ಮಡಿಕೇರಿ: ಕೊಡವ ಕುಟುಂಬಗಳ ನಡುವೆ ನಾಪೋಕ್ಲು ಚೆರಿಯಪರಂಬು ಬಳಿಯ ಜನರಲ್ ತಿಮ್ಮಯ್ಯ ಕ್ರೀಡಾಂಗಣದಲ್ಲಿ ನಡೆಯುತ್ತಿರುವ 22 ನೇ ವರ್ಷದ ಕುಲ್ಲೇಟಿರ ಕೊಡವ ಕಪ್ ಹಾಕಿ ಹಬ್ಬದಲ್ಲಿ ಅಮ್ಮಾಟಂಡ, ಕುಟ್ಟಂಡ, ಪೊನ್ನೋಲ್ತ ಂಡ, ಚೆರುಮಂದಂಡ, ಮುದ್ದಿಯಂಡ, ಮಲ್ಲಮಡ, ನಾಮೆರ, ಅಲ್ಲುಮಡ, ಐಚಂಡ, ಕೆಚ್ಚೇಟಿರ, ತಂಡಗಳು ಮುನ್ನಡೆ ಪಡೆದುಕೊಂಡಿದೆ.
ಶುಕ್ರವಾರ ನಡೆದ ಪಂದ್ಯದಲ್ಲಿ ಮಲ್ಲಮಾಡ ತಂಡವು 2-0 ಗೋಲಿನಿಂದ ಕೊರವಂಡ ತಂಡವನ್ನು ಮಣಿಸಿತು. ವಿಶೇಷವೆಂದರೆ, ಇದೇ
ಮೊದಲ ಬಾರಿಗೆ ಮಳೆಯೊಬ್ಬರು ಮಿಂಚಿನ ಗೋಲು ಬಾರಿಸಿದರು. ಮಲ್ಲಮಾಡ ತಂಡದ ಲೀಲಾವತಿ ಗೋಲು ಗಳಿಸಿ ನೆರೆದಿದ್ದ
ಅಭಿಮಾನಿಗಳಲ್ಲಿ ಮಿಂಚಿನ ಸಂಚಲನಕ್ಕೆ ಕಾರಣರಾದರು. ಮತ್ತೂಂದು ಗೋಲನ್ನು ಅದೇ ತಂಡದ ಕರುಂಬಯ್ಯ ಬಾರಿಸಿದರು ಎನ್ನುವುದು ವಿಶೇಷ.
ಮೊದಲ ಪಂದ್ಯಲ್ಲಿ ಮಾದೆಯಂಡ ತಂಡವು ಅಮ್ಮಾಟಂಡ ತಂಡದ ರುದಟಛಿ 4-0 ಗೋಲಿನಿಂದ ಸೋಲನ್ನು ಅನುಭಸಿತು. ಅಮ್ಮಾಟಂಡ ತಂಡವು ಬಹಳ ಬಿರುಸಿನ ಆಟವಾಡಿ ತಂಡದ ಪರ ಮೇದಪ್ಪ 2, ಬೋಪಣ್ಣ, ದೇವಯ್ಯ ಗೋಲು ಬಾರಿಸಿ ತಂಡ ಮುಂದಿನ ಹಂತ ತಲುಪಲು ನೆರವಾದರು. ಎರಡನೇ ಪಂದ್ಯದಲ್ಲಿ ಮುದ್ದಿಯಂಡ ತಂಡ ಕಬ್ಬಚ್ಚೀರ ತಂಡವನ್ನು 2-0 ಗೋಲಿನಿಂದ ಮಣಿಸಿತು. ತಂಡದ ಪರ ಮುದ್ದಿಯಂಡ ಬೋಪಣ್ಣ 2 ಗೋಲು ಬಾರಿಸಿ ಮಿಂಚಿದರು.
ಎಸ್.ಕೆ.ಲಕ್ಷ್ಮೀಶ