ಆಳಂದ: ಸರ್ಕಾರಿ ಸೌಲಭ್ಯಗಳನ್ನು ಅರ್ಹರ ಮನೆಬಾಗಿಲಿಗೆ ತಲುಪಿಸಲು ಅಧಿಕಾರಿಗಳು ಶ್ರಮಿಸಬೇಕು ಎಂದು ಜಿಲ್ಲಾ ಉಸ್ತುವಾರಿ ಹಾಗೂ ವೈದ್ಯಕೀಯ ಶಿಕ್ಷಣ ಖಾತೆ ಸಚಿವ ಡಾ| ಶರಣಪ್ರಕಾಶ ಪಾಟೀಲ ಸೂಚಿಸಿದರು. ತಾಲೂಕಿನ ಗಡಿಭಾಗದ ತಡೋಳಾ ಗ್ರಾಮದಲ್ಲಿ ತಾಲೂಕು ಆಡಳಿತ ಹಮ್ಮಿಕೊಂಡಿದ್ದ ಆರೋಗ್ಯ ಕಲ್ಯಾಣ ಶಿಬಿರದಲ್ಲಿ ಫಲಾನುಭವಿಗಳಿಗೆ ಮಾಸಾಶನ ಮಂಜೂರಾತಿ ಪತ್ರ ನೀಡಿ ಅವರು ಮಾತನಾಡಿದರು.
ವಯೋವೃದ್ಧರಿಗೆ ಸಂಧ್ಯಾಸುರûಾ, ಅವಿವಾಹಿತರಿಗೆಮನಸ್ವಿನಿ, ವಿಧವಾ, ಅಂಗವಿಕಲರಿಗೆ, ಹಿರಿಯ ನಾಗರಿಕರಿಗೆ ಬಸ್ ಪಾಸ್, ಮಾಸಿಕ ವೇತನ ಸೇರಿದಂತೆ ಸರ್ಕಾರದ ಯೋಜನೆಗಳನ್ನು ಅರ್ಹ ಫಲಾನುಭವಿಗಳಿಗೆ ತಲುಪಿಸಬೇಕು ಎಂದು ಹೇಳಿದರು.
ರಾಜ್ಯದ ಗಡಿಭಾಗದ ಜನರು ಸರ್ಕಾರದ ಅನೇಕ ಸೌಲಭ್ಯಗಳಿಂದ ವಂಚಿತಗೊಂಡಿರುವುದು ಸರಿಯಲ್ಲ. ಅಧಿಧಿಕಾರಿಗಳ ಮನಸ್ಸು ಮಾಡಿ ಬಡ ಜನರಿಗೆ ಸರ್ಕಾರದ ಸವಲತ್ತುಗಳು ದೊರೆಯುವಂತೆ ನೋಡಿಕೊಳ್ಳಬೇಕು ಎಂದು ಹೇಳಿದರು.
ಶಾಸಕ ಬಿ.ಆರ್. ಪಾಟೀಲ ಮಾತನಾಡಿ, ಕ್ಷೇತ್ರದ 36 ಗ್ರಾಪಂಗಳ ವ್ಯಾಪ್ತಿಯಲ್ಲಿ ಈಗಾಗಲೇ 21 ಕಡೆ ಆರೋಗ್ಯ ಕಲ್ಯಾಣ ಶಿಬಿರ ನಡೆಸಿ ಜನರ ಆರೋಗ್ಯ ತಪಾಸಣೆ ಮಾಡಲಾಗಿದೆ. ಅಲ್ಲದೇ ಅಧಿಧಿಕಾರಿಗಳ ಮೂಲಕ ಮಾಸಾಶನಗಳ ಆದೇಶ ಪತ್ರ ನೀಡಿ ದಲ್ಲಾಳಿಗಳ ಹಾವಳಿಗೆ ಕಡಿವಾಣ ಹಾಕಲಾಗಿದೆ ಎಂದು ಹೇಳಿದರು.
ತಡೋಳಾ, ಖಂಡಾಳ, ಖಂಡಾಳ ತಂಡಾ, ಜಮಗಾ (ಕೆ), ಜಮಗಾ ತಾಂಡಾಕ್ಕೆ ರಸ್ತೆ, ಕುಡಿಯುವ ನೀರು, ಶೌಚಾಲಯ ವ್ಯವಸ್ಥೆ ಮಾಡಲಾಗಿದೆ. ಜನರು ಮನೆಗೊಂದು ಶೌಚಾಲಯ ಕಟ್ಟಿಸಿಕೊಂಡು ಬಯಲು ಶೌಚಮುಕ್ತ ಗ್ರಾಮಕ್ಕಾಗಿ ಶ್ರಮಿಸಬೇಕು. ತಡೋಳಾ ಗ್ರಾಮದಲ್ಲಿ ಕನ್ನಡ ಮಾಧ್ಯಮದಲ್ಲಿನ ಹೆಚ್ಚುವರಿ ಶಾಲಾ ಮತ್ತು ಹಾಲು ಉತ್ಪಾದಕರ ಕೋಣೆ ನಿರ್ಮಿಸಬೇಕು ಎಂದು ಸಚಿವರಿಗೆ ಅವರು ಮನವಿ ಮಾಡಿದರು.
ತಹಶೀಲ್ದಾರ ಬಸವರಾಜ ಎಂ. ಬೆಣ್ಣೆಶಿರೂರ, ಖಜೂರಿ ನಾಡ ತಹಶೀಲ್ದಾರ ಗುರುಲಿಂಗಯ್ಯ ಸ್ವಾಮಿ, ಗ್ರಾಪಂ ಅಧ್ಯಕ್ಷೆ ಅಂಬಿಕಾ ಸೂರ್ಯವಂಶಿ, ಉಪಾಧ್ಯಕ್ಷ ವಿಠಲ ಶಿಂಧೆ, ಮುಖಂಡ ವಿಜಯಕುಮಾರ ರೇಣುಕೆ ಮಾತನಾಡಿದರು. ಇದೇ ಸಂದರ್ಭದಲ್ಲಿ ಮಾಸಾಶನ ಫಲಾನುಭವಿಗಳಿಗೆ ಆದೇಶಪತ್ರ ವಿತರಿಸಲಾಯಿತು.