ಸ್ಥಳೀಯ ಜನರ ಬಹು ದಶಕಗಳ ಬೇಡಿಕೆಯಾಗಿದ್ದ ಕಿಂಡಿ ಅಣೆಕಟ್ಟು ನಿರ್ಮಾಣ ಕಾಮಗಾರಿ ಸಂಪೂರ್ಣಗೊಂಡಿದ್ದು, ಸುಮಾರು 3 ರಿಂದ 4 ಫೀಟ್ ನಷ್ಟು ನೀರು ಈ ಬಾರಿ ಸಂಗ್ರಹಗೊಂಡಿದೆ.
Advertisement
ಕಿಂಡಿ ಅಣೆಕಟ್ಟುವಿನ ನಿರ್ಮಾಣದಿಂದಾಗಿ ಅಂರ್ತಜಲ ವೃದ್ಧಿಗೊಂಡಿದ್ದು, ಹೊಳೆಯ ಇಕ್ಕೆಲಗಳ ಕೃಷಿಕರ ಬಾವಿ ನೀರಿನ ಮಟ್ಟ ಹೆಚ್ಚಳಗೊಂಡಿರುವ ಬಗ್ಗೆ ರೈತರು ಸಂತಸ ವ್ಯಕ್ತಪಡಿಸುತ್ತಿದ್ದಾರೆ. ಮುಂದಿನ ಬೇಸಿಗೆಯಲ್ಲಿ ಸುಮಾರು 8 ರಿಂದ 10 ಫೀಟ್ ನಷ್ಟು ನೀರು ಸಂಗ್ರಹಗೊಳ್ಳಲು ಅವಕಾಶವಿದ್ದು, ಮರ್ಣೆ ಪಂ.ವ್ಯಾಪ್ತಿಯ ಹಾಗೂ ವರಂಗ ಪಂಚಾಯತ್ ವ್ಯಾಪ್ತಿಯ ಕಾಡುಹೊಳೆ ಪ್ರದೇಶದ ಕೃಷಿಕರ ಬಾವಿಗಳ ಅಂತರ್ಜಲ ವೃದ್ಧಿಸಿ ಕೃಷಿಗೆ ಸಾಕಷ್ಟು ನೀರು ಒದಗಬಹುದು ಎಂಬುದು ಸ್ಥಳೀಯರ ಅಭಿಪ್ರಾಯ.ಕಿಂಡಿ ಅಣೆಕಟ್ಟುವಿನೊಂದಿಗೆ ವಿಶಾಲ ವಾದ ಸೇತುವೆ ಕಾಮಗಾರಿಯು ನಡೆ ಯುತ್ತಿದ್ದು ಅಂತಿಮ ಹಂತದಲ್ಲಿದೆ.
ಕಾಡುಹೊಳೆ ಮಳೆಗಾಲದಲ್ಲಿ ತುಂಬಿ ಹರಿಯುವುದರಿಂದ ಹೊಳೆಯ ಇಕ್ಕೆಲಗಳ ಜನರಿಗೆ ಸಂಪರ್ಕಕ್ಕೆ ಸುತ್ತು ಬಳಸಿ ಹೋಗಬೇಕಾಗಿತ್ತು. ಈ ಸೇತುವೆ ನಿರ್ಮಾಣ ದಿಂದಾಗಿ ಸುಮಾರು 100 ಮನೆಗಳ ಜನರಿಗೆ ಸಂಪರ್ಕಕ್ಕೆ ಅನುಕೂಲವಾಗಿದೆ. ಉತ್ತಮ ಸ್ಪಂದನೆ
ಕಾಡುಹೊಳೆ ಪರಿಸರದ ಕೃಷಿಕರ ಬಹುದಿನದ ಬೇಡಿಕೆ ಕಿಂಡಿ ಅಣೆಕಟ್ಟು ನಿರ್ಮಾಣ ಪೂರ್ಣಗೊಂಡಿದೆ. ಈ ಬಗ್ಗೆ ಸ್ಥಳೀಯರು ಶಾಸಕರು ಸೇರಿದಂತೆ ಜನಪ್ರತಿನಿಧಿಗಳಿಗೆ ಸಲ್ಲಿಸಿದ್ದ ಮನವಿಗೆ ಸ್ಪಂದನೆ ದೊರೆತಂತಾಗಿದೆ.
– ಕೃಷ್ಣ ನಾಯ್ಕ , ಕೃಷಿಕರು