Advertisement

ಮೊದಲ ಸುತ್ತಿನಲ್ಲಿ 88 ಮತ; ಭಾರತೀಯ ಮೂಲದ ರಿಷಿ ಬ್ರಿಟನ್ ನ ಮುಂದಿನ ಪ್ರಧಾನಿ ಪಟ್ಟ?

04:23 PM Jul 14, 2022 | Team Udayavani |

ನವದೆಹಲಿ: ಬ್ರಿಟನ್‌ನ ಆಡಳಿತ ಪಕ್ಷ ಕನ್ಸರ್ವೇಟಿವ್‌ ಪಕ್ಷದ ನಾಯಕನ ಸ್ಥಾನಕ್ಕೆ ಹಣಕಾಸು ಖಾತೆ ಮಾಜಿ ಸಚಿವ ರಿಷಿ ಸುನಕ್‌ ಮುಂಚೂಣಿಯಲ್ಲಿದ್ದಾರೆ. ಮೊದಲ ಹಂತದ ಮತದಾನದ ಮುಕ್ತಾಯದಲ್ಲಿ ಮಾಹಿತಿ ತಂತ್ರಜ್ಞಾನ ಸಂಸ್ಥೆ ಇನ್ಫೋಸಿಸ್‌ ಸಂಸ್ಥಾಪಕ .ಎನ್‌.ಆರ್‌.ನಾರಾಯಣಮೂರ್ತಿಯವರ ಅಳಿಯ 88 ಮತ ಗಳನ್ನು ಪಡೆದುಕೊಂಡಿದ್ದಾರೆ.

Advertisement

ಇದನ್ನೂ ಓದಿ:ಹೃದಯವಂತಳಾದ ಕಮಲವ್ವ: ಬ್ರೈನ್ ಡೆಡ್ ಆಗಿದ್ದ ಮಹಿಳೆಯ ಅಂಗಾಂಗ ದಾನ!

ರಿಷಿ ಸುನಕ್ (42ವರ್ಷ) 358 ಸಂಸದರ ಪೈಕಿ ಮೊದಲ ಸುತ್ತಿನಲ್ಲಿ 88 ಸಂಸದರ ಬೆಂಬಲ ಪಡೆದಿರುವುದಾಗಿ ವರದಿ ತಿಳಿಸಿದೆ. ಕನ್ಸರ್ವೇಟಿವ್ ಪಕ್ಷದ ನಾಯಕ ಬೋರಿಸ್ ಪ್ರಧಾನಿ ಸ್ಥಾನಕ್ಕೆ ರಾಜೀನಾಮೆ ನೀಡಿದ ಬಳಿಕ ನೂತನ ನಾಯಕನ ಆಯ್ಕೆಯಲ್ಲಿ ಸುನಕ್ ಮುಂಚೂಣಿಯಲ್ಲಿದ್ದಾರೆ ಎಂದು ವರದಿ ಹೇಳಿದೆ.

ಭಾರತೀಯ ಮೂಲದ ಮತ್ತೊಬ್ಬ ಅಭ್ಯರ್ಥಿ, ಅಟಾರ್ನಿ ಜನರಲ್‌ ಸುಯೆಲ್ಲಾ ಬ್ರಾವರ್‌ಮನ್‌ ಅವರು 32 ಮತಗಳನ್ನು ಪಡೆದುಕೊಂಡು ಕೊನೆಯ ಸ್ಥಾನದಲ್ಲಿ ಇದ್ದಾರೆ. ದ್ವಿತೀಯ ಸ್ಥಾನದಲ್ಲಿ ವಾಣಿಜ್ಯ ಸಚಿವೆ ಪೆನ್ನಿ ಮಾರ್ಡೆಂಟ್‌ (67 ಮತ), ವಿದೇಶಾಂಗ ಕಾರ್ಯದರ್ಶಿ ಲಿಜ್‌ ಟ್ರಾಸ್‌ (67ಮತ), ಮಾಜಿ ಸಚಿವೆ ಕೆಮಿ ಬೆಡ್‌ನಾಕ್‌ (40 ಮತ), ಟಾಂ ಟಂಗ್‌ಧಾಟ್‌ (37 ಮತ) ಪಡೆದಿದ್ದಾರೆ.

ರಿಷಿ ಸುನಕ್ ಬ್ರಿಟನ್ ಮುಂದಿನ ಪ್ರಧಾನಿ?

Advertisement

ಬ್ರಿಟನ್ ಪ್ರಧಾನಿ ಹುದ್ದೆಗೆ ಭಾರತೀಯ ಮೂಲದ ರಿಷಿ ಸುನಕ್ ಮುಂಚೂಣಿಯಲ್ಲಿದ್ದಾರೆ. ರಿಷಿ 1980ರ ಮೇ 12ರಂದು ಭಾರತೀಯ ಮೂಲದ ಕುಟುಂಬದಲ್ಲಿ ಬ್ರಿಟನ್ ನಲ್ಲಿ ಜನಿಸಿದ್ದರು. 1960ರ ದಶಕದಲ್ಲಿ ಸುನಕ್ ಕುಟುಂಬ ಸದಸ್ಯರು ಭಾರತದಿಂದ ಬ್ರಿಟನ್ ಗೆ ವಲಸೆ ಹೋಗಿದ್ದರು.

ರಿಷಿ ವಿನ್ ಚೆಸ್ಟರ್ ಕಾಲೇಜ್, ಆಕ್ಸ್ ಫರ್ಡ್ ಯೂನಿರ್ವಸಿಟಿ ಮತ್ತು ಸ್ಟ್ಯಾನ್ ಫೋರ್ಡ್ ವಿವಿಯಲ್ಲಿ ಪದವಿ ಪಡೆದಿದ್ದಾರೆ. ರಿಷಿ ಅವರು ಯಶಸ್ವಿ ಉದ್ಯಮಿಯಾಗಿರುವ ಜೊತೆಗೆ, ರಾಜಕಾರಣಿಯಾಗಿಯೂ ಪ್ರಭಾವಶಾಲಿಯಾಗಿದ್ದಾರೆ ಎಂದು ವರದಿ ತಿಳಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next