Advertisement
ಬುಧವಾರ ವಿಧಾನ ಮಂಡಲ ಅಧಿವೇಶನ ನಂತರ ಮಾತನಾಡಿದ ರಾಮುಲು, ಸರ್ಕಾರಕ್ಕೆ ಸಂಖ್ಯಾಬಲವಿಲ್ಲ. ಕುಮಾರಸ್ವಾಮಿ ರಾಜೀನಾಮೆ ನೀಡಬೇಕು. ನಾವು ಹಂತ ಹಂತವಾಗಿ ಹೋರಾಟ ನಡೆಸುತ್ತೇವೆ. ಇದರ ಬಗ್ಗೆ ರಾಜ್ಯಪಾಲರನ್ನು ಭೇಟಿ ಮಾಡುತ್ತೇವೆ ಎಂದರು.
ಬಿಜೆಪಿ ಪ್ರತಿಭಟನೆ ಬಗ್ಗೆ ಮಾತನಾಡಿದ ಕಾಂಗ್ರೆಸ್ ನಾಯಕ ಜಾರ್ಜ್, ನಮ್ಮ ಸರ್ಕಾರ ಸುಭಧ್ರವಾಗಿದೆ. ನಾವು ಐದು ವರ್ಷಗಳ ಕಾಲ ಅಧಿಕಾರ ನಡೆಸುತ್ತೇವೆ. ಬಿಜೆಪಿಯವರು ಬಹುಮತ ಇಲ್ಲ ಎಂದು ಹೇಳುವುದು ಮಾತ್ರ. ಬೇಕಾದರೆ ಸಾಬೀತು ಮಾಡಲಿ ಎಂದರು. ರಾಜ್ಯಪಾಲರ ಭಾಷಣಕ್ಕೆ ಅಡ್ಡಿಪಡಿಸಿದ ಬಿಜೆಪಿಯವರು ರಾಜ್ಯಪಾಲರಿಗೆ ಮತ್ತು ಸಂವಿಧಾನಕ್ಕೆ ಅಗೌರವ ತೋರಿದ್ದಾರೆ ಎಂದು ಬಿಜೆಪಿಯ ನಡೆಯ ಕುರಿತು ಟೀಕೆ ಮಾಡಿದರು.