಾಯದ ಸಾಧ್ಯತೆಗಳನ್ನು ಕಡಿಮೆ ಮಾಡಬಹುದು.

Advertisement

ಇದನ್ನೂ ಓದಿ:ಸರ್ಕಾರಿ ಮನೆಗಳಿಗೆ ಸಚಿವರ ಸರ್ಕಸ್‌: ಯೋಗೇಶ್ವರ್‌ ಮನೆ ಮೇಲೆ ಐವರ ಕಣ್ಣು

ಸಕ್ಕರೆ ಬದಲಾಗಿ ಕೃತಕ ಸಿಹಿಕಾರಕ ಬಳಸಿ ಉತ್ಪನ್ನಗಳನ್ನು ತಯಾರಿಸುವುದು ರೂಢಿಯಲ್ಲಿದೆ. ಹೀಗೆ ಕೃತಕ ಸಿಹಿಕಾರಕಗಳಿಂದ ತಯಾರಾದ ಉತ್ಪನ್ನಗಳು ದೀರ್ಘಾವಧಿಯಲ್ಲಿ ಒಬೆಸಿಟಿ, ತೀವ್ರ ರಕ್ತದೊತ್ತಡ, ಹೃದಯ ಸಂಬಂಧಿ ಕಾಯಿಲೆ ಗಳನ್ನು ತಂದೊಡ್ಡುತ್ತದೆ ಎಂದು ಸಂಶೋಧನೆಯೊಂದು ಹೇಳುತ್ತದೆ.

ಕೆನಡಾ ಮನಿಟೋಬಾ ವಿಶ್ವವಿದ್ಯಾಲಯದಲ್ಲಿ ನಡೆದ ಸಂಶೋಧನೆಯಲ್ಲಿ ಕೃತಕ ಸಿಹಿಕಾರಕಗಳಾದ ಆಸ್ಪಟೇಮ್, ಸುಕ್ರಲೋಸ್‌ ಮತ್ತು ಸ್ಟೆವಿಯಾಗಳು ಅಧಿಕ ರಕ್ತದೊತ್ತಡ, ಶುಗರ್‌, ಭಯಾನಕ ಹೃದಯ ಸಂಬಂಧಿ ಕಾಯಿಲೆಗೆ ದಾರಿ ಮಾಡಿಕೊಡುತ್ತವೆ ಎಂಬುದು ಬೆಳಕಿಗೆ ಬಂದಿದೆ.

ಸಾಮಾನ್ಯವಾಗಿ ಡಯಟ್‌ ಸೋಡಾ, ಯೋಗರ್ತ್‌, ಬೇಕಿಂಗ್‌ ಫ‌ುಡ್‌ಗಳಲ್ಲಿ ಬಳಸಲಾಗುವ ಆಸ್ಪಟೇಮ್, ಸುಕ್ರಲೋಸ್‌ ಮತ್ತು ಸ್ಟೆವಿಯಾಗಳಂತಹ ರುಚಿಕಾರಗಳನ್ನು ಬಳಸಲಾಗುತ್ತದೆ. ಇವುಗಳನ್ನಸೇವಿಸುವುದರಿಂದ ದೀರ್ಘ‌ಕಾಲದ ಒಬೆಸಿಟಿ ಉಂಟಾಗಿ ಹೃದಯ ಸಂಬಂಧಿ ಕಾಯಿಲೆಗೆ ದಾರಿಯಾಗುತ್ತದೆ ಎನ್ನುತ್ತಿದೆ ಸಂಶೋಧನೆ.

Advertisement

6 ತಿಂಗಳಕಾಲ 1003 ಮಂದಿಯನ್ನ ಸಮೀಕ್ಷೆಗೊಳಪಡಿಸಿ ಈ ವರದಿ ಸಿದ್ಧಪಡಿಸಲಾಗಿದೆ. ಸಂಶೊಧನೆಯಲ್ಲಿ ಕೃತಕ ಸಿಹಿಕಾರಕಗಳಿಂದ ತೂಕ ಇಳಿಸುವಿಕೆಯ ಬಗ್ಗೆ ಯಾವುದೇ ಉಲ್ಲೇಖ ಮಾಡಿಲ್ಲ.

Advertisement

Udayavani is now on Telegram. Click here to join our channel and stay updated with the latest news.

Next