Advertisement

ಹೊಸ ಶಿಕ್ಷಣ ನೀತಿ ಅನುಷ್ಠಾನಕ್ಕೆ ಮೊದಲು ಗೊಂದಲಗಳನ್ನು ಸರ್ಕಾರ ಬಗೆಹರಿಸಬೇಕು: ಶ್ರೀಕಂಠೇಗೌಡ

05:09 PM Jan 14, 2022 | Team Udayavani |

ಶ್ರೀರಂಗಪಟ್ಟಣ: ಸರ್ಕಾರದ ಹೊಸ ಶಿಕ್ಷಣ ನೀತಿಯಲ್ಲಿ ಸಾಕಷ್ಟು ಗೊಂದಲಗಳಿದ್ದು, ಅನುಷ್ಠಾನಕ್ಕೆ ಮೊದಲು ಎಲ್ಲ ಗೊಂದಲಗಳನ್ನು ಸರ್ಕಾರ ಬಗೆಹರಿಸಬೇಕು ಎಂದು ವಿಧಾನ ಪರಿಷತ್ ಸದಸ್ಯ ಕೆ.ಟಿ. ಶ್ರೀಕಂಠೇಗೌಡ ಸಲಹೆ ನೀಡಿದರು.

Advertisement

ಶ್ರೀರಂಗಪಟ್ಟಣದಲ್ಲಿ ಪ್ರೌಢಶಾಲಾ‌ ಮುಖ್ಯ ಶಿಕ್ಷಕರ ಸಂಘದ ದಿನಚರಿಯನ್ನು ಶುಕ್ರವಾರ‌ ಬಿಡುಗಡೆ ಮಾಡಿ ಅವರು ಮಾತನಾಡಿದರು.

ಹೊಸ ಶಿಕ್ಷಣ ನೀತಿಯಲ್ಲಿ ಪದವಿ ಶಿಕ್ಷಣ ನಾಲ್ಕು ವರ್ಷ, ಸ್ನಾತಕೋತ್ತರ ಶಿಕ್ಷಣ ಒಂದು ವರ್ಷಕ್ಕೆ ನಿಗದಿಯಾಗಿದೆ. ಪ್ರೌಢ ಶಿಕ್ಷಣವನ್ನು ಪಿಯುಸಿ ಶಿಕ್ಷಣದ ಜತೆಗೆ‌ ಸೇರಿಸುವ ಅಂಶವಿದೆ. ಪದವಿ ಹಂತದಲ್ಲಿ ಕಲಾ ವಿದ್ಯಾರ್ಥಿಗಳು ವಿಜ್ಞಾನ, ವಾಣಿಜ್ಯ ವಿಷಯ ಕಲಿಯಬಹುದು ಎಂದು ಹೇಳಲಾಗಿದೆ. ಆದರೆ ನಮ್ಮಲ್ಲಿ ಶೇ.80ರಷ್ಟು ಕಲಾ ವಿಷಯ ಬೋಧಿಸುವ ಕಾಲೇಜುಗಳಿವೆ. ಹಾಗಾಗಿ ಬದಲಾದ ಶಿಕ್ಷಣ ನೀತಿಗೆ ಹೊಂದಿಕೊಳ್ಳುವುದು ಕಷ್ಟ. ಅದಕ್ಕೆ ಪೂರ್ವ ವೇದಿಕೆ ಸಿದ್ದಪಡಿಸುವ ಕೆಲಸ ಆಗಬೇಕು ಎಂದು ಹೇಳಿದರು.

ಸರ್ಕಾರಿ ನೌಕರರ ಸಂಘದ ರಾಜ್ಯ ಘಟಕದ ಮಾಜಿ ಅಧ್ಯಕ್ಷ ಎಚ್.ಕೆ. ರಾಮು ಮಾತನಾಡಿ, ಪ್ರೌಢಶಾಲಾ ಮುಖ್ಯ ಶಿಕ್ಷಕರ ಜವಾಬ್ದಾರಿ ದೊಡ್ಡದು. ಅದಕ್ಕೆ ತಕ್ಕಂತೆ ಜಾಣ್ಮೆಯಿಂದ ಕೆಲಸ ಮಾಡಬೇಕು ಎಂದರು.

ಪ್ರೌಢಶಾಲಾ ಮುಖ್ಯ ಶಿಕ್ಷಕರ ಸಂಘದ ಅಧ್ಯಕ್ಷ ಮಹದೇವಸ್ವಾಮಿ ಪ್ರಾಸ್ತಾವಿಕ ಮಾತನಾಡಿದರು. ಕ್ಷೇತ್ರ ಶಿಕ್ಷಣಾಧಿಕಾರಿ ಎಂ ಆರ್ ಅನಂತರಾಜು, ಕಸಾಪ ಜಿಲ್ಲಾ ಘಟಕದ ಅಧ್ಯಕ್ಷ ರವಿಕುಮಾರ್ ಚಾಮಲಾಪುರ, ಸರ್ಕಾರಿ ನೌಕರರ ಸಂಘದ ತಾಲ್ಲೂಕು ಘಟಕದ ಅಧ್ಯಕ್ಷ ಸಿ.ಜೆ. ಶ್ರೀನಿವಾಸ್, ಶಿಕ್ಷಣ ಸಂಯೋಜಕರಾದ ಡಾ.ಬಿ.ಕೆ‌ ಪ್ರತಿಮಾ, ರಾಮಚಂದ್ರ, ಪ್ರೌಢಶಾಲಾ ಮುಖ್ಯ ಶಿಕ್ಷಕರ ಸಂಘದ ಕಾರ್ಯದರ್ಶಿ ಡಾ‌.ಬಿ.ಸಿ. ದೊಡ್ಢೆಗೌಡ, ಉಪಾಧ್ಯಕ್ಷ ಸೋಮಶೇಖರ್, ವಸಂತಕುಮಾರ್, ದೈಹಿಕ ಶಿಕ್ಷಣ ಪರಿವೀಕ್ಷಕ ಸೋಮಶೇಖರ್, ಚ.ನಾರಾಯಣಸ್ವಾಮಿ ಇತರರು ಭಾಗವಹಿಸಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next