Advertisement

ಸವಳು-ಜವಳು ಸಮಸ್ಯೆ ಬಗೆಹರಿಸಿ

04:56 PM Sep 11, 2022 | Shwetha M |

ಮುದ್ದೇಬಿಹಾಳ: ನಾರಾಯಣಪುರದ ಬಸವಸಾಗರ ಜಲಾಶಯದ ಹಿನ್ನೀರು ಹಾಗೂ ಆಲಮಟ್ಟಿ ಎಡದಂಡೆ ಕಾಲುವೆಗಳಿಂದಾಗಿ ಕೃಷ್ಣಾ ನದಿ ತೀರದಲ್ಲಿರುವ ಹಡಗಲಿ ಗ್ರಾಮ ವ್ಯಾಪ್ತಿಯ ಅಂದಾಜು 150 ಎಕರೆ ಜಮೀನು ಸವಳು ಜವಳು ಸಮಸ್ಯೆಗೋಡಾಗಿ ರೈತರು ತೊಂದರೆಗೆ ಸಿಲುಕಿದ್ದಾರೆ. ಸರ್ಕಾರ ಕೂಡಲೇ ಈ ಸಮಸ್ಯೆ ಬಗೆಹರಿಸಲು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿ ಹಡಗಲಿ ಗ್ರಾಮದ ರೈತರು ಶಿರಸ್ತೇದಾರ್‌ ವೀರೇಶ ತೊನಶ್ಯಾಳಗೆ ಮನವಿ ಸಲ್ಲಿಸಿದರು.

Advertisement

ಈ ವೇಳೆ ಪ್ರಗತಿಪರ ರೈತ ಬಾಪುರಾವ್‌ ದೇಸಾಯಿ ಮಾತನಾಡಿ, ಸವಳಾಗಿರುವ ಜಮೀನಿನಲ್ಲಿ ಯಾವುದೇ ಬೆಳೆ ಬೆಳೆಯುತ್ತಿಲ್ಲ. ಈ ಜಮೀನುಗಳನ್ನು ನಂಬಿಕೊಂಡಿದ್ದ ರೈತರು ಉಪ ಜೀವನ ನಡೆಸಲು ಕಷ್ಟಕರವಾಗಿದೆ. ಸರ್ಕಾರಕ್ಕೆ ಈ ಕುರಿತಂತೆ ಮನವಿ ಸಲ್ಲಿಸಿದ್ದರೂ ಯಾವುದೇ ಪ್ರಯೋಜನವಾಗಿಲ್ಲ ಎಂದರು.

ಈ ಹಿಂದೆ ಅಧಿಕಾರಿಗಳು ಕೃಷಿ ವಿಶ್ವ ವಿದ್ಯಾಲಯದಿಂದ ಸವಳು ಜಮೀನು ಎಂದು ಮಣ್ಣು ಪರೀಕ್ಷೆ ಮಾಡಿಸಿಕೊಂಡು ಬರಲು ತಿಳಿಸಿದ್ದರು. ಅದರಂತೆ ವರದಿ ಕೂಡಾ ಸಲ್ಲಿಸಿದ್ದರೂ ನಮಗೆ ಯಾವುದೇ ರೀತಿಯ ಸ್ಪಂದನೆ ಸಿಕ್ಕಿಲ್ಲ ಎಂದು ತಿಳಿಸಿದ ಅವರು, ಇದೇ ಪರಿಸ್ಥಿತಿ ಮುಂದುವರಿದರೆ ತಾಲೂಕಾಡಳಿತ ಸೌಧದ ಎದುರಿಗೆ ಧರಣಿ ಸತ್ಯಾಗ್ರಹ ಕೂಡುವುದಾಗಿ ಸ್ಪಷ್ಟಪಡಿಸಿದರು.

ರೈತರಾದ ನಬಿಸಾ ಮುಲ್ಲಾ, ಸಂಗಣ್ಣ ಕುಂಚಗನೂರ, ಗುರುಭೀಮರಾವ ದೇಸಾಯಿ, ರವಿಕುಮಾರ ಮಾಗಿ, ಬೀರಪ್ಪ ಕುರಿ, ರಜಿಯಾಬೇಗಂ ಗುಂತಗೂಳಿ, ತಿಪ್ಪಮ್ಮ ರತ್ನಾಕರ, ಅಸ್ಪಾಕ ಬಿಳೇಕುದರಿ, ಧರಿಯಪ್ಪ ಬಟಕುರ್ಕಿ, ರಾಜೇಸಾಬ ವಾಲೀಕಾರ, ಹನುಮಂತಪ್ಪ ತಳವಾರ, ನಾಗರಾಜ ಬಡಿಗೇರ, ಮುತ್ತಪ್ಪ ಅಂಬಿಗೇರ, ಚಂದ್ರಪ್ಪ ಹುಡೇದ, ಹನುಮಂತಗೌಡ ಪಾಟೀಲ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next