Advertisement

Tourism Development: ಲಕ್ಷದ್ವೀಪ ಅಭಿವೃದ್ಧಿಗೆ 8 ಬೃಹತ್‌ ಯೋಜನೆ: ಕೇಂದ್ರ ಸರಕಾರ ಚಿಂತನೆ

03:29 AM Dec 06, 2024 | Team Udayavani |

ಹೊಸದಿಲ್ಲಿ: ಲಕ್ಷದ್ವೀಪದಲ್ಲಿ ಪ್ರವಾಸೋದ್ಯಮ ಅಭಿವೃದ್ಧಿಗಾಗಿ ಕೇಂದ್ರ ಸರಕಾರವು 8 ಬೃಹತ್‌ ಯೋಜನೆಗಳನ್ನು ಘೋಷಿಸಲು ಸಿದ್ಧತೆ ನಡೆಸಿದೆ. ಈ ಬಗ್ಗೆ ಮಾಧ್ಯಮವೊಂದು ವರದಿ ಮಾಡಿದೆ.

Advertisement

ಮಾಲ್ದೀವ್ಸ್‌ ಸರಕಾರದಲ್ಲಿದ್ದ ಸಚಿವರು ಕಳೆದ ಬಾರಿ ಪ್ರಧಾನಿ ಮೋದಿಯ ಲಕ್ಷ ದ್ವೀಪ ಪ್ರವಾಸದ ವಿರುದ್ಧ ಟೀಕೆ ಮಾಡಿ ದ್ದಕ್ಕೆ ಸವಾಲಾಗಿ ಕೇಂದ್ರ ಸರಕಾರ ಅಲ್ಲಿ ಅಭಿವೃದ್ಧಿ ಕಾಮಗಾರಿಗಳನ್ನು ಕೈಗೆತ್ತಿ ಕೊಂಡಿದೆ ಎಂದು ವಿಶ್ಲೇಷಿಸಲಾಗುತ್ತಿದೆ.

ಕಲ್ಪೇನಿ ದ್ವೀಪದ‌ಲ್ಲಿ ವಿಲಾಸಿ ಹಡಗುಗಳನ್ನು ನಿರ್ವಹಿಸಬಲ್ಲ ಓಪನ್‌ ಜೆಟ್ಟಿ ಅಭಿವೃದ್ಧಿಗೆ 303 ಕೋಟಿ ರೂ. ವೆಚ್ಚ ಮಾಡಲು ತೀರ್ಮಾನಿಸಲಾಗಿದೆ. ಕರವಟ್ಟಿ, ಅಗಟ್ಟಿ ಹಾಗೂ ಮಿನಿಕಾಯ್‌ ದ್ವೀಪಗಳಿಗೆ ಬೃಹತ್‌ ಹಡಗುಗಳು ಬರುವಂತೆ ಮಾಡಲು ಪೂರ್ವ ಹಾಗೂ ಪಶ್ಚಿಮ ಭಾಗಗಳಲ್ಲಿ ಜೆಟ್ಟಿಗಳ ಸಾಮರ್ಥ್ಯ ಹೆಚ್ಚಿಸುವ ಬಗ್ಗೆಯೂ ಚಿಂತನೆ ನಡೆದಿದೆ.

ಕಲ್ಪೇನಿ, ಆಂಡ್ರೋತ್‌, ಕಡ್ಮತ್‌ ದ್ವೀಪದ ಭೂಭಾಗಗಳಲ್ಲಿ ಪ್ರವಾಸಿಗರಿಗೆ ಆಧುನಿಕ ಸೌಲಭ್ಯ ಕೇಂದ್ರ ಸ್ಥಾಪನೆ, ಆಂಡ್ರೋತ್‌ ಬ್ರೇಕ್‌ವಾಟರ್‌ನ ನವೀಕರಣ ಹಾಗೂ ವಿಸ್ತರಣೆಗೆ ತೀರ್ಮಾನಿಸಲಾಗಿದೆ. ನೌಕಾಪಡೆಗಾಗಿ ವಿಶೇಷ ಹಡಗುಕಟ್ಟೆ ಸೇರಿ ಒಟ್ಟು 8 ಯೋಜನೆಗಳನ್ನು ಸಾಗರ್‌ಮಾಲಾ ಯೋಜನೆಯಡಿ ಪ್ರಕಟಿಸಿ, ಅನುಷ್ಠಾನಗೊಳಿಸುವ ಸಾಧ್ಯತೆಗಳಿವೆ.

Advertisement

Udayavani is now on Telegram. Click here to join our channel and stay updated with the latest news.

Next