Advertisement
ಕುಂದಾಪುರದಲ್ಲಿಯೂ ಮೈದಾನ, ಉದ್ಯಾನವನ, ರಸ್ತೆ, ಸರ್ಕಲ್‌ಗಳಿಗೆ ಅಂತಹ ಮಹಾತ್ಮರ ಹೆಸರುಗಳನ್ನು ನಾಮಕರಣ ಮಾಡುವ ಮೂಲಕ ಅವರ ಹೋರಾಟದ ಬದುಕಿಗೊಂದು ಗೌರವ ಕೊಡಲಾಗಿದೆ.
ರಾಷ್ಟ್ರಪಿತ ಮಹಾತ್ಮಾ ಗಾಂಧೀಜಿ ಅವರ ಹೆಸರಲ್ಲಿರುವ “ಗಾಂಧಿ ಪಾರ್ಕ್’ ನಗರದಲ್ಲಿರುವ ಏಕೈಕ ಉದ್ಯಾನವನ ವಾಗಿದೆ. ನಿತ್ಯ ನೂರಾರು ಮಂದಿ ಇಲ್ಲಿಗೆ ವಿಹಾರಕ್ಕೆ ಬರುತ್ತಾರೆ. ವಿಶ್ರಾಂತಿ ಪಡೆದು ಹೋಗುತ್ತಾರೆ. ಆದರೆ ವಿಶಾಲವಾದ ಜಾಗದಲ್ಲಿ, ಉತ್ತಮವಾದ ಪ್ರದೇಶದಲ್ಲಿ ಈ ಪಾರ್ಕ್ ಇದ್ದರೂ, ಸರಿಯಾದ ನಿರ್ವಹಣೆ ಯಿಲ್ಲದೆ ಸೊರಗಿದೆ. ಕುಡಿಯುವ ನೀರಿನ ಘಟಕವೂ ಸರಿಯಿಲ್ಲ.
ಶಾಸ್ತ್ರಿ ಸರ್ಕಲ್
ಸ್ವಾತಂತ್ರ್ಯ ಹೋರಾಟಗಾರ, ಮಾಜಿ ಪ್ರಧಾನಿ, ಲಾಲ್ ಬಹದ್ದೂರ್ ಶಾಸ್ತ್ರಿ ಅವರ ನೆನಪಿನಲ್ಲಿ ಕುಂದಾಪುರದಲ್ಲಿ ಶಾಸ್ತ್ರಿ ಸರ್ಕಲ್ ನಿರ್ಮಿಸಲಾಗಿದೆ. ಶಾಸ್ತ್ರಿ ಅವರ ಚಂದದ ಪ್ರತಿಮೆಯೂ ಇದೆ. ಪ್ರಯಾಣಿಕರಿಗೆ ಅಥವಾ ಪ್ರವಾಸಿಗರಿಗೆ ಕುಳಿತುಕೊಳ್ಳಲು ಕಲ್ಲಿನ ಬೆಂಚುಗಳಿವೆ. ಹೈಮಾಸ್ಟ್ ದೀಪ ಇದೆ. ವಿಶೇಷ ಸಮಾರಂಭಗಳಲ್ಲಿ, ರಾಷ್ಟ್ರೀಯ ಹಬ್ಬಗಳ ಸಂದರ್ಭ ಶಾಸ್ತ್ರಿ ಪ್ರತಿಮೆಗೆ ಹಾರ ಹಾಕಲಾಗುತ್ತದೆ. ಇಲ್ಲಿ ಕುಳಿತುಕೊಳ್ಳಲು ಬೆಂಚುಗಳಿವೆ. ಆದರೆ ನಿರ್ವಹಣೆಯಿಲ್ಲದ ಕಾರಣ ಕೂರಲಾಗದು. ವೃತ್ತ ಎಂದು ಹೆಸರಿದ್ದರೂ ವೃತ್ತ ಇಲ್ಲ, ಬೇಲಿಯಿಲ್ಲ. ಹುಲ್ಲು ಬೆಳೆದಲ್ಲಿ ಹಸುಗಳು ಬಂದು ಮೇಯುತ್ತಿರುತ್ತದೆ. ಗಾಂಧಿ ಮೈದಾನ
ಗಾಂಧಿ ಪಾರ್ಕ್ ಪಕ್ಕದಲ್ಲೇ ಗಾಂಧಿ ಮೈದಾನವಿದ್ದು, ತಾಲೂಕು ಮೈದಾನವಾಗಿದೆ. ಪ್ರತಿ ವರ್ಷ ಸ್ವಾತಂತ್ರ್ಯೋತ್ಸವ, ಗಣರಾಜ್ಯೋತ್ಸವ, ಕನ್ನಡ ರಾಜ್ಯೋತ್ಸವ ದಿನಾಚರಣೆ ನಡೆಯುತ್ತದೆ. ಬೇರೆ – ಬೇರೆ ಕ್ರೀಡಾಕೂಟ ನಡೆಯುತ್ತವೆ.
ನೆಹರೂ ಮೈದಾನ ಸ್ವತಂತ್ರ ಭಾರತದ ಮೊದಲ ಪ್ರಧಾನಿ ಜವಾಹರ್‌ಲಾಲ್ ನೆಹರೂ ಅವರ ಹೆಸರಲ್ಲಿರುವ ನೆಹರೂ ಮೈದಾನ ಕೇವಲ ಹೆಸರಿಗಷ್ಟೇ ಮೈದಾನವಾಗಿದೆ. ಇಲ್ಲಿ ಯಾವುದೇ ಕ್ರೀಡಾಕೂಟಗಳು ನಡೆಯುತ್ತಿಲ್ಲ. ಶಾಲಾ ಮಕ್ಕಳಿಗೆ ಆಟ ವಾಡಲೂ ಅವಕಾಶವಿಲ್ಲ. ಆಗೊಮ್ಮೆ- ಈಗೊಮ್ಮೆ ಯಕ್ಷಗಾನ ವಷ್ಟೇ ನಡೆಯು ತ್ತದೆ. ಇದು ವಲಸೆ ಕಾರ್ಮಿಕರ ಅಡ್ಡವಾಗಿ ಮಾರ್ಪಾಡಾಗಿದೆ. ಇದು ಕೂಡ ಸಮರ್ಪಕವಾದ ನಿರ್ವಹಣೆಯಿಲ್ಲದೆ ನಿಷ್ಪಯೋಜಕವಾಗಿದೆ.
ಸ್ವಾತಂತ್ರ್ಯ ಹೋರಾಟಗಾರರು ಹೆಸರಲ್ಲಿ ರಸ್ತೆ ಕುಂದಾಪುರ ಪುರಸಭೆ ವ್ಯಾಪ್ತಿ ಯಲ್ಲಿಯೂ ಸ್ವಾತಂತ್ರ್ಯ ಹೋರಾಟ ಗಾರರ ಸ್ಮರಣೆ ನಡೆದಿದೆ. ಟಿ.ಟಿ. ರಸ್ತೆ (ತಾತ್ಯಾ ಟೋಪಿ ರಸ್ತೆ), ಜೆಎಲ್‌ಬಿ ರಸ್ತೆ (ಝಾನ್ಸಿ ರಾಣಿ ಲಕ್ಷ್ಮೀಬಾಯಿ ರಸ್ತೆ), ಶಾಂತಿ ನಿಕೇತನ ಪಕ್ಕ ಭಗತ್ ಸಿಂಗ್ ರಸ್ತೆ, ಬೋರ್ಡ್ ಹೈಸ್ಕೂಲ್ ಪಕ್ಕ ಚಂದ್ರಶೇಖರ ಆಝಾದ್ ರಸ್ತೆ, ಮಂಗಲ್‌ಪಾಂಡೆ ರಸ್ತೆ ಹೀಗೆ ರಸ್ತೆಗಳಿಗೆ ಸ್ವಾತಂತ್ರ್ಯ ಹೋರಾಟಗಾರರ ಹೆಸರು ಇಡಲಾಗಿದೆ. ಆದರೆ ಆ ರಸ್ತೆಗಳಿಗೆ ಪೂರ್ಣ ಹೆಸರಿನಿಂದ ಕರೆಯದೇ ಅರ್ಧ ಹೆಸರಿನಿಂದ ಕರೆಯುವ ಮೂಲಕ ಅನೇಕ ಮಹಾನ್ ಸ್ವಾತಂತ್ರ್ಯ ಹೋರಾಟಗಾರರಿಗೆ ಅಗೌರವ ಉಂಟು ಮಾಡಲಾಗುತ್ತಿದೆ.
Related Articles
Advertisement