Advertisement

ಹಿಂದುಳಿದ ಸಮಾಜದ ನಿರೀಕ್ಷೆ ಹೆಚ್ಚು: ಜಾಧವ

11:03 AM Jul 23, 2018 | Team Udayavani |

ಕಲಬುರಗಿ: ಹೈದ್ರಾಬಾದ ಕರ್ನಾಟಕ ಪ್ರದೇಶದಲ್ಲಿ ಬಂಜಾರಾ ಸಮಾಜದಿಂದ ಏಕೈಕ ಶಾಸಕನಾಗಿ ನಾನು ಆಯ್ಕೆಯಾಗಿದ್ದು, ಬಂಜಾರಾ ಸಮಾಜ ಹಾಗೂ ಹಿಂದುಳಿದ ಸಮಾಜ ನನ್ನ ಮೇಲೆ ಅಗಾಧ ನಿರೀಕ್ಷೆ ಇಟ್ಟುಕೊಂಡಿದೆ. ಅವರ ನಿರೀಕ್ಷೆ ಪೂರೈಸುವಂತೆ ಶಕ್ತಿ ನೀಡಲೆಂದು ನಾನು ಭಗವಂತನಲ್ಲಿ ಪ್ರಾರ್ಥಿಸುತ್ತೇನೆ ಎಂದು ಚಿಂಚೋಳಿ ಶಾಸಕ ಡಾ| ಉಮೇಶ ಜಿ.ಜಾಧವ ಹೇಳಿದರು.

Advertisement

ನಗರದ ವೀರಶೈವ ಕಲ್ಯಾಣ ಮಂಟಪದಲ್ಲಿ ಬಂಜಾರಾ ಸರ್ಕಾರಿ, ಅರೆ ಸರ್ಕಾರಿ ನೌಕರರ ಸಂಘ, ಬಂಜಾರಾ ಸಮುದಾಯದ ವಿವಿಧ ಸಂಘಟನೆಗಳ ಒಕ್ಕೂಟದ ವತಿಯಿಂದ ಏರ್ಪಡಿಸಿದ್ದ ಸನ್ಮಾನ ಸ್ವೀಕರಿಸಿ ಅವರು ಮಾತನಾಡಿದರು. ಜಿಲ್ಲೆಯಲ್ಲಿರುವ ಬಂಜಾರಾ ಸಮಾಜ, ಹಿಂದುಳಿದ ಸಮಾಜದವರು ಪಕ್ಷ ಬೇಧ ಮರೆತು ಸನ್ಮಾನ ಮಾಡಿರುವುದು ನನಗೆ ದೊಡ್ಡ ಜವಾಬ್ದಾರಿ ತಂದುಕೊಟ್ಟಿದೆ.
ಸಾರ್ವಜನಿಕರಿಗಾಗಿ ನನ್ನ ಮನೆ ಬಾಗಿಲು ಸದಾ ತೆರೆದಿರುತ್ತದೆ ಎಂದರು.

ಆರ್ಥಿಕವಾಗಿ, ಶೈಕ್ಷಣಿಕವಾಗಿ ಹಾಗೂ ಸಾಮಾಜಿಕವಾಗಿ ಹಿಂದುಳಿದಿರುವ ಬಂಜಾರಾ ಸಮಾಜ ಮುಂದುವರಿಯಬೇಕಾದರೆ ಡಾ| ಬಾಬಾಸಾಹೇಬ್‌ ಅಂಬೇಡ್ಕರ ಹಾಕಿಕೊಟ್ಟಿರುವ ಮಾರ್ಗದರ್ಶನದಲ್ಲಿ ಮುನ್ನಡೆಯಬೇಕು. ಶಿಕ್ಷಣ, ಸಂಘಟನೆ ಮತ್ತು ಹೋರಾಟ ನಮ್ಮ ಧ್ಯೇಯವನ್ನಾಗಿಸಬೇಕು ಎಂದರು.

ಜಿಲ್ಲೆಯಲ್ಲಿರುವ ಬಂಜಾರಾ ಅಧಿಕಾರಿಗಳು ತಮ್ಮ ವ್ಯಾಪ್ತಿಯಲ್ಲಿ ಹಳ್ಳಿ-ಹಳ್ಳಿಗೆ ಪ್ರಯಾಣಿಸಿ ಹಳ್ಳಿ ಮತ್ತು ತಾಂಡಾಗಳಲ್ಲಿ ವಾಸಿಸುವ ಬಡ ಬಂಜಾರಾ ಮತ್ತು ಹಿಂದುಳಿದವರಿಗೆ ಸಹಾಯ ನೀಡುವ ಮೂಲಕ ಅವರನ್ನು ಅಭಿವೃದ್ಧಿ ಪಡಿಸಿ ಮುಖ್ಯವಾಹಿನಿಗೆ ತರುವ ಕೆಲಸ ಮಾಡಬೇಕು ಎಂದು ಹೇಳಿದರು.

ಜಿಲ್ಲಾ ಬಂಜಾರಾ ಸರ್ಕಾರಿ ಮತ್ತು ಅರೆ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಬಿ.ಎನ್‌. ಚವ್ಹಾಣ ಮಾತನಾಡಿ, ಡಾ| ಉಮೇಶ್‌ ಜಾಧವ್‌ ಅವರು ಎರಡು ಬಾರಿ ಶಾಸಕರಾಗಿ ಆಯ್ಕೆಯಾಗಿದ್ದಾರೆ. ಆದ್ದರಿಂದ ಈ ಬಾರಿ ಮಂತ್ರಿಗಳಾಗುತ್ತಾರೆ ಎನ್ನುವ ನಿರೀಕ್ಷೆಯಿತ್ತು ಎಂದರು. ಮುಂದಿನ ದಿನಗಳಲ್ಲಿ ಸಮಾಜದಲ್ಲಿರುವ ವಿದ್ಯಾರ್ಥಿಗಳನ್ನು ಗುರುತಿಸಿ ಪ್ರತಿಭಾ ಪುರಸ್ಕಾರ ಮಾಡಲಾಗುವುದು ಎಂದರು.

Advertisement

ಸೋನ್ಯಾಲಗಿರಿ ಭೇಡಸೂರಿನ ಪರ್ವತಲಿಂಗ ಪರಮೇಶ್ವರ ಮಹಾರಾಜ, ಮುಗುಳನಾಗಾಂವ ಯಲ್ಲಾಲಿಂಗೇಶ್ವರ ಪುಣ್ಯಾಶ್ರಮದ ಜೇಮಸಿಂಗ್‌ ಮಹಾರಾಜ್‌, ಗೊಬ್ಬೂರವಾಡಿ ಶ್ರೀ ಸಂತ ಸೇವಾಲಾಲ ಪುಣ್ಯಾಶ್ರಮದ ಬಳಿರಾಮ ಮಹಾರಾಜ, ಚೌಡಾಪುರ ಶಕ್ತಿಪೀಠದ ಮುರಾಹರಿ ಮಹಾರಾಜ್‌ ಹಾಗೂ ಕೆಸರಟಗಿ ಭಾಗ್ಯವಂತಿ ದೇವಿ ಅವರ ವರಪುತ್ರಿ ಲತಾ ಮಾತಾ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿದ್ದರು. 

ಮುಖಂಡರಾದ ಸುಭಾಷ ವಿ. ರಾಠೊಡ, ಅರವಿಂದ ಚವ್ಹಾಣ, ಹೀರಾಬಾಯಿ ರಾಮಚಂದ್ರ, ಹೀರಾಬಾಯಿ ಬಾಬು ಸೇಠ, ವಿಠ್ಠಲ ಜಾಧವ್‌, ಲತಾ ರವಿ ರಾಠೊಡ, ರೇಣುಕಾ ಅಶೋಕ ಚವಾಣ, ರಾಮಚಂದ್ರ ಜಿ. ಜಾಧವ, ಪ್ರೇಮಕುಮಾರ
ರಾಠೊಡ, ದೇವಲಾ ನಾಯಕ, ಪಿ.ಜಿ. ರಾಠೊಡ, ಛತ್ರು ರಾಠೊಡ, ಎಸ್‌.ಎಂ. ರಾಠೊಡ, ಬಿ.ಬಿ. ನಾಯಕ, ಬಿ.ಎಸ್‌. ಚವ್ಹಾಣ, ಪ್ರೇಮಸಿಂಗ್‌ ಚವ್ಹಾಣ ಮತ್ತಿತರರು ಪಾಲ್ಗೊಂಡಿದ್ದರು. ಸನ್ಮಾನ ಕಾರ್ಯಕ್ರಮಕ್ಕೂ ಮುನ್ನ ನಗರದ ನಗರೇಶ್ವರ ಶಾಲೆಯಿಂದ ಸೂಪರ್‌ ಮಾರ್ಕೆಟ್‌ ಮಾರ್ಗವಾಗಿ ವೀರಶೈವ ಕಲ್ಯಾಣ ಮಂಟಪದವರೆಗೆ ಡಾ|   ಉೃೆುàಶ ಜಾಧವ ಅವರ ಭವ್ಯ ಮೆರವಣಿಗೆ ನಡೆಯಿತು. ಮೆರವಣಿಗೆಯುದ್ದಕ್ಕೂ ಬಂಜಾರಾ ಸಮಾಜದ ಹೆಣ್ಣು ಮಕ್ಕಳು, ಪುರುಷರು ಬಂಜಾರಾ ಶೈಲಿಯ ನೃತ್ಯ ಮಾಡಿದರು.

ಬಂಜಾರಾ ಸಮಾಜವು ಯಾವತ್ತೂ ಪಕ್ಷಕ್ಕೆ ಪ್ರಾಧಾನ್ಯತೆ ನೀಡಿಲ್ಲ. ಎಲ್ಲರಿಗೂ ಸಮಾಜವೇ ಅತ್ಯಂತ ಶ್ರೇಷ್ಠವಾಗಿದೆ. ಸಂಸದ ಡಾ| ಮಲ್ಲಿಕಾರ್ಜುನ ಖರ್ಗೆ ಆತ್ಮೀಯರಾಗಿರುವ ಡಾ| ಉಮೇಶ ಜಾಧವ್‌ ಬಂಜಾರಾ ಸಮಾಜದ ಅಭಿವೃದ್ಧಿಗಾಗಿ ಹಲವಾರು ಕೆಲಸಗಳನ್ನು ಮಾಡಿದ್ದಾರೆ. ದಿವಂಗತ ಧರಂಸಿಂಗ್‌ ಅವರೊಂದಿಗೂ ಉತ್ತಮ ಒಡನಾಟ ಇಟ್ಟುಕೊಂಡಿದ್ದ ಇವರು ಬೀದರ ಜಿಲ್ಲೆಯ ಹುಮ್ನಾಬಾದಿನ ಸೋನ್ಯಾಲಗಿರಿಯಲ್ಲಿ ಟ್ರೆ„ಬಲ್‌ ಪಾರ್ಕ್‌ ನಿರ್ಮಾಣ, ತಾಂಡಾಗಳನ್ನು ಕಂದಾಯ ಗ್ರಾಮಗಳನ್ನಾಗಿ ಪರಿವರ್ತಿಸಲು ಶ್ರಮ, ಗುಲ್ಬರ್ಗಾ ವಿಶ್ವವಿದ್ಯಾಲಯದಲ್ಲಿ ಸೇವಾಲಾಲ ಅಧ್ಯಯನ ಅಧ್ಯಯನ ಪೀಠ ಸ್ಥಾಪನೆ, ಸಂತ ಸೇವಾಲಾಲ ಮಹಾರಾಜರ ಜಯಂತಿ ಆಚರಿಸಲು ಪ್ರಯತ್ನ, ಬಂಜಾರರ ಕಾಶಿ ಎಂದೇ ಪ್ರಖ್ಯಾತವಾಗಿರುವ ಪೌರಾಗಡದಲ್ಲಿ ರೈಲು ನಿಲ್ದಾಣ ಸ್ಥಾಪನೆ ಹಾಗೂ ಶ್ರೀ ಸಂತ ಸೇವಾಲಾಲರ ಜನ್ಮಸ್ಥಳವಾದ ಸೂರಗೊಂಡನಕೊಪ್ಪವನ್ನು ಅಭಿವೃದ್ಧಿ ಪಡಿಸಲು, ತಾಂಡಾಗಳನ್ನು ಅಭಿವೃದ್ಧಿ ಪಡಿಸಲು ತಾಂಡಾ ಅಭಿವೃದ್ಧಿ ನಿಗಮ ಸ್ಥಾಪನೆಗೆ ಪ್ರಯತ್ನಿಸಿದ್ದಾರೆ.   ರೇವು ನಾಯಕ ಬೆಳಮಗಿ, ಮಾಜಿ ಸಚಿವ

Advertisement

Udayavani is now on Telegram. Click here to join our channel and stay updated with the latest news.

Next