ದೇವನಹಳ್ಳಿ: ದೀಪಗಳ ಹಬ್ಬ ದೀಪಾವಳಿ ಅಂಗವಾಗಿ ತಾಲೂಕಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಹೂ ಹಾಗೂ ದೀಪಗಳಿಂದ ಅಲಂಕರಿಸಿರುವುದು ಪ್ರಯಾಣಿಕರ ಗಮನ ಸೆಳೆಯಿತು. ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ದೀಪಾವಳಿ ಹಬ್ಬದ ಅಂಗವಾಗಿ ಹೂ ಮತ್ತು ದೀಪಗಳಿಂದ ವಿಶೇಷವಾಗಿ ಅಲಂಕರಿಸಿ ಶುಭಾಶಯಗಳನ್ನು ಪ್ರಯಾಣಿಕರಿಗೆ ಕೋರಲಾಗಿದೆ.
ಇದನ್ನೂ ಓದಿ;- ಸಿಹಿ ತಿನಿಸು, ಪಟಾಕಿ, ಅಪ್ಪನ ಬೋನಸ್..: ದೀಪಗಳ ಹಬ್ಬದ ನೆನಪು
ಟರ್ಮಿನಲ್ ಮತ್ತು ಅರೈವಲ್‌ಗಳಲ್ಲಿ ಅಲಂಕಾರಿಕ ಗಿಡಗಳು ಹಾಗೂ ಹೂ ಮತ್ತು ದೀಪಗಳಿಂದ ಸಿಂಗರಿಸಲಾಗಿದೆ. ದೇಶ ಮತ್ತು ವಿದೇಶಗಳ ಪ್ರಯಾಣಿಕರಿಗೆ ದೀಪಾವಳಿ ವಿಚಾರ ವಿನಿಮಯವನ್ನು ತಿಳಿಸುವ ಪ್ರಯತ್ನ ವಿಮಾನ ನಿಲ್ದಾಣ ಮಾಡುತ್ತಿದೆ. ಹಿಂದೂ ಸಂಪ್ರದಾಯದಲ್ಲಿ ದೀಪಾವಳಿಗೆ ಹೆಚ್ಚಿನ ಮಹತ್ವ ಇದೆ. ಕತ್ತಲಿನಿಂದ ಬೆಳಕಿನಡೆಯ ದೀಪಾವಳಿಯಾಗಿದೆ. ಪ್ರತಿ ಮನೆಗಳಲ್ಲಿ ದೀಪಗಳನ್ನು ಹಚ್ಚಿ ಸಾಂಪ್ರದಾಯಿಕವಾಗಿ ದೀಪಾವಳಿಯನ್ನು ಆಚರಿಸುತ್ತಾರೆ.
ಹಣತೆಯ ದೀಪ ಹಚ್ಚಿ ಭಕ್ತಿಯನ್ನು ಸಮರ್ಪಿಸುತ್ತಾರೆ. ನಮ್ಮ ಸಂಸ್ಕೃತಿಯನ್ನು ದೇಶ ವಿದೇಶಗಳಿಗೆ ಪರಿಚಯಿಸುವ ಕೆಲಸವನ್ನು ವಿಮಾನ ನಿಲ್ದಾಣ ಮಾಡುತ್ತಿದೆ. ಟರ್ಮಿನಲ್‌ಗಳಲ್ಲಿರುವ ದೀಪಾಲಂಕಾರ ಗಮನಸೆಳೆಯಿತು.