ಮಾಲೂರು: ತಾಲೂಕಿನ ರಾಜೇನಹಳ್ಳಿ ಗ್ರಾಮದ ಕಿತ್ತೂರು ರಾಣಿ ಚನ್ನಮ್ಮ ವಸತಿ ಶಾಲೆಯಲ್ಲಿ ಊಟ ಸೇವಿಸಿದ 22ಕ್ಕೂ ಹೆಚ್ಚು ವಿದ್ಯಾರ್ಥಿನಿಯರು ವಾಂತಿ ಮತ್ತು ಭೇದಿಯಿಂದ ಅಸ್ವಸ್ಥಗೊಂಡ ಘಟನೆ ನಡೆದಿದೆ. ಅಸ್ವಸ್ಥ ಮಕ್ಕಳು ಪಟ್ಟಣದ ಸರ್ಕಾರಿ ಸಾರ್ವಜನಿಕ ಆಸ್ಪತ್ರೆಯಲ್ಲಿ ಚಿಕಿತ್ಸೆಗಾಗಿ ದಾಖಲಾಗಿದ್ದಾರೆ.
ಸಮಾಜ ಕಲ್ಯಾಣ ಇಲಾಖೆ ನಡೆಯುತ್ತಿರುವ ವಸತಿ ಶಾಲೆಯಲ್ಲಿ ಸುಮಾರು 200 ವಿದ್ಯಾರ್ಥಿನಿ ಯರು ಇದ್ದಾರೆ. ಗುರುವಾರ ಮಧ್ಯಾಹ್ನ ಊಟ ಮಾಡಿದ ಕೂಡಲೇ ಹೊಟ್ಟೆ ನೋವಿನಿಂದ ಬಳಲುವ ಜೊತೆಗೆ ವಾಂತಿ ಲಕ್ಷಣಗಳು ಕಾಣಿಸಿಕೊಂಡಿತ್ತು.
ಈ ವೇಳೆಗೆ ವಸತಿ ಶಾಲೆಯಲ್ಲಿದ್ದ ಅರೋಗ್ಯ ಸಹಾಯಕಿ ಸಂಗೀತಾ ಪ್ರಥಮ ಚಿಕಿತ್ಸೆಯಾಗಿ ಕೆಲವು ಮಾತ್ರೆ ನೀಡಿದ್ದರು. ಆದರೆ ರಾತ್ರಿ ಊಟ ಸೇವಿಸಿ ಮಲಗಿದ ವಿದ್ಯಾರ್ಥಿಯರು ರಾತ್ರಿ ಪೂರ್ತಿ ಹೊಟ್ಟೆನೋವು ಮತ್ತು ಭೇದಿಯಿಂದ ಬಳಲಿದರು.
ಈ ವೇಳೆ ಯಾವುದೇ ಮೇಲ್ವಿಚಾರಕರು ಇಲ್ಲದ ಕಾರಣ ರಾತ್ರಿ ಪೂರ್ತಿ ನರಳಾಡಿದ್ದ ವಿದ್ಯಾರ್ಥಿನಿಯರನ್ನು ಬೆಳಗ್ಗೆ 9ರ ಸುಮಾರಿಗೆ ಬಂದ ವಸತಿ ಶಾಲೆ ಅತಿಥಿ ದೈಹಿಕ ಶಿಕ್ಷಕ ಕುಮಾರ್‌ಸ ವಿಷಯ ತಿಳಿದ ಸ್ಥಳಕ್ಕೆ ಧಾವಿಸಿದ್ದ ವಿದ್ಯಾರ್ಥಿ ಪೋಷಕರು ಆ್ಯಂಬುಲೆನ್ಸ್ ಸಹಾಯ ದಿಂದ ಒಟ್ಟು 22ಮಕ್ಕಳನ್ನು ಮಾಲೂರು ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಿದ್ದರು.
ಇನ್ನು ಕೆಲವು ವಿದ್ಯಾರ್ಥಿ ನಿಯರು ತೊರ‌್ಲಕ್ಕಿ ಪ್ರಾಥಮಿಕ ಚಿಕಿತ್ಸಾ ಕೇಂದ್ರದಲ್ಲಿ ಚಿಕಿತ್ಸೆ ಪಡೆದರು. ಈ ವೇಳೆ ವಸತಿ ಶಾಲೆಯ ಅಡುಗೆ ಮಾದರಿ ಸಂಗ್ರಹಿಸಿ ಪ್ರಯೋಗಾಲಯಕ್ಕೆ ಕಳುಹಿಸಿ ರುವುದಾಗಿ ಆಡಳಿತ ವೈದ್ಯಾಧಿಕಾರಿ ಡಾ.ವಸಂತ್‌ಕುಮಾರ್ ತಿಳಿಸಿದ್ದಾರೆ.