Advertisement
ಪ್ರಸ್ತುತ ತಾರಾಲಯದಲ್ಲಿ ಕೈಗೊಂಡಿರುವ ಸಿವಿಲ್ ಕಾಮಗಾರಿ, ಡೋಮ್ ಅಳವಡಿಕೆ, ಪ್ರೊಜೆಕ್ಷನ್ ಸಿಸ್ಟಮ್ ಹಾಗೂ ಇನ್ನಿತರ ವ್ಯವಸ್ಥೆಗಳ ಬಗ್ಗೆ ಗುರು ವಾರ ಪಿಲಿಕುಳದಲ್ಲಿ ಪರಿಶೀಲನೆ ನಡೆಸಿದ ಬಳಿಕ ಮಂಗಳೂರು ಜಿಲ್ಲಾಧಿಕಾರಿ ಕಚೇರಿ ಯಲ್ಲಿ ಪತ್ರಿಕಾ ಗೋಷ್ಠಿ ನಡೆಸಿದ ಯೋಜನೆ, ಸಾಂಖೀಕ, ವಿಜ್ಞಾನ ಹಾಗೂ ತಂತ್ರಜ್ಞಾನ ಸಚಿವ ಎಂ.ಆರ್. ಸೀತಾರಾಂ ಅವರು, ಪಿಲಿಕುಳದಲ್ಲಿ ನಿರ್ಮಾಣ ವಾಗು ತ್ತಿರುವ 3ಡಿ ತಾರಾಲಯವು ಭಾರತದ ಪ್ರತಿಷ್ಠಿತ ತಾರಾಲಯ ವಾಗ ಲಿದೆ. ಇದು ಕರ್ನಾಟಕದ ಪ್ರವಾ ಸೋ ದ್ಯಮ ಅಭಿವೃದ್ಧಿಯ ದೃಷ್ಟಿಯಿಂದ ಹೊಸ ಮೈಲಿಗಲ್ಲು. ಇದರಿಂದ ಮಂಗಳೂರು ವ್ಯಾಪ್ತಿಯಲ್ಲಿ ಪ್ರವಾ ಸೋ ದ್ಯಮಕ್ಕೆ ಹೊಸ ದಿಕ್ಕು ದೊರೆಯಲಿದೆ ಎಂದರು.
ತಾರಾಲಯದ ಡೋಮ್‌ನೊಳಗೆ ಅತ್ಯಂತ ಪರಿ ಣಾಮಕಾರಿಯಾದ ನ್ಯಾನೋಸಿಮ್ ಫ್ಯಾಬ್ರಿಕೇಶನ್ ಮತ್ತು ಅಳವಡಿಕೆ ಶೇ. 80ರಷ್ಟು ಪೂರ್ಣಗೊಂಡಿದೆ. ಇದನ್ನು ಅಮೆರಿಕದಿಂದ ಬಂದಿರುವ ಮೂವರು ಪರಿಣತರೊಂದಿಗೆ ಮಹಾರಾಷ್ಟ್ರದ ನಾಸಿಕ್‌ನ ಹಲ ವಾರು ತಂತ್ರಜ್ಞರು ನಿರ್ವಹಿಸುತ್ತಿದ್ದಾರೆ. ನ್ಯಾನೋಸಿಮ್ ಅಳವಡಿಕೆಯಿಂದ ಖಗೋಳ ವಿಜ್ಞಾನ ಪ್ರದರ್ಶನಗಳನ್ನು ಉತ್ಕೃಷ್ಟ ಮಟ್ಟದಲ್ಲಿ ನಡೆಸ ಬಹುದಾಗಿದೆ. ತಾರಾಲಯದ 18 ಮೀ. ವ್ಯಾಸದ, 15 ಡಿಗ್ರಿ ಕೋನದಲ್ಲಿ ಇರಿಸಲ್ಪಟ್ಟ ಡೋಮ್ (ಗುಮ್ಮಟ) ಕೂಡ ವಿಶಿಷ್ಟವಾಗಿದ್ದು, ಪ್ರದರ್ಶನಗಳು ವೀಕ್ಷಕರಿಗೆ ನೈಜ ಅನುಭವ ನೀಡಲಿವೆ. ತಾರಾಲಯದ ಹೈಬ್ರಿಡ್ ಪ್ರೊಜೆಕ್ಷನ್ ಸಿಸ್ಟಮ್‌ಗಳಾದ ಆಪ್ಪೋ-ಮೆಕ್ಯಾನಿಕಲ್ ಮತ್ತು ಆ್ಯಕ್ಟಿವ್ 3ಡಿ 8ಕೆ ಡಿಜಿಟಲ್ ಪ್ರೊಜೆಕ್ಷನ್ ಸಿಸ್ಟಮ್‌ಗಳು ಈಗಾಗಲೇ ಪಿಲಿಕುಳಕ್ಕೆ ಬಂದಿವೆ ಎಂದು ಸಚಿವ ಎಂ.ಆರ್. ಸೀತಾರಾಂ ವಿವರಿಸಿದರು. ಇದರ ಜತೆಗೆ ಖಗೋಳ ಹಾಗೂ ಬಾಹ್ಯಾಕಾಶ ವಿಜ್ಞಾನಕ್ಕೆ ಸಂಬಂಧಿಸಿದ ಒಂದು ತಾತ್ಕಾಲಿಕ ಗ್ಯಾಲರಿ ಯನ್ನೂ ನಿರ್ಮಿಸಲಾಗುತ್ತದೆ. ಇದಕ್ಕೆ ಅನು ಕೂಲ ವಾಗುವಂತೆ ಸುಮಾರು 5,200 ಚದರ ಅಡಿ ವಿಸ್ತೀರ್ಣದ ಕಟ್ಟಡ ನಿರ್ಮಾಣಗೊಂಡಿದ್ದು, ಖಗೋಳ ವಿಜ್ಞಾನದ ವಿನೂತನ ಮಾದರಿಗಳನ್ನು ಇಲ್ಲಿ ಅಳವಡಿಸಲಾಗುತ್ತದೆ ಎಂದು ಅವರು ಹೇಳಿದರು.
Related Articles
Advertisement
ಸಿಸ್ಟಮ್ ಅಳವಡಿಕೆಗೆ ಅಮೆರಿಕ-ಜಪಾನ್‌ನ ಪರಿಣತರು!ಪಿಲಿಕುಳ ತಾರಾಲಯಕ್ಕಾಗಿ ಆಪ್ಪೋ- ಮೆಕ್ಯಾನಿಕಲ್ ಸಿಸ್ಟಮ್ ಜಪಾನಿನ ಟೋಕಿಯೋ ದಿಂದ ಹಾಗೂ ಆಕ್ಟಿವ್ 3ಡಿ 8ಕೆ ಡಿಜಿಟಲ್ ಪ್ರೊಜೆಕ್ಷನ್ ಸಿಸ್ಟಮ್ ಅಮೆರಿಕದ ಸಾಲ್ಟ್ಲೇಕ್ ಸಿಟಿಯಿಂದ ಬಂದಿವೆ. ಈ 2 ಪ್ರೊಜೆಕ್ಷನ್ ಸಿಸ್ಟಮ್ ಮತ್ತು ನ್ಯಾನೋಸಿಮ್ ಡೋಮ್ ನಿರ್ಮಾಣಕ್ಕೆ ಸುಮಾರು 21.50 ಕೋ.ರೂ. ವ್ಯಯ ವಾಗಿದೆ. ತಾರಾಲಯದಲ್ಲಿ ಜನವರಿ ಮೊದಲ ವಾರ ಈ ಸಿಸ್ಟಮ್‌ಗಳ ಅಳವಡಿಕೆ ಆರಂಭಿಸ ಲಾಗುವುದು. ಇದಕ್ಕಾಗಿ ಜಪಾನ್ ಹಾಗೂ ಅಮೆರಿಕದಿಂದ ಪರಿಣತರು ಆಗ ಮಿಸ ಲಿದ್ದಾರೆ ಎಂದು ಸಚಿವ ಸೀತಾರಾಂ ತಿಳಿಸಿದರು. ಪಿಲಿಕುಳ ಅಭಿವೃದ್ಧಿ ಪ್ರಾಧಿಕಾರ- ಶೀಘ್ರ ಸಂಪುಟ ಒಪ್ಪಿಗೆ
ಪಿಲಿಕುಳದ ಸಮಗ್ರ ಅಭಿವೃದ್ಧಿಯನ್ನು ಗಮನ ದಲ್ಲಿಟ್ಟುಕೊಂಡು ಪ್ರತ್ಯೇಕ ಅಭಿವೃದ್ಧಿ ಪ್ರಾಧಿಕಾರ ನಿರ್ಮಾಣ ಮಾಡಬೇಕು ಎಂಬ ಆಗ್ರಹದ ಈಡೇರಿಕೆಗೆ ಮೊದಲ ಹಂತದ ಪ್ರಕ್ರಿಯೆ ನಡೆಸಲಾಗಿದೆ. ಶೀಘ್ರದಲ್ಲಿ ಇದು ಸಚಿವ ಸಂಪುಟ ಸಭೆ ಮೂಲಕ ಅಂಗೀಕಾರ ಪಡೆದು ಪ್ರಾಧಿಕಾರ ಕಾರ್ಯಾರಂಭಿಸಲಿದೆ. ಆ ಬಳಿಕ ತಾರಾಲಯ ಸೇರಿದಂತೆ ಪಿಲಿಕುಳದ ಸಮಗ್ರ ಅಭಿವೃದ್ಧಿಯನ್ನು ಪ್ರಾಧಿ ಕಾರವು ನಿರ್ವಹಿಸಲಿದೆ. ಪಿಲಿಕುಳ ವಿವಿಧ ಇಲಾಖೆಗಳ ವ್ಯಾಪ್ತಿಗೆ ಸೇರುವ ಕಾರಣ ಈ ಎಲ್ಲ ಇಲಾಖೆಗಳನ್ನು ಇದರಲ್ಲಿ ಸೇರ್ಪಡೆ ಗೊಳಿಸಲು ನಿರ್ಧರಿಸಲಾಗಿದೆ ಎಂದು ಸಚಿವ ಸೀತಾರಾಂ ಹೇಳಿದರು.