Advertisement
ಸಾಮಾನ್ಯವಾಗಿ ಪೇಪರ್‌ನಲ್ಲಿ ಮುದ್ರಿಸುವಾಗ ಇಂಕ್ ಅಥವಾ ಮಸಿಗೆ ರಾಸಾಯನಿಕವನ್ನು ಬಳಸಲಾಗುತ್ತದೆ. ಮುದ್ರಿತ ಪತ್ರಿಕೆಗಳಲ್ಲಿ ಆಹಾರ ಪದಾರ್ಥ ಕಟ್ಟಿಕೊಟ್ಟಾಗ, ರಾಸಾಯನಿಕಯುಕ್ತ ಮಸಿಯು ವಿಷಕಾರಿಯಾಗಿ ಆರೋಗ್ಯಕ್ಕೆ ಹಾನಿಕಾರಕವಾಗಿ ಬಿಡುತ್ತದೆ. ಅದರಂತೆ “ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಕಾಯ್ದೆ-2006’ರ ಪ್ರಕಾರ ಜನರಿಗೆ ಆಹಾರ ಪದಾರ್ಥಗಳನ್ನು ದಿನಪತ್ರಿಕೆ/ವಾರ್ತಾ ಪತ್ರಿಕೆಯಲ್ಲಿ ಕಟ್ಟಿಕೊಡುವುದನ್ನು ನಿಷೇಧಿಸಿ ಮೂರು ತಿಂಗಳ ಹಿಂದೆಯಷ್ಟೇ ಕಟ್ಟುನಿಟ್ಟಿನ ಕ್ರಮ ಜಾರಿ ಗೊಳಿಸಲಾಗಿದೆ.
ರಾಜ್ಯದಲ್ಲಿಯೂ ಪೇಪರ್‌ನಲ್ಲಿ ಆಹಾರ ಪದಾರ್ಥ ಕಟ್ಟಿಕೊಡುವ ನಿಯಮ ಜಾರಿಗೆ ಬಂದಿರುವ ಹಿನ್ನೆಲೆಯಲ್ಲಿ ಎಲ್ಲ ಕಡೆ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ವಿಭಾಗದ ಅಧಿಕಾರಿ ಗಳು ಹಾಗೂ ಆರೋಗ್ಯ ಇಲಾಖೆಯ ತಾಲೂಕು ಮಟ್ಟದ ಅಧಿಕಾರಿಗಳು ಆಯಾ ಅಂಗಡಿ, ಮಾಲ್, ಆಹಾರ ತಯಾರಿಕಾ ಕೇಂದ್ರಗಳಿಗೆ ಭೇಟಿ ನೀಡಿ ಅರಿವು ಮೂಡಿಸುತ್ತಿದ್ದಾರೆ. ಜತೆಗೆ ಇಲಾಖೆ ಜಾರಿಗೊಳಿಸಿರುವ ಮಾರ್ಗಸೂಚಿ ಅಳವಡಿಸುವಂತೆ ಸೂಚನೆಗಳನ್ನು ನೀಡುತ್ತಿದ್ದಾರೆೆ. ಸೂಚನೆ ಬಳಿಕವೂ ಆಹಾರ ಪದಾರ್ಥ ಕಟ್ಟಿ ಕೊಡಲು ಪೇಪರ್ ಬಳಕೆ ಮುಂದುವರಿದಲ್ಲಿ ಅಂಥವರ ವಿರುದ್ಧ ಕಾಯ್ದೆಯ ಪ್ರಕಾರ ದಂಡ ಸೇರಿದಂತೆ ಸೂಕ್ತ ಕಾನೂನು ಕ್ರಮ ಕೈಗೊಳ್ಳಲು ಇಲಾಖೆ ಮುಂದಾಗಿದೆ.
Related Articles
ರಾಜ್ಯದಲ್ಲಿ ಆಹಾರ ಸುರಕ್ಷತೆ ಕಾಯ್ದೆಯನ್ನು ಸಮರ್ಪಕವಾಗಿ ಅನುಷ್ಠಾನಗೊಳಿಸಲು ಸಿಬಂದಿ ಕೊರತೆ ಇರುವುದರಿಂದ ವಿವಿಧ ಇಲಾಖೆಗಳ ತಾಲೂಕು ಮಟ್ಟದ ಅಧಿಕಾರಿಗಳನ್ನು (ನೋಂದಣಿ ಹೊರತು ಪಡಿಸಿ) ಆಹಾರ ಸುರಕ್ಷತೆ ಇಲಾಖೆಯ ಅಧಿಕಾರಿಗಳೊಂದಿಗೆ ಸಹಕರಿಸಲು ರಾಜ್ಯ ಸರಕಾರ ಈಗಾಗಲೇ ಅಧಿಸೂಚಿಸಿದೆ. ಇದರಂತೆ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ, ಕೃಷಿ ಇಲಾಖೆ, ಸಾರ್ವಜನಿಕ ಶಿಕ್ಷಣ ಇಲಾಖೆ, ಪಶುಸಂಗೋಪನೆ ಹಾಗೂ ಮೀನುಗಾರಿಕೆ ಇಲಾಖೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಅಬಕಾರಿ ಇಲಾಖೆ, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್ ಇಲಾಖೆ, ಕೈಗಾರಿಕಾಭಿವೃದ್ದಿ ಮತ್ತು ಕೈಗಾರಿಕೆಗಳು ಹಾಗೂ ವಾಣಿಜ್ಯ ಇಲಾಖೆ, ನಗರಾಭಿವೃದ್ದಿ ಇಲಾಖೆ, ತೋಟಗಾರಿಕೆ ಇಲಾಖೆ, ಕೃಷಿ ಮಾರಾಟ ನಿರ್ದೇಶನಾಲಯ, ಔಷಧ ನಿಯಂತ್ರಣ ಇಲಾಖೆಯ ಅರ್ಹ ಸಿಬಂದಿಯನ್ನು ಇದಕ್ಕಾಗಿ ನಿರ್ವಹಿಸಲು ಸೂಚಿಸಲಾಗಿದೆ.
Advertisement
ಆಹಾರ ಪದಾರ್ಥ ಕಲಬೆರಕೆ; ಮಾದರಿ ಪರೀಕ್ಷೆಇನ್ನು ಕಡಿಮೆ ಬೆಲೆಯ ಅಥವಾ ಕೀಳು ದರ್ಜೆಯ ಆಹಾರ ಪದಾರ್ಥಗಳನ್ನು ಬೆರೆಸುವುದು, ತಿನ್ನಲು ಯೋಗ್ಯವಲ್ಲದ ಹಾಗೂ ಹಾನಿಕಾರಕ ಪದಾರ್ಥ ಬೆರೆಸುವುದು, ನಕಲಿ ಪದಾರ್ಥಗಳನ್ನು ಬೆರೆಸುವುದು ಕೂಡ ಕಾಯ್ದೆ ಪ್ರಕಾರ ಅಪರಾಧ. ಹೀಗಾಗಿ ಮಂಗಳೂರು ಸೇರಿದಂತೆ ರಾಜ್ಯದ ವಿವಿಧ ಭಾಗಗಳಲ್ಲಿ ಜನಸಾಮಾನ್ಯರು ತಾವು ಬಳಸುವ ಆಹಾರ ಪದಾರ್ಥಗಳ ಮಾದರಿಯನ್ನು ಆಹಾರ ಸುರಕ್ಷತೆ ಹಾಗೂ ಗುಣಮಟ್ಟ ಕಾಯ್ದೆಯಡಿ ಅಂಕಿತ ಅಧಿಕಾರಿಗಳು ಪಡೆದುಕೊಂಡು ಪರೀಕ್ಷೆ ನಡೆಸುತ್ತಾರೆ. ಬೆಣ್ಣೆ, ತುಪ್ಪ, ಹಾಲು, ಖಾದ್ಯ ತೈಲಗಳು, ಸಿಹಿತಿಂಡಿ, ಐಸ್‌ಕ್ರೀಂ, ಸಕ್ಕರೆ, ಮೆಣಸಿನ ಪುಡಿ, ಜೇನು ತುಪ್ಪ, ತಂಪು ಪಾನೀಯ ಸೇರಿದಂತೆ ಹಲವು ಬಗೆಯ ಆಹಾರ ಪದಾರ್ಥಗಳನ್ನು ಪರಿಶೀಲನೆಗೆ ಒಳಪಡಿಸಲಾಗುತ್ತ¤ದೆ. ಆಹಾರ ಗುಣಮಟ್ಟ ಪರಿಶೀಲನೆಗೆ ಅಧಿಕಾರಿಗಳ ತಂಡ
ದಿನಪತ್ರಿಕೆಯಲ್ಲಿ ಆಹಾರ ಪದಾರ್ಥ ಕಟ್ಟಿಕೊಡುವುದನ್ನು ಈಗಾಗಲೇ ನಿಷೇಧಿಸ ಲಾಗಿದೆ. ಜತೆಗೆ ಆಹಾರ ತಯಾರಿಕೆ, ದಾಸ್ತಾನು, ಪ್ಯಾಕಿಂಗ್, ಸಾಗಾಣಿಕೆ ಹಂಚಿಕೆ, ಮಾರಾಟ ಮತ್ತು ಆಮದು ಮಾಡುವ ಸ್ಥಳ ಗಳಿಗೆ ಆಹಾರ ಸುರಕ್ಷತೆಗೆ ಸಂಬಂಧಿಸಿದ ಅಧಿಕಾರಿ ಪರಿವೀಕ್ಷಣೆ ನಡೆಸಿ ಆಹಾರ ಗುಣಮಟ್ಟ ಪರೀಕ್ಷೆಗೆ ಆಹಾರ ಮಾದರಿಯನ್ನು ಪಡೆದು ಪರೀಕ್ಷೆಗೆ ಒಳಪಡಿಸಲಾಗುತ್ತದೆ. ಸದ್ಯಕ್ಕೆ ಈ ಬಗ್ಗೆ ಅಂಗಡಿ ಮಾಲಕರು ಹಾಗೂ ಜನಸಾಮಾನ್ಯರಿಗೆ ಅರಿವು ಮೂಡಿಸುವ ಕಾರ್ಯಕ್ರಮಗಳಿಗೆ ಒತ್ತು ನೀಡ ಲಾಗು ತ್ತದೆ. ಬಳಿಕ ಅಸುರಕ್ಷಿತ ಆಹಾರ ಪತ್ತೆಯಾದರೆ ಕನಿಷ್ಠ 25,000 ರೂ.ಗಳಿಂದ 10 ಲಕ್ಷ ರೂ. ವರೆಗೆ ದಂಡ ಹಾಗೂ ಕನಿಷ್ಠ 6 ತಿಂಗಳಿನಿಂದ ಜೀವಾವಧಿವರೆಗೆ ಶಿಕ್ಷೆ ವಿಧಿಸಬಹುದು. – ಡಾ| ರಾಜೇಶ್ ಬಿ.ವಿ.
– ಅಂಕಿತ ಅಧಿಕಾರಿಗಳು, ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಕಾರ್ಯಾಲಯ, ದ.ಕ.