ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ಈಗ ಮೇಳಗಳ ಪರ್ವ. ಸಾರ್ವಜನಿಕರನ್ನು ಆಕರ್ಷಿಸಲು ಒಂದು ಮುಗಿಯುತ್ತಿದ್ದಂತೆ ಇನ್ನೊಂದು ಮೇಳ ಆರಂಭವಾಗುತ್ತಿದೆ. ಬೆಂಗಳೂರು ಕೃಷಿ ವಿಜ್ಞಾನ ವಿಶ್ವವಿದ್ಯಾಲಯದಲ್ಲಿ ನಡೆದ ಕೃಷಿ ಮೇಳ ರೈತರ ಪ್ರಶಂಸೆಗೆ ಪಾತ್ರವಾಗಿದ್ದ ಬೆನ್ನಲ್ಲೇ ಸಸ್ಯಹಾರಿಗಳ ಮನ ತಣಿಸಲು ಅಂತಾರಾಷ್ಟ್ರೀಯ ಮಟ್ಟದ ಸಸ್ಯಾಹಾರ ಮೇಳಕ್ಕೆ ಉದ್ಯಾನ ನಗರಿ ಅಣಿಯಾಗಿದೆ.
ಆಹಾರ ಮೇಳದಲ್ಲಿ ದೇಶಿಯ ಉತ್ತರ ಕರ್ನಾಟಕದ ಗಿರ್ಮಿಟ್ ಜೊತೆ ಮಲೆನಾಡಿನ ಬಾಳೆ ಎಲೆ ಕಡಬು ಕೂಡ ಘಮ ಘಮಿಸಲಿದೆ. ಇಟಾಲಿಯನ್ ಫೀಝಾಸ್, ಮೇಕ್ಸಿಗನ್ ಬುರಿಟೋ ಬೋಲ್, ಫ್ರೆಂಚ್ ಕ್ರೆಫ್, ಅಮೆರಿಕನ್ ಬರ್ಗರ್, ಇಟಾಲಿನ್ ಪಾಸ್ತಾ, ಜಪನೀಸ್ ಸುಸಿ, ಚೈನೀಸ್ ನ್ಯೂಡಲ್ಸ್, ಲಿವಾನೋ ಕಂಪನಿ ವಿಯೆಟ್ನಾಂ ದೇಶದ ವೆಟ್ನಾಂ ಸ್ನ್ಯಾಕ್ಸ್ ಮೊದಲಾದ ಖಾದ್ಯಗಳು ಭೋಜನಾ ಪ್ರಿಯರಿಗೆ ಹಬ್ಬದೂಟ ನೀಡಲಿದೆ.
ಕರ್ನಾಟಕ, ರಾಜಸ್ಥಾನ, ದೆಹಲಿ, ಪಂಜಾಬ್, ಗುಜರಾತ್, ಕೇರಳ ಮೊದಲಾದ ರಾಜ್ಯಗಳ ಪ್ರಸಿದ್ಧ ತಿನಿಸುಗಳು ಈ ಮೇಳದ ವಿಶೇಷವಾಗಿದೆ. ರಾಜಸ್ಥಾನದ ಸುಪ್ರಸಿದ್ಧ ಆಹಾರ ಚೂರ್ಣ, ಗುಜರಾತಿನ ಡೋಕ್ಲಾ, ಕಮನ್ ಡೋಕ್ಲಾ, ಪಾಪಡಿ, ದೆಹಲಿಯ ಕುಲ್ಚೆ, ಚೋಲ್ಲೆ, ತಂದೂರ್ ಸುಕ್ಕಾ , ದೆಹಲಿ ಶೈಲಿಯ ಪಾನೀಪುರಿ, ಮಹಾರಾಷ್ಟ್ರದ ವಾಡಫಾವ್, ಕೊಲ್ಲಪುರಿ ಬೆಲ್ ಪುರಿ, ಅವಾಕಾಯ್ ಅನ್ನ ಆಂಧ್ರ. ಕೇರಳ ಆಪಂ, ಬನಾನಾ ಫ್ರೈ,ಪುಟ್ಟು ಮತ್ತು ಕಡಲೆ ಮೇಳದಲ್ಲಿ ಇರಲಿದೆ.
ಸೇರಿದಂತೆ ಸುಮಾರು ಒಂದು ಸಾವಿರಕ್ಕಿಂತೂ ಹೆಚ್ಚು ಡಿಸ್‌ಗಳು ಸಿಗಲಿವೆ. ಜೊತೆ ಹೈದರಬಾದ್ ವೆಜ್ ಬಿರಿಯಾನಿ ಕೂಡ ಚಪ್ಪರಿಸಬಹುದಾಗಿದೆ.
ವಿಭಿನ್ನ ದೇಶಗಳ ರಸಮಯ ಪಾಕಗಳು: ನ.24ರಿಂದ 26ರ ತನಕ ಬೆಳಗ್ಗೆ 9ರಿಂದ ರಾತ್ರಿ 10ರ ವರೆಗೆ ಫ್ರೀಡಂ ಪಾರ್ಕ್‌ನಲ್ಲಿ ನಡೆಯಲಿರುವ ಅಂತಾಷ್ಟ್ರೀಯ ಆಹಾರ ಮೇಳವನ್ನು ಅನಿಲ್ ಗುಪ್ತ, ನವೀನ್ ಸುರೇಶ್,ವಿಜಯಶ್ರೀ,ಚೈತ್ರಾ ಕಟ್ಟಿ ಇನ್ನಿತರ ಸಂಘಟಕರು ಆಯೋಜಿಸಿದ್ದಾರೆ. ಆಹಾರ ಮೇಳಗಳು ಪಂಚಾತಾರ ಹೋಟೆಲ್ ಗಳಿಗೆ ಸೀಮಿತವಾಗಿದೆ. ವಿಭಿನ್ನ ದೇಶಗಳ ಖಾದ್ಯಗಳು ಶ್ರೀಸಾಮಾನ್ಯನಿಗೂ ದೊರಕಬೇಕು ಎಂಬ ಉದ್ದೇಶದಿಂದ ಮೇಳವನ್ನು ಹಮ್ಮಿಕೊಂಡಿದ್ದಾರೆ.
ಆಹಾರ ಮೇಳದ ಜತೆಗೆ ಜನರನ್ನು ಹೆಚ್ಚಿನ ಸಂಖ್ಯೆಯಲ್ಲಿ ಆಕರ್ಷಿಸಲು ಸಂಜೆ ಶಿವಮೊಗ್ಗದ ಚಾರ್ಮಿ ಮುರಳೀಧರ್ ಅವರಿಂದ ಲೈವ್ ಮ್ಯೂಸಿಕ್, ಬೆಲ್ಲಿ ಡ್ಯಾನ್ಸ್, ಫ್ಯಾಶನ್ ಶೋ ಮೊದಲಾದ ಮನೋರಂಜನಾ ಕಾರ್ಯಕ್ರಮವನ್ನು ಏರ್ಪಡಿಸಲಿದ್ದೇವೆ.
-ಅನಿಲ್ ಗುಪ್ತ, ಸಂಘಟಕ