Advertisement

ಪ್ರಥಮ ದರ್ಜೆ ಕ್ರಿಕೆಟ್‌ಗೆ ಶಾನ್‌ ಮಾರ್ಷ್‌ ವಿದಾಯ

11:16 PM Mar 10, 2023 | Team Udayavani |

ಮೆಲ್ಬರ್ನ್: ಆಸ್ಟ್ರೇಲಿಯದ ಮಾಜಿ ಆರಂಭಿಕ ಆಟಗಾರ ಶಾನ್‌ ಮಾರ್ಷ್‌ ಶುಕ್ರವಾರ ಪ್ರಥಮ ದರ್ಜೆ ಕ್ರಿಕೆಟ್‌ಗೆ ವಿದಾಯ ಘೋಷಿಸಿದರು.
2011ರಲ್ಲಿ ಟೆಸ್ಟ್‌ ಕ್ಯಾಪ್‌ ಧರಿಸಿದ ಶಾನ್‌ ಮಾರ್ಷ್‌, 38 ಪಂದ್ಯಗಳಲ್ಲಿ ಆಡಿದ್ದಾರೆ. ಕೊನೆಯ ಟೆಸ್ಟ್‌ ಆಡಿದ್ದು 2019ರಲ್ಲಿ. ಅದು ಸಿಡ್ನಿಯಲ್ಲಿ ನಡೆದ ಭಾರತದೆದುರಿನ ನ್ಯೂ ಇಯರ್‌ ಟೆಸ್ಟ್‌ ಆಗಿತ್ತು.

Advertisement

ವೆಸ್ಟ್‌ರ್ನ್ ಆಸ್ಟ್ರೇಲಿಯ ಪರ ಶಾನ್‌ ಮಾರ್ಷ್‌ ಅವರದು 22 ವರ್ಷಗಳ ನಂಟು. 2001ರಲ್ಲಿ ಪ್ರಥಮ ದರ್ಜೆ ಕ್ರಿಕೆಟ್‌ಗೆ ಅಡಿಯಿರಿಸಿದ್ದರು. 32 ಶತಕ, 12,811 ರನ್‌ ಇವರ ಸಾಧನೆ ಆಗಿದೆ. ತಂಡದ ನಾಯಕನೂ ಆಗಿದ್ದ ಮಾರ್ಷ್‌, ಕಳೆದ ಸಲ ಶೆಫೀಲ್ಡ್‌ ಶೀಲ್ಡ್‌ ಪ್ರಶಸ್ತಿಯನ್ನು ತಂದಿತ್ತಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next