Advertisement

Engagement: ಸೆಲ್ಫಿ ಕೇಳಿದ ಅಭಿಮಾನಿಯೊಂದಿಗೇ ಮಾಜಿ ವಿಂಬಲ್ಡನ್‌ ಚಾಂಪಿಯನ್‌ ನಿಶ್ಚಿತಾರ್ಥ!

05:12 PM May 31, 2023 | Team Udayavani |

ನ್ಯೂಯಾರ್ಕ್‌: ಮಾಜಿ ಟೆನಿಸ್‌ ಫ್ರೆಂಚ್‌ ಓಪನ್‌ ಮತ್ತು ವಿಂಬಲ್ಡನ್‌ ಚಾಂಪಿಯನ್‌ ಗಾರ್ಬೈನ್‌ ಮಗುರುಝಾ ಅವರು 2021 ರಲ್ಲಿ ನ್ಯೂಯಾರ್ಕ್‌ನಲ್ಲಿ ನಡೆದ ಯು.ಎಸ್‌ ಓಪನ್‌ ಟೆನಿಸ್‌ ಸರಣಿಯ ಸಂದರ್ಭ ತಮ್ಮೊಂದಿಗೆ ಸೆಲ್ಫಿ ಕ್ಲಿಕ್ಕಿಸಿಕೊಂಡಿದ್ದ ಅಭಿಮಾನಿಯ ಜೊತೆಗೆಯೇ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ.

Advertisement

ಈ ಕುರಿತು ತಮ್ಮ ಇನ್ಸ್ಟಾಗ್ರಾಮ್‌ ಖಾತೆಯಲ್ಲಿ ಬರೆದುಕೊಂಡಿರುವ ಸ್ಪೇನ್‌ನ ಟೆನಿಸ್‌ ತಾರೆ  ಗಾರ್ಬೈನ್‌ ಮಗುರುಝಾ ತಾವು ತಮ್ಮೊಂದಿಗೆ ಸೆಲ್ಫಿ ಕ್ಲಿಕ್ಕಿಸಿಕೊಂಡ ಆರ್ಥರ್‌ ಬಾರ್ಗೆಸ್‌ ಅವರನ್ನು ವಿವಾಹವಾಗುತ್ತಿದ್ದೇನೆ ಎಂದು ಬರೆದುಕೊಂಡಿದ್ದಾರೆ.

ʻಯು.ಎಸ್‌ ಓಪನ್‌ ಟೆನಿಸ್‌ ಟೂರ್ನಮೆಂಟ್‌ನಲ್ಲಿ ಭಾಗವಹಿಸಲು ನಾನು ನ್ಯೂಯಾರ್ಕ್‌ಗೆ ತೆರಳಿದ್ದಾಗ ಒಬ್ಬಳೇ ನಗರದಲ್ಲಿ ಸುತ್ತಾಡಲು ಹೊರ ಹೋಗಿದ್ದೆ. ಆಗ ಆರ್ಥರ್‌ ನನ್ನನ್ನು ಗುರುತಿಸಿ ನನ್ನೊಂದಿಗೆ ಸೆಲ್ಫಿ ಕ್ಲಿಕ್ಕಿಸಿಕೊಂಡು ನನ್ನ ಟೂರ್ನಿಗೆ ಶುಭಹಾರೈಸಿದ್ದ. ನಾನು ಆಗಲೇ ಅವನ ಸೌಂದರ್ಯಕ್ಕೆ ಮಾರುಹೋದೆʼ ಎಂದು 29 ವರ್ಷದ ಮಗುರುಝಾ ತಮ್ಮ ಭೇಟಿಯನ್ನು ನೆನಪು ಮಾಡಿಕೊಂಡಿದ್ದಾರೆ.

ಇದನ್ನೂ ಓದಿMS Dhoni: ಚೆನ್ನೈ ಸೂಪರ್‌ ಕಿಂಗ್ಸ್‌ ತಂಡದ ನಾಯಕ ಧೋನಿ ಆಸ್ಪತ್ರೆಗೆ !

 

Advertisement

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next