ಹೈದರಾಬಾದ್: ವರದಕ್ಷಿಣೆ ವಿಚಾರದಲ್ಲಿ ಗಲಾಟೆ ನಡೆದು ಮದುವೆ ರದ್ದಾದ ಪ್ರಸಂಗ ನೋಡಿದ್ದೇವೆ. ಆದರೆ ಊಟದ ವಿಚಾರಕ್ಕೆ ಮದುವೆ ಮುರಿದ ಘಟನೆ ಬಗ್ಗೆ ಕೇಳಿದ್ದೀರಾ? ಊಟದ ಮೆನುವಿನಲ್ಲಿ ಮಟನ್ ಮೂಳೆ ಇಲ್ಲವೆಂದು ಸಿಟ್ಟಿಗೆದ್ದ ವರನ ಕಡೆಯವರು ಮದುವೆಯನ್ನೇ ರದ್ದು ಮಾಡಿದ ಘಟನೆ ತೆಲಂಗಾಣದಲ್ಲಿ ನಡೆದಿದೆ.
ನಿಜಾಮಾಬಾದ್ ಮೂಲದ ವಧು ಮತ್ತು ಜಗ್ತಿಯಾಲ್ ಮೂಲದ ವರನ ಮದುವೆ ನಿಶ್ಚಿತಾರ್ಥವು ನವೆಂಬರ್ ನಲ್ಲಿ ವಧುವಿನ ನಿವಾಸದಲ್ಲಿ ನಡೆದಿದೆ. ಆದರೆ ಬಳಿಕ ಮದುವೆ ರದ್ದು ಮಾಡಲಾಗಿದೆ.
ವಧುವಿನ ಮನೆಯವರು ತಮ್ಮ ಕುಟುಂಬ ಸದಸ್ಯರು ಮತ್ತು ವರನ ಸಂಬಂಧಿಕರು ಸೇರಿದಂತೆ ಅತಿಥಿಗಳಿಗಾಗಿ ಮಾಂಸಾಹಾರಿ ಮೆನುವನ್ನು ಏರ್ಪಡಿಸಿದ್ದರು. ನಿಶ್ಚಿತಾರ್ಥ ಸಮಾರಂಭದ ಬಳಿಕ ಗಲಾಟೆ ಆರಂಭವಾಗಿದೆ. ಊಟದಲ್ಲಿ ಮಟನ್ ಮೂಳೆ ಇಲ್ಲವೆಂದು ವರನ ಕಡೆಯವರು ಪ್ರಶ್ನೆ ಮಾಡಿದ್ದಾರೆ. ಈಗ ವಧುವಿನ ಕಡೆಯವರು ಮಟನ್ ಮೂಳೆಯನ್ನು ಮಾಡಿಸಿಲ್ಲ ಎಂದಿದ್ದಾರೆ. ಆಗ ಗಲಾಟೆ ಜೋರಾಗಿದೆ. ಈ ವೇಳೆ ಪೊಲೀಸರು ಮಧ್ಯ ಪ್ರವೇಶಿಸಿದ್ದಾರೆ.
ಇದನ್ನೂ ಓದಿ:INDvsSA; ಈ ಸರಣಿಯಲ್ಲಿ ದ್ರಾವಿಡ್, ಸೆಹವಾಗ್ ದಾಖಲೆ ಮುರಿಯಲಿದ್ದಾರೆ ವಿರಾಟ್
ಸ್ಥಳೀಯ ಪೊಲೀಸ್ ಠಾಣೆಯ ಅಧಿಕಾರಿಗಳು ಜಗಳವನ್ನು ಪರಿಹರಿಸಲು ವರನ ಕುಟುಂಬವನ್ನು ಮನವೊಲಿಸಲು ಪ್ರಯತ್ನಿಸಿದರು. ಆದರೆ ಅವರು “ಅವಮಾನ”ಗೊಂಡ ವರನ ಗುಂಪು ಪಟ್ಟುಬಿಡಲಿಲ್ಲ.
ಮೆನುವಿನಲ್ಲಿ ಮಟನ್ ನಳ್ಳಿ ಮೂಳೆ ಇಲ್ಲ ಎಂಬ ವಿಚಾರವನ್ನು ವಧುವಿನ ಕುಟುಂಬವು ಉದ್ದೇಶಪೂರ್ವಕವಾಗಿ ನಮ್ಮಿಂದ ದೂರವಿಟ್ಟಿದೆ ಎಂದು ಅವರು ವಾದಿಸಿದರು. ಅಂತಿಮವಾಗಿ, ವರನ ಕುಟುಂಬವು ಮದುವೆಯನ್ನು ರದ್ದುಗೊಳಿಸುವುದರೊಂದಿಗೆ ನಿಶ್ಚಿತಾರ್ಥವು ಕೊನೆಗೊಂಡಿತು.