Advertisement
ಪ್ರತಿಯೊಂದೂ ವಿಷಯಕ್ಕೂ ಹೇಳುವವರು ಯಾರೋ ಇರ್ತಾರೆ. ಆದರೆ ಹೇಳುವವರು ಹೇಳುತ್ತಾರೆ ಎಂದರಷ್ಟೇ ಸಾಲದು, ಅದನ್ನು ಕೇಳುವವರೂ ಇರಬೇಕು. ಹೇಳಿದ್ದನ್ನು ಕೇಳುವುದು ಪಾಲಿಸಿದಂತೆ ಅಷ್ಟೇ, ಆದರೆ ಅದನ್ನು ಪರಾಮರ್ಶಿಸಿ ಪಾಲಿಸುವುದು ಉತ್ತಮ. ಕೆಲವೊಮ್ಮೆ ಸುಮ್ಮನೆ ಪಾಲಿಸಬೇಕು, ಪರಾಮರ್ಶೆ ಹೆಸರಿನಲ್ಲಿ ಇತ್ತಂಡವಾದ ಸಲ್ಲದು. ಈ ಮಾತುಗಳು ಎಂದೆಂದಿಗೂ ಸಲ್ಲುತ್ತದೆ ಎಂಬುದೇ ಸತ್ಯ.
Related Articles
Advertisement
ಇಲ್ಲೊಂದು ಸೂಕ್ಷ್ಮವಿದೆ. ಇಲ್ಲಿ ಗುರುವಾದವನು ಜಗದ್ಗುರುವೇ ಆದ. ಹೇಳಿದವನು ಪ್ರಬುದ್ಧನೇ ಆದ. ಆದರೆ, ಜ್ಞಾನವನ್ನು ಸ್ವೀಕರಿಸಿದವನು ತನ್ನ ಜನ್ಮವಿಡೀ ಕೇಳಿದ್ದನ್ನು ಪಾಲಿಸಿದನೇ? ಹೇಳಿದ್ದನ್ನು ಕೇಳಿ ಪಾಲಿಸುವವರು ಕೆಲವರು. ಹೇಳಿದ್ದನ್ನು ಕೇಳಿ ಸ್ವಲ್ಪ ದಿನಗಳು ಪಾಲಿಸುವವರು ಹೆಚ್ಚಿನ ಕೆಲವರು. ಹೇಳಿದ್ದನ್ನು ಆಲಿಸಿ ಮತ್ತೂಬ್ಬರಿಗೆ ದಾಟಿಸುವವರು ಹಲವರು. ಹೇಳಿದ್ದನ್ನು ಕೇಳಿ ಸುಮ್ಮನಾಗುವವರೇ ಅಧಿಕ.
ಹೇಳಿದ್ದನ್ನು ಕೇಳುವುದು ಎಂಬಲ್ಲಿ ಎರಡು ವಿಧಗಳಿವೆ. ದಿನನಿತ್ಯದಲ್ಲಿ ಇವೆಲ್ಲವನ್ನೂ ಕಂಡಿದ್ದರೂ ಅದನ್ನು ಸೂಕ್ಷ್ಮವಾಗಿ ಪರಿಗಣಿಸಿರುವುದಿಲ್ಲ ಅಷ್ಟೇ. ಹೇಳಿದ್ದನ್ನು ಕೇಳುವುದು ಬೋಧನೆಯ ವಿಷಯದಲ್ಲಿ, ದುಬೋìಧನೆಯ ವಿಷಯದಲ್ಲಿ, ಉಪದೇಶದ ವಿಷಯದಲ್ಲಿ, ಒಣ ಉಪದೇಶದ ವಿಷಯಗಳಲ್ಲಿ. ಇದು ಒಂದು ಬಗೆಯಾದರೆ ಹೇಳಿದ್ದನ್ನು ಕೇಳುವುದು ನಿಯಮದ ವಿಷಯಕ್ಕೂ ಸಲ್ಲುತ್ತದೆ.
ಮೊದಲ ಬಗೆಯಲ್ಲಿ ನಮ್ಮಿಷ್ಟದ ರೀತಿ ವರ್ತಿಸಬಹುದು. ಆದರೆ ಎರಡನೇ ಬಗೆಯಲ್ಲಿ ಪಾಲಿಸದೇ ಹೋದರೆ ಶಿûಾರ್ಹರಾಗುತ್ತೇವೆ. ವೈದ್ಯರ ಬಳಿ ತಪಾಸಣೆಗೆ ಹೋದಾಗ ಅವರು ಹೇಳುತ್ತಾರೆ. ನೀವು ಈ ಕೂಡಲೇ ಕರಿದ ಪದಾರ್ಥ ತಿನ್ನುವುದನ್ನು ನಿಲ್ಲಿಸಬೇಕು… ಸಿಹಿಯತ್ತ ನೋಡಲೇಬೇಡಿ. ವ್ಯಾಯಾಮ ಮಾಡಿ.
ಅವರನ್ನು ಗುರುಗಳು ಎಂದುಕೊಳ್ಳಿ. ಮೇಜಿನ ಮತ್ತೂಂದು ಬದಿಯಲ್ಲಿ ಇರುವವ ಶಿಷ್ಯ ಎಂದುಕೊಂಡರೆ… ಗುರುಗಳ ಮಾತನ್ನು ಶಿಷ್ಯ ಕೇಳುವನೇ? ವೈದ್ಯರು ಹೇಳಿದ ಮಾತಿಗೆ ತಲೆಯಾಡಿಸಿ ಹೊರಬರುವಾಗಲೂ ವೈದ್ಯರ ಮಾತುಗಳು ಇನ್ನೂ ಮನಸ್ಸಿನಲ್ಲಿ ಹೊಗೆಯಾಡುತ್ತಲೇ ಇರುವಾಗ, ಆ ಹೊಗೆಯನ್ನು ನಂದಿಸಲು ಹೊಗೆ ಬಿಡುವ ಸಾಧನವನ್ನು ಬಾಯಿಗಿರಿಸಿಕೊಂಡು ಸಾಗುವಾಗ, ತಾವು ಹೊಗೆ ಹಾಕಿಸಿಕೊಳ್ಳುವ ದಿಶೆಯಲ್ಲಿ ತ್ವರಿತವಾಗಿ ಸಾಗುತ್ತಿದ್ದೇವೆ ಎಂಬುದನ್ನು ಮರೆಯುತ್ತಾರೆ.
ವೈದ್ಯರ ಕ್ಲಿನಿಕ್‌ನಿಂದ ಹೊರಗೆ ಬರುವಾಗ, ಬೀದಿಯ ಬದಿಯಲ್ಲಿ ಕರಿಯುತ್ತಿರುವ ಬೋಂಡದ ಸುವಾಸನೆ ಮೂಗಿಗೆ ಬಡಿದಾಗ ಚಪಲ ಹತ್ತಿಕ್ಕುವುದು ಕಷ್ಟ. ಸಿಹಿ ತಿನ್ನಲಾರೆ ಎಂದು ನಿರ್ಧರಿಸಿ ಕಾಫಿಗೆ ಎರಡು ಚಮಚೆ ಹೆಚ್ಚು ಸಕ್ಕರೆ ಹಾಕಿಕೊಳ್ಳುವವರು ಕಡಿಮೆಯೇನಿಲ್ಲ. ನಾನೇನೂ ಜಿಲೇಬಿ ತಿನ್ನಲಿಲ್ಲವಲ್ಲ ಎಂಬುದೇ ಸ್ವಂತಕ್ಕೆ ಸಮಾಧಾನ. ವ್ಯಾಯಾಮ ಮಾಡಿ ಅಂತ ಹೇಳಿ¨ªಾರೆ ಅಂತ ಏಕಾಏಕಿ ಒಂದೆರಡು ಗಂಟೆ ವಕೌìಟ್ ಮಾಡಿ ಕೈಕಾಲು ಎತ್ತಲೂ ಆಗದಂತೆ ಮಾಡಿಕೊಂಡು ಇವೆಲ್ಲ ನಮಗಲ್ಲ ಬಿಡಿ ಎಂದು ಧನಸ್ಸು ಕೆಳಗಿಡುವವರೇ ಅಧಿಕ.
ಹಿರಿಯರು ಹೇಳಿದ್ದನ್ನು ಕಿರಿಯರು ಕೇಳಬೇಕು ಎಂಬುದು ಹಿಂದಿನಿಂದಲೂ ಬಂದ ಪದ್ಧತಿ. ಇದರ ಹಿಂದೆ ಹಲವಾರು ವಿಚಾರಗಳು. ಭೂಮಿಗೆ ನಮಗಿಂತಲೂ ಮೊದಲು ಬಂದವರು ಅನುಭವಿಸಿರುವುದನ್ನು ಕಿರಿಯರಿಗೆ ತಲುಪಿಸುತ್ತಾರೆ. ಬಿಸಿಯಾದ ಕಬ್ಬಿಣವನ್ನು ಮುಟ್ಟಿದರೆ ಕೈ ಸುಡುತ್ತದೆ ಎಂದು ಹೇಳಿದಾಗ ಕೇಳಬೇಕು ಅಷ್ಟೇ. ಅರಿವಿಲ್ಲದೇ ಮುಟ್ಟಿದಾಗ ಬಿಸಿ ತಾಕಿದಾಗ ಅನುಭವಾಗುತ್ತದೆ ಎಂಬುದು ಬೇರೆ ವಿಷಯ.
ನೀವು ಹೇಳಿದ್ದೇನು ನಾನು ಕೇಳ್ಳೋದು ಎಂದು ಮುಟ್ಟಿದರೂ ಬಿಸಿ ತಾಕುತ್ತದೆ ಬಿಡಿ. ಯಾವುದೋ ಒಂದು ವಿಷಯದ ಬಗ್ಗೆ ಒಂದಿನಿತೂ ಅರಿವಿಲ್ಲದ ಹಿರಿಯರು, ವಯಸ್ಸಿನಲ್ಲಿ ತಾವು ಹಿರಿಯರು ಎಂದು ಉಪದೇಶ ನೀಡಿದಾಗ, ಕೇಳಲೇಬೇಕು ಎಂಬ ಕಟ್ಟಳೆ ಕಿರಿಯರಿಗೆ ಇರಲಾರದು.
ಮೊದಲಿಗೆ ಹಿರಿಯರು ಒಣ ಉಪದೇಶ ನೀಡಬಾರದು. ಹಾಗೂ ಅಂಥಾ ದಿವ್ಯಾಮೃತ ಬಂದಾಗ, ವಯಸ್ಸಿಗೆ ಗೌರವ ನೀಡಿ ಹಂಗಿಸದೇ ತಳ್ಳಿ ಹಾಕಿದರೂ ತಪ್ಪೇನಿಲ್ಲ. ನನಗೆ ಗೊತ್ತು ನೀವೇನೂ ಹೇಳಬೇಕಿಲ್ಲ ಎಂಬ ಧೋರಣೆ ಸಲ್ಲದು ಅಷ್ಟೇ. ಯಾವುದೇ ವಿಷಯವನ್ನು ಪರಾಮರ್ಶಿಸಿದ ಅನಂತರ ಅಭಿಪ್ರಾಯವನ್ನು ಮಂಡಿಸುವಾಗ ಅನಾವಶ್ಯಕವಾದ ಬಿಸಿ ವಾತಾವರಣ ಸೃಷ್ಟಿಯಾಗಬಾರದು.
ಹೇಳುವವರು ಹಿರಿಯರೇ ಆಗಬೇಕಿಲ್ಲ ಅಲ್ಲವೇ? ಉತ್ತಮ ವಿಚಾರಗಳಾದರೆ, ಅಲ್ಲೊಂದು ಕಲಿಕೆಯಿರುವುದಾದರೆ ಕಿರಿಯರ ಮಾತನ್ನು ಕೇಳಲು ಹಿಂದೆಮುಂದೆ ನೋಡುವುದೇಕೆ? ಕಲಿಸಿದಾತ ಗುರು, ಅವರ ವಯಸ್ಸು ಮುಖ್ಯವಲ್ಲ. ವಯಸ್ಸಿಗೂ, ಜ್ಞಾನಕ್ಕೂ ಸಂಬಂಧವಿಲ್ಲ. ವಯಸ್ಸು ಏರಿದಂತೆ ಅನುಭವ ಹೆಚ್ಚಬಹುದು ಆದರೆ ಜ್ಞಾನವೂ ಏರುತ್ತದೆ ಎಂಬುದನ್ನು ನಿಖರವಾಗಿ ಹೇಳಲಾಗದು. ವಯಸ್ಸು ಏರಿದರೆ ವೃದ್ಧರಾಗುವುದು ಸಹಜ, ವಯಸ್ಸು ಚಿಕ್ಕದಿದ್ದರೂ ಜ್ಞಾನ ಹೆಚ್ಚಿದ್ದರೆ ಅವರು ಜ್ಞಾನವೃದ್ಧರೇ ಆಗಬಹುದು. ವಯಸ್ಸು ಹೆಚ್ಚಿದ್ದರೂ ಜ್ಞಾನ ಶೂನ್ಯರಾಗಿರಬಹುದು. ಕಾಯಿಲೆಗೆ ಹೊಣೆ ಯಾರು? ಶೂನ್ಯ ಜ್ಞಾನಕ್ಕೂ, ಜ್ಞಾನ ಶೂನ್ಯತೆಗೂ ವ್ಯತ್ಯಾಸವಿದೆಯೇ? ಅಂದ ಹಾಗೆ, ಈವರೆಗೆ ನಾನು ಹೇಳಿದ ವಿಷಯ ನಿಮಗೆ ಸರಿ ಕಾಣಲಿಲ್ಲ ಎಂದರೆ ಖಂಡಿತ ತಿಳಿಸತಕ್ಕದ್ದು. ಆದರೆ ಕೊಂಚ ಮೆಲ್ಲಗೆ ಹೇಳಿ ಆಯ್ತಾ? ಚಾಕಲೇಟ್ ಸುತ್ತಿದ ಕಾಗದದಲ್ಲಿ ಕಹಿ ಮಿಠಾಯಿ ಇಟ್ಟುಕೊಟ್ಟಂತೆ ಹೇಳಿ, ಆದರೆ ಏನಾದರೂ ಹೇಳ್ಳೋದು ಮರೆಯದಿರಿ.
*ಶ್ರೀನಾಥ್ ಭಲ್ಲೆ, ರಿಚ್ಮಂಡ್