Advertisement

ಅಂತ್ರಾಯಪಲ್ಕೆ ಹೊಳೆಯಲ್ಲಿ ಮುಳುಗಿ ಮೃತಪಟ್ಟವರಿಗೆ ಅಂತಿಮ ವಿದಾಯ

03:45 AM Jan 13, 2017 | Team Udayavani |

ಕಾಪು: ಬೆಳ್ತಂಗಡಿ ನಡಾ ಗ್ರಾಮದ ಅಂತ್ರಾಯಪಲ್ಕೆ ಹೊಳೆಯಲ್ಲಿ ಬುಧವಾರ ಸಂಜೆ ಸ್ನಾನಕ್ಕೆಂದು ಇಳಿದ ವೇಳೆ ಸಂಭವಿಸಿದ ದುರ್ಘ‌ಟನೆಯಲ್ಲಿ ಮೃತಪಟ್ಟ ಮಲ್ಲಾರು ಪಕೀರಣಕಟ್ಟೆಯ ನಾಲ್ಕು ಮಂದಿಯ ಮೃತದೇಹಗಳನ್ನು ಗುರುವಾರ ಮುಂಜಾನೆ ಸಾವಿರಾರು ಜನರ ಉಪಸ್ಥಿತಿಯಲ್ಲಿ ಬೆಳಪು ಮತ್ತು ಮಜೂರಿನ ಖಬರಿಸ್ಥಾನಗಳಲ್ಲಿ ದಫನ ಮಾಡಲಾಯಿತು.

Advertisement

ಮೃತ ದಂಪತಿ ಅಬ್ದುಲ್‌ ರಹೀಂ ಮತ್ತು ರುಬಿನಾ ಅವರ ಮೃತದೇಹ ವನ್ನು ಮುಂಜಾನೆ 4 ಗಂಟೆಯ ವೇಳೆ ಬೆಳಪು ಬದ್ರಿಯಾ ಜುಮ್ಮಾ ಮಸೀ ದಿಯ ಖಬರಿಸ್ಥಾನದಲ್ಲಿ ಹಾಗೂ ಯಾಸ್ಮಿನ್‌ ಮತ್ತು ಸುಬಾನ್‌ ಅವರ ಮೃತದೇಹವನ್ನು ಬೆಳಗ್ಗೆ 7 ಗಂಟೆಗೆ ಮಜೂರು ಬದ್ರಿಯಾ ಜುಮ್ಮಾ ಮಸೀದಿಯ ಖಬರಿಸ್ಥಾನದಲ್ಲಿ ದಫನ ಮಾಡಲಾಯಿತು.

ಕಾಪು ಸಮೀಪದ ಮಲ್ಲಾರು ಪಕೀ ರಣಕಟ್ಟೆಯ ಶಾಹಿಲ್‌ ಮಂಜಿಲ್‌ನ ಅಬ್ದುಲ್ಲಾ ಅವರ ಪತ್ನಿ ಮೈಮುನಾ, ಅಳಿಯ ಅಬ್ದುಲ್‌ ರಹೀಂ, ಪುತ್ರಿಯರಾದ ರುಬಿನಾ, ಯಾಸ್ಮಿನ್‌, ಸಾಹಿನಾ, ಮೊಮ್ಮಗ ಸುಬಾನ್‌ ಸೇರಿ ದಂತೆ ಮೂರು ಮಂದಿ ಮಕ್ಕಳ ಸಹಿತ 9 ಮಂದಿ ಬುಧವಾರ ಮುಂಜಾನೆ ಮಗುವಿನ ಹರಕೆ ತೀರಿಸಲೆಂದು ಕಾಜೂರು ದರ್ಗಾಕ್ಕೆ ತೆರಳಿದ್ದರು. ಅಲ್ಲಿ ಹರಕೆ ತೀರಿಸಿ ವಾಪಸಾ ಗುತ್ತಿದ್ದ ವೇಳೆ ಬೆಳ್ತಂಗಡಿಯ ನಡಾ ಗ್ರಾಮದ ಅಂತ್ರಾಯಪಲ್ಕೆ ಹೊಳೆ ಯಲ್ಲಿ ಸ್ನಾನಕ್ಕೆ ಇಳಿದಿದ್ದ ವೇಳೆ ಮೈಮುನಾ, ಅವರ ಅಳಿಯ ಅಬ್ದುಲ್‌ ರಹೀಂ, ಪುತ್ರಿಯರಾದ ರುಬಿನಾ, ಯಾಸ್ಮಿನ್‌ ಮತ್ತು ಮೊಮ್ಮಗ ಸುಬಾನ್‌ ಮುಳುಗಿ ದ್ದರು. ಇವರ ಪೈಕಿ ಮೈಮುನಾ ಅವರನ್ನು ಸ್ಥಳೀಯರು ರಕ್ಷಿಸಿದ್ದು, ಉಳಿದವರು ಸ್ಥಳದಲ್ಲೇ ಮೃತಪಟ್ಟರು.

ಮೈಮುನಾ ಆರೋಗ್ಯ ಸ್ಥಿತಿ 
ಸ್ಥಿರ ; ಮಾನಸಿಕ ಆಘಾತ  

ಸ್ಥಳೀಯರಿಂದ ರಕ್ಷಿಸಲ್ಪಟ್ಟ ಅಬ್ದುಲ್ಲಾ ಅವರ ಪತ್ನಿ ಮೈಮುನಾ ಅವರ ಆರೋಗ್ಯ ಸ್ಥಿತಿ ಸ್ಥಿರವಾ ಗಿದ್ದು, ಮಾನಸಿಕ ಆಘಾತಕ್ಕೆ ಒಳಗಾದವರಂತಾಗಿದ್ದಾರೆ. ಘಟನೆ ಯನ್ನು ಕಣ್ಣಾರೆ ಕಂಡಿರುವ ಸಾಹಿನಾ, ಸುಲೈಲಾ ಮತ್ತು ಶೈಮಾ ಅವರೂ ಕೂಡ ತೀವ್ರ ಆಘಾತ ಕ್ಕೊಳಗಾಗಿದ್ದು, ಮೃತರ ಮನೆಗಳಲ್ಲಿ ಗುರುವಾರವೂ ನೀರವ ಮೌನ ಆವರಿಸಿ ವಿಧಿಯ ಕ್ರೂರ ಲೀಲೆಗೆ ಪರಿತಪಿಸುತ್ತಿದ್ದಾರೆ.

ಬಡ ಕುಟುಂಬದ ಆಶಾ 
ಗೋಪುರವೇ ಕುಸಿದು ಬಿತ್ತು
 
ಅಬ್ದುಲ್ಲಾ ಅವರದ್ದು ಬಡ ಕುಟುಂಬವಾಗಿದ್ದು, ಅವರ ಮೇಸಿŒ ಕೆಲಸದಿಂದಾಗಿಯೇ ಇಡೀ ಕುಟುಂಬದ ಜೀವನ ನಿರ್ವಹಣೆ ಯಾಗುತ್ತಿತ್ತು. ಪತ್ನಿ ಮೈಮುನಾ ಅವರು ಮಲ್ಲಾರು ಗ್ರಾ. ಪಂ.ನ ಮಾಜಿ ಸದಸ್ಯರಾಗಿದ್ದು, ಕೂಡು ಕುಟುಂಬದಂತೆ ಎಲ್ಲರೂ ಒಂದಾಗಿ ವಾಸಿಸುತ್ತಿದ್ದರು. ತನ್ನ ಕಣ್ಣೆದುರೇ ಬೆಳೆದು ನಿಂತ ಇಬ್ಬರು ಹೆಣ್ಮಕ್ಕಳು, ಕುಟುಂಬಕ್ಕೆ ಆಶ್ರಯವಾಗಿದ್ದ ಅಳಿಯ ಮತ್ತು ಪಾದರಸದಂತೆ ಚುರುಕಾಗಿದ್ದ ಮೊಮ್ಮಗ ಮೃತಪಟ್ಟ ಸುದ್ದಿ ಕೇಳಿ ಅಬ್ದುಲ್ಲಾ ಅವರು ತೀವ್ರ ಆಘಾತಕ್ಕೊಳಗಾಗಿದ್ದು, ಆಶಾ ಗೋಪುರವೇ ಉದುರಿ ಹೋಯಿ ತಲ್ಲಾ ಎಂದು ಪರಿತಪಿಸಿಸುತ್ತಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next