Advertisement

ಪಟಾಕಿ ಗೊಂದಲ ನಿವಾರಿಸಲು ಮನವಿ

08:03 PM Nov 09, 2020 | Suhan S |

ಯಾದಗಿರಿ: ದೀಪಾವಳಿ ನಿಮಿತ್ತ ಪಟಾಕಿ ಖರೀದಿಸಲು ಮತ್ತು ಮಾರಾಟ ಮಾಡುವ ನಿಟ್ಟಿನಲ್ಲಿ ಸರ್ಕಾರ ಹೊರಡಿಸಿದ ಆದೇಶ ಗೊಂದಲಮಯವಾಗಿದ್ದು, ಇದು ಪಟಾಕಿ ಮಾರಾಟಗಾರರ ಮೇಲೆ ದುಷ್ಪರಿಣಾಮ ಬೀರುತ್ತಿದೆ. ತಕ್ಷಣ ಆದೇಶದಲ್ಲಿರುವ ಗೊಂದಲ ಪರಿಹರಿಸಲು ಪಟಾಕಿ ಮಾರಾಟಗಾರರ ಸಂಘ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿತು.

Advertisement

ಪ್ರತಿ ವರ್ಷದಂತೆ ಈ ವರ್ಷವೂ ಜಿಲ್ಲಾಡಳಿತ-ರಾಜ್ಯ ಸರ್ಕಾರ ಆದೇಶದ ಪ್ರಕಾರ ಪಟಾಕಿ ಮಾರಾಟ ಮಾಡುತ್ತಿದ್ದೇವೆ. ಆದರೆ ಈ ವರ್ಷ ದೀಪಾವಳಿ ಆಚರಣೆ ಸಂಬಂಧ ಮಾರ್ಗಸೂಚಿಗಳ ಪ್ರಕಾರ ಪಟಾಕಿ ಮಾರಾಟದ ಮಳಿಗೆ ನಿಗದಿತ ಅವಧಿವರೆಗೆ ಮಾತ್ರ ತೆರೆದಿರತಕ್ಕದ್ದು, ಪಟಾಕಿ ಅಂಗಡಿ ಮಾರಾಟ ಮಾಡುವ ಸುತ್ತಮುತ್ತ ದಿನನಿತ್ಯ ಸ್ಯಾನಿಟೈಸರ್‌ ಮಾಡುವುದು ಹಾಗೂ ಖರೀದಿಗೆ ಬರುವವರಿಗೆ ಸ್ಯಾನಿಟೈಸರ್‌-ಥರ್ಮಲ್‌ ಸ್ಕ್ರೀನಿಂಗ್‌ ವ್ಯವಸ್ಥೆ ಜೊತೆಗೆ ಕನಿಷ್ಟ 6 ಅಡಿ ಸಾಮಾಜಿಕ ಅಂತರ ಗುರುತಿಸುವುದು ಅದನ್ನು ಕಟ್ಟುನಿಟ್ಟಾಗಿ ಪಾಲಿಸಲು ಆದೇಶಿಸಿದ್ದು, ಮುಖ್ಯಮಂತ್ರಿಗಳು ರಾಜ್ಯದಲ್ಲಿ ಪಟಾಕಿ ಮಾರಾಟ ಮತ್ತು ಸಿಡಿಸುವುದು ನಿಷೇಧ ಮಾಡಿ ಗೊಂದಲಮಯ ಆದೇಶ ಮಾಡಿದ್ದಾರೆ.

ಒಂದೆಡೆ ಪಟಾಕಿ ಮಾರಾಟ- ಸಿಡಿಸುವುದು ನಿಷೇಧ ಎನ್ನುತ್ತಾರೆ. ಇನ್ನೊಂದೆಡೆ ಹಸಿರು ಪಟಾಕಿ ಮಾತ್ರ ಬಳಕೆ ಮಾಡುವಂತೆ ತಿಳಿಸಿದ್ದಾರೆ. ಇದು ಜನರು ಮತ್ತು ಮಾರಾಟಗಾರರಲ್ಲಿ ಗೊಂದಲವನ್ನುಂಟು ಮಾಡಿದ್ದು, ಸರಿಪಡಿಸಲು ಮನವಿ

ಮಾಡಿದರು. ಶ್ರವಣ ಕುಮಾರ ನಿರ್ಮಲಕರ್‌ ಮನವಿ ಸಲ್ಲಿಸಿದರು. ವರ್ತಕರಾದ ಸೋಹನ್‌ ಪ್ರಸಾದ, ರವೀಂದ್ರ ಬುಕ್ಕಾ, ನಾಗರಾಜ ಜಿವಣಗಿ, ಅರುಣ ಕುಮಾರ ದಾಸನಕೇರಿ, ಫಯಾಜ್‌ ಸನಸಾರ್‌ ಇತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next